ಜನಾರ್ದನ ರೆಡ್ಡಿಗೆ ಶುಕ್ರವಾರ ಸಿಗುತ್ತಾ ಜಾಮೀನು? ಜೈಲೇ ಗತಿನಾ?

Recommended Video

      Janardhana Reddy Ponzi Scam : ಜನಾರ್ಧನ ರೆಡ್ಡಿಗೆ ಇಂದು ನಿರೀಕ್ಷಣಾ ಜಾಮೀನು ಸಿಗುತ್ತಾ? | Oneindia Kannada

      ಬೆಂಗಳೂರು, ನವೆಂಬರ್ 9: ಆಂಬಿಡೆಂಟ್ ಸಂಸ್ಥೆ ಚಿಟ್ ಫಂಡ್ ಹಗರಣ, ಕೋಟ್ಯಂತರ ರೂಪಾಯಿ ಅವ್ಯವಹಾರ ಮತ್ತು 57 ಕೆಜಿ ಚಿನ್ನದ ಗಟ್ಟಿ ಕಿಕ್ ಬ್ಯಾಕ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜನಾರ್ದನ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು ಇಂದು(ಶುಕ್ರವಾರ) ಜಾಮೀನು ಸಿಗುವ ಸಾಧ್ಯತೆಗಳಿದೆ.

      ದೀಪಾವಳಿ ಹಬ್ಬದ ನಿಮಿತ್ತ ಗುರುವಾರ ನ್ಯಾಯಾಲಯಕ್ಕೆ ರಜೆ ಇತ್ತು. ಹಾಗಾಗಿ ಶುಕ್ರವಾರ ನಿರೀಕ್ಷಣಾ ಜಾಮೀನು ಕೋರಿ ಅವರ ಪರ ವಕೀಲರು ಸೆಷನ್ ಕೋರ್ಟ್​ ಮೆಟ್ಟಿಲೇರಲಿದ್ದಾರೆ ಎನ್ನಲಾಗಿದೆ. ಆಂಬಿಡೆಂಟ್ ಚಿಟ್‌ ಫಂಡ್ ವ್ಯವಹಾರದಲ್ಲಿ 950 ಕೋಟಿ ಗೂ ಹೆಚ್ಚು ಹಣವನ್ನು ಮೋಸ ಮಾಡಲಾಗಿದೆ.
      ಬೆಳಗ್ಗೆ ಅರ್ಜಿ ಸಲ್ಲಿಕೆಯಾದರೆ, ಮಧ್ಯಾಹ್ನ 3 ಗಂಟೆ ವೇಳೆಗೆ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಸದ್ಯ ರೆಡ್ಡಿಗಾಗಿ ಎಲ್ಲಕಡೆ ಹುಡುಕಾಟ ನಡೆಸಲಾಗುತ್ತಿದೆ.

      ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಇಂದು ಅಲಿಖಾನ್ ವಿಚಾರಣೆ ನಡೆಯಲಿದೆ. ಸಂಜೆ ಒಳಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಆದರೆ, ಅಲಿಖಾನ್ ಮುಂಬಯಿನಲ್ಲಿರುವ ಶಂಕೆ ಇದೆ. ಹೀಗಾಗಿ ಅವರು, ನ್ಯಾಯಾಲಯಕ್ಕೆ ಹಾಜರಾಗುತ್ತಾರಾ ಅಥವಾ ಇಲ್ಲವಾ ಎನ್ನುವ ಕುತೂಹಲ ಮೂಡಿದೆ.

      ಆಂಬಿಡೆಂಟ್ ಕಂಪನಿಯು ಹೂಡಿಕೆದಾರರಿಗೆ ಹಣ ವಂಚನೆ ಮಾಡಿದೆ. ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸಿಸಿಬಿ ಮಾಡದೆ ಪ್ರಕರಣಕ್ಕೆ ಸಂಬಂಧವಿಲ್ಲದ ಜನಾರ್ದನರೆಡ್ಡಿ ಹಿಂದೆ ಬಿದ್ದಿದೆ ಎಂದು ಜನಾರ್ದನ ರೆಡ್ಡಿ ಪರ ವಕೀಲರು ತಿಳಿಸಿದ್ದಾರೆ. ಆಂಬಿಡೆಂಟ್ ಕಂಪನಿಯ ಪ್ರಮುಖ ಆರೋಪಿಗೂ ಜಾಮೀನು ದೊರೆತಿದೆ ಜನಾರ್ದನ ರೆಡ್ಡಿ ಕೇವ ಮೇಲ್ನೋಟಕ್ಕೆ ಅಪರಾಧಿಯಾಗಿದ್ದಾರೆ ಅವರಿಗೆ ಜಾಮೀನು ಸಿಕ್ಕೇ ಸಿಗುತ್ತದೆ ಎಂದು ಹೇಳಿದ್ದಾರೆ.

      ಜನಾರ್ದನ ರೆಡ್ಡಿ ಹೈದರಾಬಾದ್‌ನಲ್ಲಿ ಇಲ್ಲ

      ಜನಾರ್ದನ ರೆಡ್ಡಿ ಹೈದರಾಬಾದ್‌ನಲ್ಲಿ ಇಲ್ಲ

      ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಹುಡುಕುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹೈದರಾಬಾದಿನಲ್ಲಿ ಅಡಗಿ ಕುಳಿತಿದ್ದಾರೆ ಎಂದು ತಪ್ಪು ಸುದ್ದಿಗಳು ಹರಿದಾಡುತ್ತಿದ್ದವು. ಜನಾರ್ದನ ರೆಡ್ಡಿ ಹೈದರಾಬಾದಿನಲ್ಲಿಲ್ಲ ಎಂದು ಸಿಸಿಬಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಜನಾರ್ದನ ರೆಡ್ಡಿ ಅವರು ತಮ್ಮ ಮೊಬೈಲ್ ಅನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದು, ನಿರೀಕ್ಷಣಾ ಜಾಮೀನಿಗಾಗಿ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ.

      ಜನಾರ್ದನ ರೆಡ್ಡಿಗೆ ಜಾಮೀನು ಸಿಕ್ಕೇ ಸಿಗುತ್ತೆ

      ಜನಾರ್ದನ ರೆಡ್ಡಿಗೆ ಜಾಮೀನು ಸಿಕ್ಕೇ ಸಿಗುತ್ತೆ

      ಜನಾರ್ದನ ರೆಡ್ಡಿಗೆ ಜಾಮೀನು ಸಿಗುವುದು ಗ್ಯಾರಂಟಿ ಎಂದು ಜನಾರ್ದನ ರೆಡ್ಡಿ ಪರ ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಜನಾರ್ದನ ರೆಡ್ಡಿ ಯಾವುದೇ ತಪ್ಪಿ ಮಾಡಿಲ್ಲ ಆಂಬಿಡಂಟ್ ಕಂಪನಿ ಜನರಿಗೆ ವಂಚನೆ ಮಾಡಿದೆ ಎಂದು ಹೇಳಿದ್ದಾರೆ.ಆಂಬಿಡೆಂಟ್ ಕಂಪೆನಿಯ ಪ್ರಮುಖ ಆರೋಪಿ ಫರೀದ್‌ಗೆ ಜಾಮೀನು ದೊರೆತಿದೆ, ದಸ್ತಗಿರಿ ಆಗಿದ್ದ ರಮೇಶ್‌ಗೂ ಜಾಮೀನು ದೊರೆತಿದೆ. ರೆಡ್ಡಿ ಅವರು ಮೇಲ್ನೋಟದ ಅಪರಾಧಿ ಮಾತ್ರ ಆಗಿರುವ ಕಾರಣ ರೆಡ್ಡಿ ಅವರಿಗೆ ನಿರೀಕ್ಷಣಾ ಜಾಮೀನು ದೊರಕುತ್ತದೆ ಎಂದು ವಕೀಲ ಚಂದ್ರಶೇಖರ್ ಭರವಸೆ ವ್ಯಕ್ತಪಡಿಸಿದ್ದಾರೆ.

      ರೆಡ್ಡಿ ಹುಡುಕಾಟದಲ್ಲಿ ಸರ್ಕಾರದ ಪಾತ್ರವಿಲ್ಲ

      ರೆಡ್ಡಿ ಹುಡುಕಾಟದಲ್ಲಿ ಸರ್ಕಾರದ ಪಾತ್ರವಿಲ್ಲ

      ಜನಾರ್ದನ ರೆಡ್ಡಿ ಹುಡುಕಾಟದಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ,ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದರು, ಕಾನೂನು ಪ್ರಕಾರ ಏನು ಕ್ರಮ ಆಗಬೇಕಿದೆಯೋ ಅದು ಆಗಿಯೇ ತೀರುತ್ತದೆ ಎಂದು ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

      ಆಂಬಿಡೆಂಟ್ ಕಂಪನಿಗೂ ನನಗೂ ಯಾವುದೇ ಸಂಬಂಧವಿಲ್ಲ

      ಆಂಬಿಡೆಂಟ್ ಕಂಪನಿಗೂ ನನಗೂ ಯಾವುದೇ ಸಂಬಂಧವಿಲ್ಲ

      ನನಗೂ ಆಂಬಿಡೆಂಟ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ, ಆ ಸಂಸ್ಥೆಯವರು ನನ್ನನ್ನು ಮೊಬೈಲ್ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಅಷ್ಟೇ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ರಾಮಲಿಂಗಾರೆಡ್ಡಿಗೆ ಆಂಬಿಡೆಂಟ್ ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯ ಇದೆ ಎನ್ನುವ ಕುರಿತು ಸಾಕಷ್ಟು ಚರ್ಚೆಯಾಗಿರುವ ಕುರಿತು ಸ್ಪಷ್ಟನೆ ನೀಡಿರುವ ಅವರು ಆ ಸಂಸ್ಥೆಯವರು ಒಂದು ನೂತನ ಮೊಬೈಲ್ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿಸಿದ್ದರು ಸಚಿವನಾಗಿದ್ದ ನಾನು ಆ ಕಾರ್ಯಕ್ರಮಕ್ಕೆ ಹೋಗಿದ್ದೆ, ನನಗೂ ಆ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+