ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಪಿಎಲ್ 7 : ಶ್ರೇಷ್ಠ XI ಒನ್ ಇಂಡಿಯಾ ಆಯ್ಕೆ

By Mahesh
|
Google Oneindia Kannada News

ಬೆಂಗಳೂರು, ಜೂ.2: ಈ ಬಾರಿಯ ಐಪಿಎಲ್ ಕಳ್ಳಾಟದ ಕರಿ ನೆರಳಿನಿಂದ ಬಚಾವಾಗಿ ಹೊಸ ಪ್ರತಿಭೆಗಳ ಉದಯಕ್ಕೆ ಕಾರಣವಾಯಿತು ಎನ್ನಬಹುದು. ಅಪ್ಪಟ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ನ ಅಸಲಿ ಮಜಾವನ್ನು ಅನುಭವಿಸಿದ್ದಲ್ಲದೆ, ಇದುವರೆವಿಗೂ ಕಾಣದ ರೋಚಕತೆಯನ್ನು ಅಂತಿಮ ಹಣಾಹಣಿಯಲ್ಲಿ ಅನುಭವಿಸಿದರು.

ಐಪಿಎಲ್ ನಲ್ಲಿ ಹಲವಾರು ಕ್ರಿಕೆಟರ್ ಗಳ ವೈಯಕ್ತಿಕ ದಾಖಲೆಗಳು ಮನಸಿನಲ್ಲಿ ಉಳಿಯುತ್ತದೆ. ಭಾನುವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕದ ಮನೀಶ್ ಪಾಂಡೆ ಕೋಲ್ಕತ್ತಾ ಪರ ಬ್ಯಾಟ್ ಬೀಸಿ ಗಳಿಸಿದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಮರೆಯಲು ಸಾಧ್ಯವಿಲ್ಲ.

ಕಿಂಗ್ಸ್ XI ಪಂಜಾಬ್ ಪರ ನಿರೀಕ್ಷಿತ ಸ್ಟಾರ್ ಗಳು ಟುಸ್ ಆದರೂ ಮನನ್ ವೋರಾ, ವೃದ್ಧಿಮಾನ್ ಸಹಾ ರಂಥ ದೇಸಿ ಪ್ರತಿಭೆಗಳು ತಮ್ಮ ಅದ್ಭುತ ಆಟದ ಮೂಲಕ ಗಮನ ಸೆಳೆದರು. ಇನ್ನು ಟೂರ್ನಿಯುದ್ಧಕ್ಕೂ ಉತ್ತಮ ಲಯ ಕಂಡುಕೊಂಡ ರಾಬಿನ್ ಉತ್ತಪ್ಪ ಆರೇಂಜ್ ಕ್ಯಾಪ್ ಜತೆಗೆ ಐಪಿಎಲ್ 7 ಕಪ್ ಎತ್ತಿ ಹೊಸ ದಾಖಲೆ ಬರೆದರು. [ಏನಿದು ದಾಖಲೆ? ಇಲ್ಲಿ ಓದಿ]

ಪ್ರತಿಭೆಗಳಿಗೆ ಸೂಕ್ತವೇದಿಕೆ ಒದಗಿಸಿರುವ ಐಪಿಎಲ್ ಟೂರ್ನಿಯಿಂದ ಹೊಸ ಪ್ರತಿಭೆಗಳು ಹೊರ ಹೊಮ್ಮಿದೆ. ಈಗ ಶ್ರೇಷ್ಠ ತಂಡವನ್ನು ಆಯ್ಕೆ ಮಾಡುವ ಸರದಿ. ಆಟಗಾರರ ಆಯ್ಕೆ ಸುಲಭವಾದರೂ ನಾಯಕನ ಆಯ್ಕೆ ಕಷ್ಟಕರ, ಎಂಎಸ್ ಧೋನಿ, ಜಾರ್ಜ್ ಬೈಲಿ ಹಿಂದಿಕ್ಕಿ ಅಂತಿಮ XI ಗೆ ನಾಯಕರಾಗುವಲ್ಲಿ ಗೌತಮ್ ಗಂಭೀರ್ ಸಫಲರಾಗಿದ್ದಾರೆ. ಇನ್ನೇಕೆ ತಡ ದಟ್ಸ್ ಕ್ರಿಕೆಟ್ ಆಯ್ಕೆ ಮಾಡಿರುವ ಅಂತಿಮ XI ಇಂತಿದೆ, ನಿಮ್ಮ ಅಯ್ಕೆಯನ್ನು ಕಾಮೆಂಟ್ ಮಾಡುವ ಮೂಲಕ ತಪ್ಪದೇ ತಿಳಿಸಿ.[ಐಪಿಎಲ್ 2013: ಶ್ರೇಷ್ಠ ‍XI]

ಐಪಿಎಲ್ 7 : ಆಯ್ಕೆ ಮಾನದಂಡ ಹೀಗಿದೆ

ಐಪಿಎಲ್ 7 : ಆಯ್ಕೆ ಮಾನದಂಡ ಹೀಗಿದೆ

ಐಪಿಎಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಹಲವಾರು ದೇಸಿ ಪ್ರತಿಭೆಗೆ ಅವಕಾಶ ಸಿಕ್ಕಿದೆ. ಶ್ರೇಷ್ಠ ತಂಡ ಆಯ್ಕೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸಿಂಹ ಪಾಲು ಪಡೆದುಕೊಂಡಿದೆ. ಸಿಎಸ್ ಕೆ 4 ಆಟಗಾರರು ಆಯ್ಕೆಯಾಗಿದ್ದರೆ, ಕೂಲ್ ಕ್ಯಾಪ್ಟನ್ ಧೋನಿ ಸ್ವಲ್ಪದರಲ್ಲಿ ತಂಡದಿಂದ ಮಿಸ್ ಆಗಿದ್ದಾರೆ.

ಉಳಿದಂತೆ ಆರ್ ಸಿಬಿ ಏಕೈಕ ಆಟಗಾರ, ಕಿಂಗ್ಸ್ XI ಪಂಜಾಬಿನ ಒಬ್ಬ ಆಟಗಾರ, ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಲಾ ಒಬ್ಬ ಅಟಗಾರರನ್ನು ಆರಿಸಲಾಗಿದೆ. ಕಪ್ ಗೆದ್ದ ಕೆಕೆಅರ್ ಇಂದ 3 ಜನ ಆಯ್ಕೆಯಾಗಿದ್ದಾರೆ. ಆಟಗಾರರ ಆಯ್ಕೆಗೆ ಅವರು ನೀಡಿದ ಪ್ರದರ್ಶನವೇ ಮಾನದಂಡವಾಗಿದೆ.12 ನೇ ಆಟಗಾರನಾಗಿ ಪಂಜಾಬಿನ ಅಕ್ಷರ್ ಪಟೇಲ್ (17 ವಿಕೆಟ್ ಅಯ್ಕೆ) 1 ರಿಂದ 11 ರ ತನಕ ಮುಂದೆ ಓದಿ
ಶ್ರೇಷ್ಠ ತಂಡದ ವಿಕೆಟ್ ಕೀಪರ್

ಶ್ರೇಷ್ಠ ತಂಡದ ವಿಕೆಟ್ ಕೀಪರ್

ರಾಬಿನ್ ಉತ್ತಪ್ಪ ( ವಿಕೆಟ್ ಕೀಪರ್, ಕೆಕೆಆರ್ 660 ರನ್, ಆರೇಂಜ್ ಕ್ಯಾಪ್ ಧಾರಿ)

ಸಿಎಸ್ ಕೆ ನಿಂದ ಆರಂಭಿಕ ಆಟಗಾರ

ಸಿಎಸ್ ಕೆ ನಿಂದ ಆರಂಭಿಕ ಆಟಗಾರ

ಡ್ವಾಯ್ನೆ ಸ್ಮಿತ್ (ಓಪನರ್, ಸಿಎಸ್ ಕೆ 566 ರನ್, ಅತಿಹೆಚ್ಚು ರನ್ ಗಳಿಕೆ ಎರಡನೇ ಸ್ಥಾನ)

ತಂಡದ ನಾಯಕನಾಗಿ ಗೌತಮ್ ಗಂಭೀರ್

ತಂಡದ ನಾಯಕನಾಗಿ ಗೌತಮ್ ಗಂಭೀರ್

ದುಬೈನಿಂದ ಭಾರತಕ್ಕೆ ಬಂದ ಮೇಲೆ ಸತತವಾಗಿ ಕೆಕೆಆರ್ ಗೆಲುವಿಗೆ ಕಾರಣರಾದವರಲ್ಲಿ ಗಂಭೀರ್ ನಾಯಕತ್ವವೂ ಪ್ರಮುಖವಾಗಿದೆ, ಈ ಬಾರಿ 335 ರನ್ ಗಳಿಸಿದ್ದಾರೆ.

ಟೂರ್ನಿ ಕೊನೆ ಗಳಿಗೆಯಲ್ಲಿ ಮಂಕಾದ ಮ್ಯಾಕ್ಸಿ

ಟೂರ್ನಿ ಕೊನೆ ಗಳಿಗೆಯಲ್ಲಿ ಮಂಕಾದ ಮ್ಯಾಕ್ಸಿ

ಟೂರ್ನಿ ಕೊನೆ ಗಳಿಗೆಯಲ್ಲಿ ಮ್ಯಾಕ್ಸ್ ವೆಲ್ ಮಂಕಾದರೂ ಕಿಂಗ್ಸ್ XI ಪಂಜಾಬಿಗೆ ಹೊಸ ಹುರುಪು ತಂದ ಆಸ್ಟ್ರೇಲಿಯನ್ ಆಟಗಾರ. 552 ರನ್ ಗಳಿಸಿ ಆರಂಭದಲ್ಲಿ ಆರೇಂಜ್ ಕ್ಯಾಪ್ ಧರಿಸಿದ್ದರು. ಮೂರನೇ ಅತ್ಯಧಿಕ ರನ್ ಗಳಿಕೆ

ಐಪಿಎಲ್ ಗಾಗಿ ತಯಾರಾದ ಎಡಗೈ ಆಟಗಾರ

ಐಪಿಎಲ್ ಗಾಗಿ ತಯಾರಾದ ಎಡಗೈ ಆಟಗಾರ

ಐಪಿಎಲ್ ಗಾಗಿ ತಯಾರಾದ ಎಡಗೈ ಆಟಗಾರ ಎನಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಧಾರ ಶಕ್ತಿ ಸುರೇಶ್ ರೈನಾ 523 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು.

ಎರಡನೇ ವಿಕೆಟ್ ಕೀಪರ್ ಆಗಿ ಎಬಿಡಿ

ಎರಡನೇ ವಿಕೆಟ್ ಕೀಪರ್ ಆಗಿ ಎಬಿಡಿ

ತಂಡದಲ್ಲಿ ಎರಡನೇ ವಿಕೆಟ್ ಕೀಪರ್ ಹಾಗೂ ಬ್ಯಾಟಿಂಗ್ ಆರ್ಡರ್ ನಲ್ಲಿ ವೈವಿಧ್ಯತೆ ನೀಡಲು ಎಬಿ ಡಿವಿಲೆಯರ್ಸ್ ಆಯ್ಕೆ 395 ರನ್ ಗಳಿಕೆ

ರವೀಂದ್ರ ಜಡೇಜ ಆಲ್ ರೌಂಡರ್

ರವೀಂದ್ರ ಜಡೇಜ ಆಲ್ ರೌಂಡರ್

ಸಿಎಸ್ ಕೆ ಆಟಗಾರ ರವೀಂದ್ರ ಜಡೇಜ ಆಲ್ ರೌಂಡರ್ ಹಾಗೂ ಮ್ಯಾಚ್ ಫಿನಿಷರ್ ಆಗಿ ಆಯ್ಕೆ, 19 ವಿಕೆಟ್ 146 ರನ್ ಗಳಿಕೆ

ತಂಡದ ಪ್ರಮುಖ ವೇಗಿ ಕುಮಾರ್

ತಂಡದ ಪ್ರಮುಖ ವೇಗಿ ಕುಮಾರ್

ಸಂದೀಪ್ ಸಿಂಗ್ ಜತೆ ಪೈಪೋಟಿ ನಡೆಸಿ ತಂಡಕ್ಕೆ ಆಯ್ಕೆಯಾದ ಹೈದರಾಬಾದ್ ತಂಡದ ಭುವನೇಶ್ವರ್ ಕುಮಾರ್ 20 ವಿಕೆಟ್ ಕಬಳಿಸಿದ್ದಾರೆ.

ದೇಶಕ್ಕಿಂತ್ ಕ್ಲಬ್ ಮುಖ್ಯ ಎಂದ ಸುನಿಲ್

ದೇಶಕ್ಕಿಂತ್ ಕ್ಲಬ್ ಮುಖ್ಯ ಎಂದ ಸುನಿಲ್

ದೇಶಕ್ಕಿಂತ್ ಕ್ಲಬ್ ಮುಖ್ಯ ಎಂದ ವೆಸ್ಟ್ ಇಂಡೀಸ್ ನ ಸುನಿಲ್ ನರೇನ್ ಅವರು ಕೆಕೆಆರ್ ಪರ ಆಡಿ 21 ವಿಕೆಟ್ ಕಿತ್ತಿದ್ದಾರೆ.

ಪ್ರಮುಖ ವೇಗಿ ಮೋಹಿತ್ ಶರ್ಮ

ಪ್ರಮುಖ ವೇಗಿ ಮೋಹಿತ್ ಶರ್ಮ

ಸಿಎಸ್ ಕೆ ಆಟಗಾರ ಪರ್ಪಲ್ ಕ್ಯಾಪ್ ವಿಜೇತ ಮೋಹಿತ್ ಶರ್ಮ 23 ವಿಕೆಟ್ ಕಿತ್ತ ಸಾಧನೆ ಮಾಡಿ ಆಯ್ಕೆಯಾಗಿದ್ದಾರೆ.

ಲಂಕನ್ ವೇಗಿ ಲಸಿಂತ್ ಮಾಲಿಂಗ

ಲಂಕನ್ ವೇಗಿ ಲಸಿಂತ್ ಮಾಲಿಂಗ

ಲಂಕನ್ ವೇಗಿ ಲಸಿಂತ್ ಮಾಲಿಂಗ ಈ ಬಾರಿ ಹೆಚ್ಚಿನ ಕಮಾಲ್ ತೋರಿಸದಿದ್ದರೂ ಎದುರಾಳಿಗೆ ಭಯ ಹುಟ್ಟಿಸಬಲ್ಲ ಬೌಲರ್ ಮುಂಬೈ ಇಂಡಿಯನ್ ವೇಗಿ 16 ವಿಕೆಟ್ ಕಿತ್ತಿದ್ದಾರೆ.

English summary
There were some exceptional performances during the seventh edition of the Indian Premier League (IPL 7) which concluded last night here at M Chinnaswamy Stadium, Bangalore. Here, we Oneindia.in have picked the "Best XI" of the tournament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X