Get Updates
Get notified of breaking news, exclusive insights, and must-see stories!

IPL ವಿಐಪಿ ಟಿಕೆಟ್ ದುರ್ಬಳಕೆ ಆಗಿಲ್ಲ: ಶಾಸಕರ ಕುಟುಂಬಸ್ಥರು ಪಂದ್ಯ ನೋಡಿದರೆ ತಪ್ಪೇನು; ಪರಮೇಶ್ವರ್ ಪ್ರಶ್ನೆ

ಬೆಂಗಳೂರು: ಟಾಟಾ ಟಿ20 ಐಪಿಎಲ್ 2026 ನೊಡಲು ವಿಐಪಿ ಟಿಕೆಟ್ ವಿಚಾರ ಭಾರಿ ಸದ್ದು ಮಾಡಿತ್ತು. ಇದೀಗ ಆ ಟಿಕೆಟ್‌ಗಳನ್ನು ಪಡೆದ ಶಾಸಕರು, ನಾಯಕರ ಬದಲಾಗಿ ಬೇರೆಯವರು ಪಂದ್ಯ ನೋಡಲು ಹೋಗಿದ್ದಾರೆಂಬ ಆರೋಪ ಕೇಳಿ ಬಂದಿದೆ. 'ಆನ್‌ಲೈನ್‌ನಲ್ಲಿ ಟಿಕೆಟ್ ತೆಗೆದುಕೊಂಡವರು ನೋಡಲು ಬಂದಿದ್ದಾರೆ. ಅವರನ್ನು ಕಂಟ್ರೋಲ್ ಮಾಡಲು ಆಗುತ್ತಾ?, ಟಿಕೆಟ್ ದುರ್ಬಳಕೆ ಆಗಿಲ್ಲ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದ್ದಾರೆ.

ಸೋಮವಾರ ಐಪಿಎಲ್ ಟಿಕೆಟ್ ವಿಚಾರ ಸೇರಿದಂತೆ ಉಪ ಚುನಾವಣೆ, ದ್ವಿಭಾಷಾ ನೀತಿ ಸೇರಿ ಇನ್ನಿತರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಶಾಸಕರಿಗೆ ನೀಡಿದ್ದ ಐಪಿಎಲ್ ಟಿಕೆಟ್ ನಲ್ಲಿ ಬೇರೆಯವರು ಬಂದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಅವರು ಆನ್ ಲೈನ್ ತೆಗೆದುಕೊಳ್ಳುತ್ತಾರೆ. ಆನ್ ಲೈನ್ ನಲ್ಲಿ ಟಿಕೆಟ್ ತೆಗೆದುಕೊಂಡವರು ಪಂದ್ಯ ನೋಡಲು ಬಂದಿದ್ದಾರೆ. ಆನ್ ಲೈನ್ ನಾವು ಕಂಟ್ರೋಲ್ ಮಾಡಲು ಆಗಲ್ಲ. ಟಿಕೆಟ್ ವಿಚಾರದಲ್ಲಿ ದುರ್ಬಳಕೆ ಆಗಿಲ್ಲ. ಶಾಸಕರು ಹೋಗಬಹುದು, ಅವರ ಕುಟುಂಬದದವರು ಹೋಗಬಹುದು. ಅದರಲ್ಲಿ ನಾವು ತಪ್ಪು ಕಂಡು ಹಿಡಿಯಬಾರದೆಂದು ತಿಳಿಸಿದರು.

IPL 2026 VIP Ticket Row

ವಿಐಪಿ ಟಿಕೆಟ್‌ನಲ್ಲಿ 'ನಾಟ್ ಟ್ರಾನ್ಸ್ ಪರೇಬಲ್' ಎಂದು ಬರೆದಾಗ ಬೇರೆಯವರು ಹೋಗೋಕೆ ಆಗಲ್ಲ. ಹೀಗೆ ಕಂಡೀಷನ್ ಹಾಕಿದ್ರೆ ನೀಡುವುದಿಲ್ಲ. ಓಪನ್ ಇದ್ದಲ್ಲಿ ಸ್ನೇಹಿತರು, ಕುಟುಂಬದ ದವರು ಹೋಗಬಹುದೆಂದು ಅವರು ಪುನರುಚ್ಚರಿಸಿದರು.

ಆಂಧ್ರ ಚುನಾವಣೆಯಲ್ಲಿ 'ಮತಗಳ್ಳತನ'ಕ್ಕೆ ಇದೇ ಸಾಕ್ಷಿ: ಒಂದೇ ರಾತ್ರಿಯಲ್ಲಿ ಶೇ.13% ಮತ ಹೆಚ್ಚಳಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ
ಆಂಧ್ರ ಚುನಾವಣೆಯಲ್ಲಿ 'ಮತಗಳ್ಳತನ'ಕ್ಕೆ ಇದೇ ಸಾಕ್ಷಿ: ಒಂದೇ ರಾತ್ರಿಯಲ್ಲಿ ಶೇ.13% ಮತ ಹೆಚ್ಚಳಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ

ವಿಶೇಷ ಸಚಿವ ಸಂಪುಟ ಸಭೆ ವಿಚಾರ ಸಿಎಂಗೆ ಬಿಟ್ಟದ್ದು

ಎಸ್ಸಿ, ಎಸ್ ಟಿ ಪಂಗಡವನ್ನು ಬಿಜೆಪಿ ಅವರು ಒಡೆದಿದ್ದಾರೆ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದರು ಯಾರು?. ಅದಕ್ಕಾಗಿ ನಾನು ಹೇಳಿದ್ದು. ಈ ಹಿಂದೆ ಸದಾಶಿವ ಆಯೋಗ ವರದಿ ತಿರಸ್ಕೃರಿಸಿದ್ದರು. ಕೆಲವು ವಿಚಾರಗಳಲ್ಲಿ ಗೊಂದಲ ಕುರಿತು ನಾನು ಹೇಳಿದ್ದೇನೆ. ಉಪ ಚುನಾವಣೆ ಮೇಲೆ ಪ್ರಭಾವ ಉಂಟಾಗುತ್ತದೆ ಎಂಬ ವಿಚಾರದಲ್ಲಿ ಅಲ್ಲ. ಇನ್ನೂ ವಿಶೇಷ ಸಚಿವ ಸಂಪುಟ ಸಭೆ ನಡೆಸುವುದು ಮುಂದೂಡಿಕೆ ಆಗಿದೆ. ಮುಮದಿ ಯಾವಾಗ ಸಚಿವ ಸಂಪುಟ ಸಭೆ ಆಗುತ್ತದೆ, ಸಂಪುಟ ಸಭೆ ಕರೆಯುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಟ್ಟದ್ದು ಎಂದರು.

ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ದ್ವಿಭಾಷಾ ನೀತಿ ವಿಷಯಕ್ಕೆ ರಾಜ್ಯಪಾಲರು ಆಕ್ರೋಶ ಹೊರ ಹಾಕಿದ್ದು, ಕೆಲವೆಡೆ ಪ್ರತಿಭಟನೆ ನಡೆದಿವೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದೆಲ್ಲ ಹೊಸದೇನಲ್ಲ. ನಾವು ಶಾಲೆಯಲ್ಲಿದ್ದಾಗ ನಮ್ಮಿಂದಲೇ ಕೂಗಿಸುತ್ತಿದ್ದರು. ಸ್ಥಳೀಯ ಭಾಷೆಗೆ ಪ್ರಾತಿನಿಧ್ಯ ಸಿಗಬೇಕು ಎನ್ನುವುದು ಮೊದಲಿನಿಂದಲೂ ಇದೆ ಎಂದು ಸ್ಪಷ್ಟಪಡಿಸಿದರು.

ಜನಸಂಖ್ಯೆ ಆಧಾರದಲ್ಲಿ ಸಂಸದರ ಸ್ಥಾನ ಏರಿಕೆ ಬೇಡ

ಲೋಕಸಭೆ ಸ್ಥಾನಗಳ ಏರಿಕೆ ವಿಷದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ ಪ್ರಶ್ನೆಗೆ ಅವರು, ಜನಸಂಖ್ಯೆ ಆಧಾರದ ಮೇಲೆ ಸಂಸದರ ಸ್ಥಾನಗಳ ಏರಿಕೆ ಬೇಡ. ಫ್ಯಾಮಿಲಿ ಪ್ಲಾನಿಂಗ್ ವಿಷಯದಲ್ಲಿ ದಕ್ಷಿಣ ಭಾರತದ ರಾಜ್ಯಗಳುಕಠಿಣ ಹೆಜ್ಜೆ ಇಟ್ಟಿವೆ. ಅದರ ಆಧಾರದ ಮೇಲೆ‌ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರ ಮಾನದಂಡ ಇರುವುದುಜನಸಂಖ್ಯೆ ಆಧಾರದಲ್ಲಿ, ಅನ್ಯಾಯ ಆಗಬಾರದು ಎನ್ನುವುದು ನಮ್ಮ ಇಚ್ಛೆ ಕೂಡ ಅಗಿದೆ ಎಂದರು.

ಏನೂ ಬೇಕಾದರೂ ಹೇಳಬಹುದು. ಆದರೆ ಅಡುಗೆ ಅನಿಲ ವಿಚಾರದಲ್ಲಿ ಎಲ್ಲ ರಾಜ್ಯಗಳಿಗೆ ನೀಡಿದಂತೆ ಕರ್ನಾಟಕಕ್ಕೂ ಪೂರೈಸಬೇಕು. ನಮಗೆ ಗ್ಯಾಸ್, ತೈಲ ಬೇಕು ಎಂದರು. ಇನ್ನೂ ಕಾಳ ಸಂತೆಯಲ್ಲಿ ಅನಿಲ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವ ವಿರುದ್ಧ ಕೇಸ್ ದಾಖಲಾಗಿದೆ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಉಪಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ, ಬಾಗಲಕೋಟೆ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಸರ್ಕಾರ ಏನು ಕೆಲಸ ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ನಾವು ಜನರ ಪರ ಕೆಲಸ ಮಾಡಿದ್ದೇವೆ. ಕಳೆದ ಮೂರು ವರ್ಷಗಳಿಂದ ಆಡಳಿತ ಮಾಡಿಕೊಂಡು ಬಂದಿದ್ದೇವೆ. ನಾವು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+