'ಭಾರತೀಯ ಜವಳಿ ವಿನ್ಯಾಸಕ್ಕೆ ಹೆಚ್ಚಿನ ಬೇಡಿಕೆ': Invest Karnataka 2025
ಬೆಂಗಳೂರು, ಫೆಬ್ರವರಿ 13: ಭಾರತದ ಮೂಲೆ ಮೂಲೆಯಲ್ಲೂ ವೈವಿಧ್ಯಮಯ ಪಾರಂಪರಿಕ ಕುಶಲಕಲೆಗಳಿವೆ. ಫ್ಯಾಷನ್ ವಲಯಕ್ಕೆ ಹೆಚ್ಚಿನ ಅವಕಾಶಗಳಿವೆ. ಭಾರತೀಯ ಮಹಿಳೆಯರು ಧರಿಸುವ ಸೀರೆ ಸೌಂದರ್ಯ, ಆತ್ಮವಿಶ್ವಾಸ ಮತ್ತು ದೃಢತೆಯ ಸಂಕೇತವಾಗಿದೆ ಎಂದು ಖ್ಯಾತ ವಸ್ತ್ರ ವಿನ್ಯಾಸಕಿ ಅನಾವಿಲಾ ಮಿಶ್ರಾ ಗುರುವಾರ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
'ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್-25)'ದಲ್ಲಿ 'ಪರಂಪರೆಯಿಂದ ಮಾರುಕಟ್ಟೆ ಸಂಸ್ಕೃತಿಗೆ' ಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೀರೆ ಮನೆಯಲ್ಲಿ ಧರಿಸುವ ದೈನಂದಿನ ವಸ್ತ್ರವಾದರೂ ಫ್ಯಾಷನ್ ಗೆ ಪೂರಕವಾಗಿದೆ. ಇದು ಏಕಕಾಲದಲ್ಲಿ ಪ್ರಾಚೀನವೂ, ಅತ್ಯಾಧುನಿಕವೂ ಆಗಿದೆ. ಸೀರೆ ಬಳಸಿಕೊಂಡು ತಾವು ಮಾಡಿದ ಫ್ಯಾಷನ್ ವಿನ್ಯಾಸ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರು.

ಭಾರತ ಬಹುಪ್ರಾಚೀನ ಕಾಲದಿಂದಲೂ ಜವಳಿ ಉತ್ಪಾದನೆ ಮತ್ತು ವಿನ್ಯಾಸಕ್ಕೆ ಖ್ಯಾತವಾಗಿದೆ. ಪ್ರಾಚೀನ ರೇಷ್ಮೆ ಮಾರ್ಗ (ಸಿಲ್ಕ್ ರೂಟ್) ಬಟ್ಟೆಯ ಸಾಗಣೆಯಿಂದಾಗಿಯೇ ಪ್ರಸಿದ್ಧವಾಗಿತ್ತು. ಪ್ರಾಚೀನ ಜಗತ್ತಿನಲ್ಲಿ ಭಾರತೀಯ ಜವಳಿಗೆ ಹೆಚ್ಚಿನ ಬೇಡಿಕೆ ಇತ್ತು. ಇಡೀ ಜಗತ್ತು ಭಾರತೀಯ ವಸ್ತ್ರವಿನ್ಯಾಸದ ಆಕರ್ಷಣೆಗೆ ಒಳಗಾಗಿತ್ತು. ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ಜವಳಿ ವಲಯದಲ್ಲಿ ಭಾರತದ ಹಿರಿಮೆಯನ್ನು ಮತ್ತೆ ಪ್ರತಿಷ್ಠಾಪಿಸಲು ಹೆಚ್ಚಿನ ಅವಕಾಶಗಳು ಇವೆ ಎಂದು ಹೇಳಿದರು.
ಸರಕು ಸಾಗಣೆ ಕ್ಷೇತ್ರಕ್ಕೆ ಆದ್ಯತೆ ಕೊಟ್ಟರೆ ಹಿಗ್ಗುವುದು ಆರ್ಥಿಕತೆ
ಪ್ರಪಂಚದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಬೇಕೆಂದರೆ ವಿಫುಲ ಉದ್ಯೋಗಾವಕಾಶ ಇವೆ. ಸರಕು ಸಾಗಣೆ ಕ್ಷೇತ್ರದ ಸುಧಾರಣೆಗೆ ಒತ್ತು ಕೊಡುವುದು ಅಗತ್ಯ. ಇದರಿಂದ ದೇಶವು ಬಹುದೊಡ್ಡ ಮೂರನೇ ಆರ್ಥಿಕತೆಯ ದೇಶವಾಗಿ ಹೊರ ಹೊಮ್ಮುತ್ತದೆ ಎಂದು ವೋಲ್ವೊ ಗ್ರೂಪ್ ಅಧ್ಯಕ್ಷ ಹಾಗೂ ಸಿಇಒ ಮಾರ್ಟಿನ್ ಲಾಂಡ್ಸ್‌ಟೆಡ್ಟ್ ಹೇಳಿದರು.
ಸಮಾವೇಶ'ದಲ್ಲಿ ನಡೆದ 'ನೆಕ್ಟ್ ಮೈಲ್: ಇನ್ನೋವೇಷನ್ಸ್ ಶೇಪಿಂಗ್ ದಿ ಫ್ಯೂಚರ್ ಆಫ್ ಲಾಜಿಸ್ಟಿಕ್ಸ್' (ಭವಿಷ್ಯದ ಹೆಜ್ಜೆ: ಸರಕು ಸಾಗಣೆ ಭವಿಷ್ಯ ರೂಪಿಸುತ್ತಿರುವ ನಾವೀನ್ಯತೆಗಳು) ಗೋಷ್ಠಿಯಲ್ಲಿ ಮಾತನಾಡಿದರು.
ರಸ್ತೆ ಸಾರಿಗೆ ಮೂಲಕ ಸರಕುಗಳನ್ನು ಸಾಗಿಸುವ ಬೆಳವಣಿಗೆ ಪ್ರಮಾಣ ಇನ್ನು ಎರಡು ದಶಕಗಳಲ್ಲಿ 32 ಸಾವಿರ ಟನ್‌ಗಿಂತಲೂ ಹೆಚ್ಚುವ ಅಂದಾಜಿದೆ. ಈ ಎಲ್ಲ ಅಂಕಿ-ಅಂಶಗಳನ್ನು ನೋಡಿದರೆ ಭಾರತದಲ್ಲಿ ಲಾಜಿಸ್ಟಿಕ್ ಕ್ಷೇತ್ರದ ಸುಧಾರಣೆಗೆ ದೊಡ್ಡ ಮಟ್ಟದಲ್ಲಿ ಅವಕಾಶಗಳಿವೆ.
'ವೋಲ್ವೊ ಕಂಪನಿಯು ಭಾರತ, ಫ್ರಾನ್ಸ್, ಇಸ್ರೇಲ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಹೂಡಿಕೆ ಮಾಡುತ್ತಿದ್ದರೂ ಭಾರತವೇ ಮೊದಲ ಆದ್ಯತೆಯಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆಗೆ ಒತ್ತುಕೊಟ್ಟಿದ್ದೇವೆ. ದೂರಸಂಪರ್ಕ, ಡಿಜಿಟಲ್ ವಹಿವಾಟು ವಲಯದಲ್ಲಿ ಭಾರತವು ಕ್ರಾಂತಿ ಮಾಡಿದಂತೆ ಲಾಜಿಸ್ಟಿಕ್ ಕಾರಿಡಾರ್, ಗ್ರೀನ್ ಕಾರಿಡಾರ್‌ಗಳ ಅಭಿವೃದ್ಧಿಗೂ ಒತ್ತುಕೊಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಯತ್ನಗಳು ಶ್ಲಾಘನೀಯವಾದುದು ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶದವರಿಗೂ ಒಳ್ಳೆಯ ಉತ್ಪನ್ನಗಳು ಕೈಗೆಟುಕುವ ದರದಲ್ಲಿ ಸಿಗಬೇಕೆಂದರೆ ಸರಕು ಸಾಗಣೆ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಿದೆ. ಹಸಿರು ಇಂಧನ ಬಳಸಿ ಒಳ್ಳೆಯ ಮೈಲೇಜ್ ಕೊಡುವ ಹಾಗೂ ಚಾಲಕರ ಸುರಕ್ಷತೆಗೆ ಆದ್ಯತೆ ಕೊಡುವ ಸರಕು ವಾಹನಗಳ ಉತ್ಪಾದನೆ ಹೆಚ್ಚಳವಾಗಬೇಕು. ವೋಲ್ವೋ ಕಂಪನಿಯು ಚಾಲಕರ ಕ್ಯಾಬಿನ್‌ಗಳನ್ನೂ ಟ್ರ್ಯಾಕಿಂಗ್‌ಗೆ ಅನುಕೂಲವಾಗುವಂತೆ ತಂತ್ರಜ್ಞಾನ ಸ್ನೇಹಿಯಾಗಿ ರೂಪಿಸುತ್ತಿದೆ ಎಂದು ಮಾಹಿತಿ ನೀಡಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications