ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರ ಬೈಕ್ ರ‍್ಯಾಲಿ
ಬೆಂಗಳೂರು, ಮಾರ್ಚ್ 4: ಸಖಿ ಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಬೈಕ್ ರ‍್ಯಾಲಿ ಯನ್ನು ಮಾರ್ಚ್10 ರಂದು ಹಮ್ಮಿಕೊಂಡಿದೆ.
ರ‍್ಯಾಲಿ ಮಾರ್ಚ್ 10ರಂದು ಬೆಳಗ್ಗೆ 6ಗಂಟೆಗೆ ನಡೆಯಲಿದೆ. ಕಂಠೀರವ ಸ್ಟೇಡಿಯಂನಿಂದ ಆರಂಭಗೊಳ್ಳಲಿದ್ದು, ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್‌ನಲ್ಲಿ ಮುಕ್ತಾಯಗೊಳ್ಳಲಿದೆ.
ಎಲ್ಲ ಬಗೆಯ ದ್ವಿಚಕ್ರ ವಾಹನಗಳನ್ನು ಹೊಂದಿರುವ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಖಿ ಸಮಾನ ಮನಸ್ಕರು ರೂಪಿಸಿದ ವೇದಿಕೆಯಾಗಿದ್ದು, ಪ್ರವಾಸ, ಸಾಹಸಕ್ರೀಡೆ, ಮಹಿಳೆಯರ ಸಬಲೀಕರಣ, ಶಿಕ್ಷಣ ಮತ್ತು ಉತ್ತೇಜನ ನೀಡುವ ವೇದಿಕೆಯಾಗಿದೆ. ಈ ರ‍್ಯಾಲಿ ಗೆ ಕನ್ನಡ ನಟಿ ವೈಷ್ಣವಿ ಚಂದ್ರನ್ ಮೆನನ್ ಚಾಲನೆ ನೀಡಲಿದ್ದಾರೆ.