ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್, ಇತರೆ ಮಾಹಿತಿಗಳು

|
Google Oneindia Kannada News

ಬೆಂಗಳೂರು, ಜೂನ್ 7: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರಸ್ತೆಯನ್ನು ದಶಪಥ ರಸ್ತೆಯನ್ನಾಗಿ ವಿಸ್ತರಣೆ ಮಾಡುವ ಕಾರಣ ಏರ್‌ಪೋರ್ಟ್ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ.

ಜೂನ್ 10ರಿಂದ ಏರ್‌ಪೋರ್ಟ್ ರಸ್ತೆ ಬಂದ್ ಆಗುತ್ತಿದ್ದು ಪರ್ಯಾಯ ಮಾರ್ಗದಲ್ಲಿ ವಾಹನಗಳು ಚಲಿಸುವಂತೆ ಸೂಚಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದ ಮುಖ್ಯ ರಸ್ತೆ ಜೂ.10 ರಿಂದ ಬಂದ್ ಬೆಂಗಳೂರು ವಿಮಾನ ನಿಲ್ದಾಣದ ಮುಖ್ಯ ರಸ್ತೆ ಜೂ.10 ರಿಂದ ಬಂದ್

ನಿಲ್ದಾಣದ ಆವರಣದಲ್ಲಿರುವ ನಾಲ್ಕು ಪಥದ ಮುಖ್ಯ ಸಂಪರ್ಕ ರಸ್ತೆಯನ್ನು ಹತ್ತು ಪಥದ ರಸ್ತೆಯಾಗಿ ವಿಸ್ತರಣೆ ಜೊತೆಗೆ ಬಳ್ಳಾರಿ ರಸ್ತೆಯ ಟ್ರಂಪೆಟ್ ಇಂಟರ್ ಚೇಂಜ್ ಹಾಗೂ ಕಾರ್ಗೋ ಟರ್ಮಿನಲ್ ಗೆ ಸಂಪರ್ಕಿಸುವ ದ್ವಿಪಥ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ನಿರ್ಮಾಣ ಮಾಡುವ ಕಾರ್ಯ ಈಗಾಗಲೇ ಆರಂಭವಾಗಿದೆ.

ಇದೇ ವೇಳೆ ಕಾರ್ಗೋ ಸಾಗಣೆ ಹೆಚ್ಚಳ ಹಿನ್ನೆಲೆಯಲ್ಲಿ ವಾಹನ ದಟ್ಟಣ ನಿರ್ವಹಿಸಲು ಕಾರ್ಗೊ ಟರ್ಮಿನಲ್ ಸಂಪರ್ಕಿಸುವ ದ್ವಿಪಥ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿಸುವ ಕಾರ್ಯವನ್ನು ವರ್ಷಾಂತ್ಯಕ್ಕೆ ಆರಂಭಿಸಲಾಗುತ್ತದೆ.

ಬಳ್ಳಾರಿ ರಸ್ತೆಯಿಂದ ಸಂಪರ್ಕ ಕಲ್ಪಿಸಯವ ಟ್ರಂಪೆಟ್ ಬದಲಾವಣೆ

ಬಳ್ಳಾರಿ ರಸ್ತೆಯಿಂದ ಸಂಪರ್ಕ ಕಲ್ಪಿಸಯವ ಟ್ರಂಪೆಟ್ ಬದಲಾವಣೆ

ಬಳ್ಳಾರಿ ರಸ್ತೆಯಿಂದ ನಿಲ್ದಾಣ ಮುಖ್ಯ ಸಂಪರ್ಕ ರಸ್ತೆಗೆ ಸಂಪರ್ಕ ಕಲ್ಪಿಸುವ ಟ್ರಂಪೆಟ್ ಇಂಟರ್‌ಚೇಂಜ್ ಅನ್ನು ಆಗಿರುವ ಮೂರು ಲೇನ್‌ಗಳಿಂದ 5 ಲೇನ್‌ಗಳಿಗೆ ವಿಸ್ತರಿಸಲಾಗುತ್ತದೆ. ವಾಹನಗಳ ಸಂಚಾರಕ್ಕೆ ಯಾವುದೇ ತೊಡಕಾಗದಂತೆ ಕಾಮಗಾರಿ ನಡೆಸಲಾಗುತ್ತದೆ. ಏರ್‌ಪೋರ್ಟ್ ಟ್ಯಾಕ್ಸಿ ನಿಲ್ದಾಣ, ನಗರದ ಕಡೆಗೆ, ಆಗಮನದ ಕಡೆಗೆ, ಪಾರ್ಕಿಣಗ್ ಮೂಲಕ 11

ಕಾರ್ಗೊ ಸಾಗಣೆ, ಪ್ರಯಾಣಿಕರ ಹೆಚ್ಚಳ

ಕಾರ್ಗೊ ಸಾಗಣೆ, ಪ್ರಯಾಣಿಕರ ಹೆಚ್ಚಳ

ಕಳೆದ ವರ್ಷಕ್ಕೆ ಹೋಲಿಸಿದರೆ 2018-19ನೇ ಸಾಲಿನಲ್ಲಿ ಶೇ.23.8ರಷ್ಟು ಬೆಳವಣಿಗೆ ಸಾಧಿಸಿರುವ ಕೆಐಎ ಮೂಲಕ 2018-19ನೇ ಸಾಲಿನಲ್ಲಿ 3 ಕೋಟಿ 33 ಲಕ್ಷ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಕೆಐಎನಿಂದ ಪ್ರಯಾಣಿಕರ ಹಾರಾಟ ಮತ್ತು ಕಾರ್ಗೊ ಸಾಗಣೆಯು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. 13 ಸಾವಿರ ಕೋಟಿ ವೆಚಚ್ದಲ್ಲಿ ಎರಡನೇ ಟರ್ಮಿನಲ್ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ.

 ಮೆಟ್ರೋ ಎಲ್ಲಿ?

ಮೆಟ್ರೋ ಎಲ್ಲಿ?

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆದರೆ, ನಿಲ್ದಾಣದ ಆವರಣದಲ್ಲಿ ಮೆಟ್ರೋ ಸಂಚರಿಸುವ ಮಾರ್ಗದ ನೀಲನಕ್ಷೆ ಸಿದ್ಧವಾಗಿದೆ. ಬಳ್ಳಾರಿ ರಸ್ತೆಯಲ್ಲಿ ನಗರದ ಕಡೆಯಿಂದ ಎಲಿವೇಡೆಟ್ ಮಾರ್ಗದಲ್ಲಿ ಬಂದು, ಟ್ರಂಪೆಟ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಒಳ ಪ್ರವೇಶಿಸಿದ ನಂತರ ನಲ ಮಟ್ಟದಲ್ಲಿ ನಮ್ಮ ಮೆಟ್ರೋ ಸಂಚರಿಸಲಿದೆ.

ಕೆಐಎ ಆವರಣದಿಂದ 7,059 ಮರಗಳು ಸ್ಥಳಾಂತರ

ಕೆಐಎ ಆವರಣದಿಂದ 7,059 ಮರಗಳು ಸ್ಥಳಾಂತರ

ಎರಡನೇ ಪ್ರಯಾಣಿಕ ಟರ್ಮಿನಲ್ ನಿರ್ಮಾಣ, ರಸ್ತೆ ವಿಸ್ತರಣೆ ಸೇರಿದಂತೆ ವಿವಿಧ ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವ ಕಾರಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 7,059 ಮರಗಳನ್ನು ಸ್ಥಳಾಂತರಿಸಲಾಗುತ್ತಿದೆ. ಮೊದಲ ಹಂತದಲ್ಲಿ ತೆಂಗಿನ ಮರ, ತಾಳೆ ಮರ, ಬೇವಿನ ಮರ ಸೇರಿದಂತೆ ಮಧ್ಯಮ ಗಾತ್ರದ 240 ಮರಗಳೂ ಒಳಗೊಂಡಂತೆ ಒಂದೂವರೆ ಸಾವಿರ ಮರ-ಗಿಡಗಳನ್ನು ನಿಲ್ದಾಣದ ಆವರಣದಿಂದ ಸ್ಥಳಾಂತರಿಸಲಾಗುತ್ತಿದೆ.

English summary
Internal road of Kempegowda International Airport will be closed from June 10 due to road widening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X