ಒಂದು ಇಂದಿರಾ ಕ್ಯಾಂಟೀನ್ ಬಣ್ಣ ಬದಲು, ಶುರುವಾಯ್ತು ಹೊಸ ವಿವಾದ
ಬೆಂಗಳೂರು, ನವೆಂಬರ್ 21: ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಸುಮಾರು 170ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ ಒಂದೇ ಬಣ್ಣದ್ದಾಗಿದೆ. ಆದರೆ ಸುಭಾಷ್ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಬೇರೆ ಬಣ್ಣ ಬಳಿದಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ.
ಇಂದಿರಾನಗರ ಕ್ಯಾಂಟೀನ್ ಗೆ ಪ್ರತ್ಯೇಕ ಬಣ್ಣ ಬಳಿದು ಇಂದಿರಾ ಕ್ಯಾಂಟೀನ್ ಮೂಲ ಉದ್ದೇಶಕ್ಕೆ ಧಕ್ಕೆ ತರಲಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಎಲ್ಲಾ ಇಂದಿರಾ ಕ್ಯಾಂಟೀನ್‌ಗು ಫ್ರಿ ಫ್ಯಾಬ್ರಿಕೇಟೆಡ್ ಉತ್ಪನ್ನಗಳನ್ನು ಬಳಸಿ ಒಂದೇ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಯೋಜನೆಯ ಮೂಲ ಉದ್ದೇಶದಲ್ಲಿ ಅಂಶದಲ್ಲಿ ಕ್ಯಾಂಟೀನ್‌ಗಳೆಲ್ಲವೂ ಒಂದೇ ಮಾದರಿಯಲ್ಲಿ ಇರಬೇಕಾಗುತ್ತದೆ.

ಆದರೆ ಇದೀಗ ಸುಭಾಷ್ ನಗರದಲ್ಲಿರುವ ಕ್ಯಾಂಟೀನ್ ಗೆ ಪ್ರತ್ಯೇಕ ಬಣ್ಣ ಬಳಿ ದಿರುವುದು ಸರಿಯೇ ಎನ್ನುವ ವಾದ ಉಂಟಾಗಿದೆ. ಪ್ರತ್ಯೇಕ ಬಣ್ಣ ಬಳಿಯುವ ಅಗತ್ಯವಾದರೂ ಏನಿತ್ತು ಎನ್ನುವ ಪ್ರಶ್ನೆ ಉಂಟಾಗಿದೆ.












Click it and Unblock the Notifications