Bengaluru Airport: ಇಂಡಿಗೋ ಎಂಆರ್‌ಓ ಸ್ಥಾಪನೆಗೆ ಅಡಿಗಲ್ಲು: ಬೆಂಗಳೂರಿಗೆ ಮತ್ತೊಂದು ಸ್ಥಾನ..
ಬೆಂಗಳೂರು, ಆಗಸ್ಟ್ 07: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಬೆಂಗಳೂರು ಇಂದು ಭಾರತದ ವಿಮಾನಯಾನ ಕ್ಷೇತ್ರದ ಬೆಳವಣಿಗೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ತಪಾಸಣೆ (MRO) ಸೌಲಭ್ಯ ಕಟ್ಟಡದ ಸ್ಥಾಪನೆ ಬಗ್ಗೆ ಇಂಡಿಯೋಗ ತಿಳಿಸಿತ್ತು. ಈ ವಿಷಯವನ್ನು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಪ್ರಸ್ತಾಪಿಸಿ ಯೋಜನೆ ಕುರಿತು ತಿಳಿಸಿದ್ದರು. ಇದೀಗ ಯೋಜನೆಯ ಅನುಷ್ಠಾನದ ಪ್ರಾಥಮಿಕ ಹಂತ ಆರಂಭವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋದಿಂದ ಹೊಸ ಹೆಜ್ಜೆ ಇಟ್ಟಿದೆ. ಇದನ್ನು ಬೆಂಗಳೂರು ಮತ್ತು ಭಾರತದ ವಿಮಾನಯಾನ ಕ್ಷೇತ್ರದ ದೊಡ್ಡ ಬೆಳವಣಿಗೆಯಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಆವರಣದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ತಪಾಸಣೆ (MRO) ಸೌಲಭ್ಯ ಕಟ್ಟಡದ ಸ್ಥಾಪನೆಗಾಗಿ ಇಂಡಿಗೋ ಶಂಕುಸ್ಥಾಪನಾ ಸಮಾರಂಭ ನಡೆಯಿತು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (BIAL) ಹರಿ ಮರಾರ್ (ಎಂಡಿ ಮತ್ತು ಸಿಇಒ-ಬಿಐಎಎಲ್) ಮತ್ತು ಸತ್ಯಕಿ ರಘುನಾಥ್ (ಸಿಒಒ-ಬಿಐಎಎಲ್), ಇಂಡಿಗೋದ ಸಿಇಒ ಪೀಟರ್ ಎಲ್ಬರ್ಸ್, ಮತ್ತು ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಅವರು ಸಾಕ್ಷಿಯಾದರು. ಏರ್‌ಪೋರ್ಟ್ ನಿಲ್ದಾಣದ ಅಭಿವೃದ್ಧಿಯಲ್ಲಿ ಜೊತೆಯಾಗೋಣ ಎಂದು ಇಂಡಿಗೋ ಕರೆ ನೀಡಿದೆ.
ಹೂಡಿಕೆ ಎಷ್ಟು? ಏನಲ್ಲ ಪ್ರಯೋಜನಗಳು?
ಕರ್ನಾಟಕಕ್ಕೆ ವ್ಯಾಪಕ ಹೂಡಿಕೆಗಳೂ ಹರಿದು ಬಂದಿರುವ ಪೈಕಿ ಇಂಡಿಗೋ ಕಂಪನಿಯಿಂದ ಈ ಎಂಆರ್‌ಒ ಸ್ಥಾಪನೆಗೆ ಹರಿದು ಬಂದ ಬಂಡವಾಳವೂ ಒಂದಾಗಿದೆ. ವಿಮಾನಿಗಳಿಗೆ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ತಪಾಸಣೆ ಮಾಡುವ ಈ ಘಟಕ ಸ್ಥಾಪನೆಗೆ ಕಂಪನಿಯು 1100 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಈ ಮೂಲಕ ಕರ್ನಾಟಕದ ರಾಜಧಾನಿಯು ಏಷ್ಯಾ ಖಂಡದ ಎಂಆರ್‌ಒ ರಾಜಧಾನಿಯಾಗಿ ಮಾಡಬೇಕೆನ್ನುವ ಉದ್ದೇಶಕ್ಕೆ ನೀರೆರೆದಂತಾಗಿದೆ.
ಈ ಘಟಕದಿಂದ ಕೇವಲ ವಿಮಾನಗಳಿಗೆ ಮಾತ್ರವಲ್ಲದೇ ಅನೇಕ ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ. ಜಾಗತಿಕವಾಗಿ ವಿಮಾನ, ವಿಮಾನಯಾನ ವಲಯದ ಸ್ಪರ್ಧಾತ್ಮಕ ವಿಮಾನ ಕ್ಷೇತ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ. ಕರ್ನಾಟಕ ಹಾಗೂ ಬೆಂಗಳೂರನ್ನು ಗುರುತಿಸುವಂತೆ ಆಗಲಿದೆ. ವಿಮಾನ ಕ್ಷೇತ್ರದಲ್ಲಿ ಬೆಂಗಳೂರಿಗೆ ನಾಯಕತ್ವ ಸ್ಥಾನ ಸಿಗಲಿದೆ. ವಿಮಾನ ಮೂಲಸೌರ್ಯ, ಸೌಲಭ್ಯ ಒದಗಿಸುವ ವಿಭಾಗದಲ್ಲಿ ಅಗ್ರಸ್ಥಾನಕ್ಕೆ ಏರಲಿದೆ. ಈ ಭಾಗದಲ್ಲಿ ಕೈಗಾರಿಕೆಗಳು ತಲೆ ಎತ್ತಲು, ಮತ್ತಷ್ಟು ಹೂಡಿಕೆ ಹರಿವು ಬರುವ ವಿಶ್ವಾಸ ವಿದೆ. ಇದಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುವುದಾಗಿ ಈ ಹಿಂದೆ ತಿಳಿಸಿತ್ತು.
ಸದ್ಯ ಘಟಕ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿದೆ. ಹಂತ ಹಂತವಾಗಿ ಕಾಮಗಾರಿ ಮುಗಿದು ಮುಂದಿನ ದಿನಗಳಲ್ಲಿ ಇಂಡಿಗೋದಿಂದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ತಪಾಸಣೆ (MRO) ಸೌಲಭ್ಯ ಎಲೆ ಎತ್ತಲಿದೆ.












Click it and Unblock the Notifications