ದೇವನಹಳ್ಳಿಯ ಕೆಐಎ ಬಳಿ ಭಾರತದ ಅತಿ ದೊಡ್ಡ ಏರೋಸ್ಪೇಸ್ ಪಾರ್ಕ್
ಚೆನ್ನೈ, ಸೆಪ್ಟೆಂಬರ್ 22: ಬೋಯಿಂಗ್ ಇಂಡಿಯಾ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ 43 ಎಕರೆ ಸಂಕೀರ್ಣವನ್ನು ತೆರೆಯಲು ಸಿದ್ಧವಾಗಿದೆ.
ಈ ಸಂಕೀರ್ಣಕ್ಕೆ ಬರೋಬ್ಬರಿ 1,600 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಾಗಿದೆ. ಇದು ಯುನೈಟೆಡ್ ಸ್ಟೇಟ್ಸ್ ಹೊರಗಿನ ಅತಿದೊಡ್ಡ ಬೋಯಿಂಗ್ ಸೌಲಭ್ಯವಾಗಿದೆ.

ಬೆಂಗಳೂರಿನ ಉತ್ತರ ಭಾಗವು ಈಗ ಆರ್ಥಿಕ ಕೇಂದ್ರವಾಗಿರುವುದರಿಂದ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹತ್ತಿರವಿರುವ ಕಾರಣದಿಂದ ದೇವನಹಳ್ಳಿಯಲ್ಲಿ ಸಾಕಷ್ಟು ಹೂಡಿಕೆ ಮಾಡಲಾಗಿದೆ. ಇದು ಈ ಸ್ಥಳದಲ್ಲಿ ತನ್ನ ಅತಿದೊಡ್ಡ ಪ್ರಧಾನ ಕಚೇರಿಯನ್ನು ತೆರೆಯುವ ಬೋಯಿಂಗ್ ಕಂಪೆನಿಗೆ ಪ್ರೇರಣೆಯಾಗಿದೆ.
ಇದಲ್ಲದೆ, ಮುಂಬರುವ ನೀಲಿ ಮೆಟ್ರೋ ಲೈನ್ (ಕೆಆರ್ ಪುರ - ಯಲಹಂಕ - ಕೆಐಎ) ಕಾರಣದಿಂದಾಗಿ ಉತ್ತರ ಬೆಂಗಳೂರು ಕೂಡ ಬೆಳವಣಿಗೆ ಮತ್ತು ಹೂಡಿಕೆಗೆ ಹೆಚ್ಚು ಆಯಕಟ್ಟಿನ ಸ್ಥಳವಾಗಿದೆ. ಈ ಪ್ರದೇಶದಲ್ಲಿನ ಇನ್ಫ್ರಾ ಪುಶ್ ಉದ್ಯೋಗಾವಕಾಶಗಳ ಹೆಚ್ಚಳವೂ ಆಗುತ್ತಿದೆ.
ಬೋಯಿಂಗ್-ಏರ್ ಇಂಡಿಯಾ ಒಪ್ಪಂದ:
ವಿಶೇಷವಾಗಿ ಬೋಯಿಂಗ್ ಇಂಡಿಯಾ ತನ್ನ ಸೋರ್ಸಿಂಗ್ ಅನ್ನು ಪ್ರಸ್ತುತ ಭಾರತದಿಂದ 8,000 ಕೋಟಿ ರೂ.ನಿಂದ ಈ ವರ್ಷಕ್ಕೆ 10,000 ಕೋಟಿಗೆ ಹೆಚ್ಚಿಸಲು ಯೋಜಿಸುತ್ತಿದೆ. ಈ ವರ್ಷ ಬೋಯಿಂಗ್ ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ತರಬೇತಿ ಪೈಲಟ್‌ಗಳಿಗೆ USD 100 ಮಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
20 787 ಡ್ರೀಮ್‌ಲೈನರ್‌ಗಳು, 10 777Xs ಮತ್ತು 190 737 MAX ನ್ಯಾರೋಬಾಡಿ ವಿಮಾನಗಳನ್ನು ಒಳಗೊಂಡಿರುವ 200 ಕ್ಕೂ ಹೆಚ್ಚು ಜೆಟ್‌ಗಳಿಗೆ ಏರ್ ಇಂಡಿಯಾ ಬೋಯಿಂಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಹೂಡಿಕೆ ಯೋಜನೆಯನ್ನು ಘೋಷಿಸಲಾಯಿದೆ.
ಪ್ರಸ್ತುತ, ಬೋಯಿಂಗ್ ಇಂಡಿಯಾ ದೆಹಲಿಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಮುಂಬೈ, ಹಿಂದಾನ್, ರಾಜಾಲಿ ಮತ್ತು ನವದೆಹಲಿಯಲ್ಲಿ ಹಲವಾರು ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಇದಲ್ಲದೆ, ಇದು ಬೆಂಗಳೂರು ಮತ್ತು ಚೆನ್ನೈನಲ್ಲಿ ವೇಗವಾಗಿ ಬೆಳೆಯುತ್ತಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರವನ್ನು (BIETC) ಹೊಂದಿದೆ.
ಸೆಪ್ಟೆಂಬರ್ 12ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ವಿದೇಶಿ ವಿಮಾನಗಳ ಹಾರಾಟ ಶುರು ಆಗಿತ್ತು. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಟರ್ಮಿನಲ್ 2ಗೆ ಶಿಫ್ಟ್ ಆಗಿತ್ತು. 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾರ್ಡನ್ ಟರ್ಮಿನಲ್ ಬಹು ನಿರೀಕ್ಷಿತ ಅತ್ಯಾಧುನಿಕ ತಂತ್ರಜ್ಞಾನವುಳ್ಳದ್ದಾಗಿದೆ. ಕಳೆದ ವರ್ಷ ನವಂಬರ್‌ನಲ್ಲಿ ಪ್ರಧಾನಿ ಮೋದಿ ಈ ಟರ್ಮಿನಲ್ ಅನ್ನು ಉದ್ಘಾಟನೆ ಮಾಡಿದ್ದರು. ಇದೀಗ ಸಂಪೂರ್ಣ ಕಾಮಗಾರಿ ಮುಗಿಸಿ ಹಾರಾಟ ಶುರು ಮಾಡಿದೆ. ಇಂದು ಬೆಳಗ್ಗೆ 10:45ಕ್ಕೆ ಟರ್ಮಿನಲ್ - 2 ಗೆ ಮೊದಲ ವಿದೇಶಿ ವಿಮಾನ ಬಂದಿಳಿದಿತ್ತು.












Click it and Unblock the Notifications