ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ದೇಶದ ಮೊದಲ ಅಂಚೆ ಕಚೇರಿ ನಿರ್ಮಾಣ

|
Google Oneindia Kannada News

ಬೆಂಗಳೂರು, ಆಗಸ್ಟ್ 25: ಶೀಘ್ರದಲ್ಲೇ 3ಡಿ ತಂತ್ರಜ್ಞಾನ ಬಳಸಿ ಭಾರತದ ಮೊಟ್ಟ ಮೊದಲ ಅಂಚೆ ಕಚೇರಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ಕೇವಲ ಒಂದು ತಿಂಗಳಲ್ಲೇ ಅಂಚೆ ಕಚೇರಿ ನಿರ್ಮಿಸಲು ಉದ್ದೇಶಿಲಾಗಿದೆ.

ಹಲಸೂರಿನ ಕೇಂಬ್ರಿಡ್ಜ್ ಲೇಔಟ್ ಈ ತಾಂತ್ರಿಕ ವಿಸ್ಮಯಕ್ಕೆ ಸಾಕ್ಷಿಯಾಗಲಿದ್ದು, 3ಡಿ ಪ್ರಿಂಟಿಂಗ್ ಬಳಸಿ ನಿರ್ಮಿಸಲಾದ ದೇಶದ ಮೊದಲ ಅಂಚೆ ಕಚೇರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಭಾರತೀಯ ಅಂಚೆ ಇಲಾಖೆಯಲ್ಲಿ 38926 ಹುದ್ದೆಗಳಿವೆ ಅರ್ಜಿ ಹಾಕಿಭಾರತೀಯ ಅಂಚೆ ಇಲಾಖೆಯಲ್ಲಿ 38926 ಹುದ್ದೆಗಳಿವೆ ಅರ್ಜಿ ಹಾಕಿ

ನೂತನ ತಂತ್ರಜ್ಞಾನ ಬಳಸಿ ಕಟ್ಟಡ ನಿರ್ಮಾಣ ಮಾಡುವುದರಿಂದ ನಿರ್ಮಾಣ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ. ಸಾಂಪ್ರದಾಯಿಕ ಮಾದರಿಯಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಆಗುವ ಖರ್ಚಿನ ನಾಲ್ಕನೇ ಒಂದು ಭಾಗ ಮಾತ್ರ ಈಗ 3ಡಿ ತಂತ್ರಜ್ಞಾನ ಆಧಾರಿತ ಕಟ್ಟಡ ನಿರ್ಮಾಣಕ್ಕೆ ಖರ್ಚಾಗಲಿದೆ ಎಂದು ಹೇಳಲಾಗಿದೆ.

"ನಾವು ಕಡಿಮೆ ವೆಚ್ಚದ ಅಂಚೆ ಕಚೇರಿಗಳನ್ನು ನಿರ್ಮಿಸಲು ಉತ್ಸುಕರಾಗಿದ್ದೇವೆ. ಆದ್ದರಿಂದ, ನಮ್ಮ ಹಲಸೂರು ಬಜಾರ್ ಉಪ-ಅಂಚೆ ಕಚೇರಿಯನ್ನು ನಿರ್ಮಿಸಲು ನಾವು ಲಾರ್ಸನ್ ಮತ್ತು ಟೂಬ್ರೊ ಕನ್‌ಸ್ಟ್ರಕ್ಷನ್ (ಎಲ್‌ & ಟಿ) ಅನ್ನು ಸಂಪರ್ಕಿಸಿದ್ದೇವೆ. ಭಾರತದಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ನಿರ್ಮಾಣವನ್ನು ಕೈಗೊಳ್ಳುತ್ತಿರುವ ಏಕೈಕ ಕಂಪನಿ ಎಂದು ಹೇಳಲಾಗುತ್ತದೆ," ಎಂದು ಕರ್ನಾಟಕ ವಿಭಾಗದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಭಾರತೀಯ ಅಂಚೆ ಕಚೇರಿ: 1 ಲಕ್ಷ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಭಾರತೀಯ ಅಂಚೆ ಕಚೇರಿ: 1 ಲಕ್ಷ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

 1000 ಚದರ ಅಡಿ ನಿರ್ಮಾಣಕ್ಕೆ 25 ಲಕ್ಷ ವೆಚ್ಚ

1000 ಚದರ ಅಡಿ ನಿರ್ಮಾಣಕ್ಕೆ 25 ಲಕ್ಷ ವೆಚ್ಚ

"ಸುಮಾರು 1,000 ಚದರ ಅಡಿ ವಿಸ್ತೀರ್ಣದ ಕಟ್ಟಡಕ್ಕೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿದರೆ 25 ಲಕ್ಷಕ್ಕಿಂತ ಕಡಿಮೆ ವೆಚ್ಚವಾಗುತ್ತದೆ. ಇದು ಸಾಮಾನ್ಯ ನಿರ್ಮಾಣ ವೆಚ್ಚದ ಕೇವಲ 25 ಪ್ರತಿಶತದಷ್ಟು ಮಾತ್ರ ವೆಚ್ಚವಾಗಲಿದೆ," ಎಂದು ಎಸ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

ನೂತನ ತಂತ್ರಜ್ಞಾನವು ಇಲಾಖೆಗೆ ತನ್ಮೂಲಕ ಅಗತ್ಯವಿರುವ ಪ್ರದೇಶಗಳಲ್ಲಿ ಅಂಚೆ ಕಚೇರಿ ಕಟ್ಟಡಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸಲು ಅವಕಾಶಗಳನ್ನು ನೀಡಬಹುದು.

ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಬಿಲ್ಡಿಂಗ್ ಮೆಟೀರಿಯಲ್ಸ್ ಮತ್ತು ಟೆಕ್ನಾಲಜಿ ಪ್ರಮೋಷನ್ ಕೌನ್ಸಿಲ್ ಮತ್ತು ಐಐಟಿ-ಮದ್ರಾಸ್‌ನಿಂದ ಗ್ರೌಂಡ್-ಪ್ಲಸ್-ಮೂರು ಮಹಡಿಗಳಿಂದ ನಡೆಯುವ ರಚನೆಗಳಿಗೆ 3ಡಿ ಕಾಂಕ್ರೀಟ್ ಮುದ್ರಣಕ್ಕಾಗಿ ಎಲ್‌ ಅಂಡ್ ಟಿ ಕಂಪನಿ ತಂತ್ರಜ್ಞಾನ ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ಎಸ್. ರಾಜೇಂದ್ರ ಕುಮಾರ್ ತಿಳಿಸಿದರು.

 3ಡಿ ತಂತ್ರಜ್ಞಾನ ಬಳಸಿ ಅಂಚೆ ಕಚೇರಿ ನಿರ್ಮಾಣ

3ಡಿ ತಂತ್ರಜ್ಞಾನ ಬಳಸಿ ಅಂಚೆ ಕಚೇರಿ ನಿರ್ಮಾಣ

ದೇಶದಲ್ಲಿ ಇದೇ ಮೊದಲಬಾರಿಗೆ ಈ ತಂತ್ರಜ್ಞಾನ ಬಳಸಿ ಕಟ್ಟಡ ನಿರ್ಮಾಣ ಮಾಡುತ್ತಿರುವದರಿಂದ ಹಲವು ಸಮಸ್ಯೆಗಳು ಎದುರಾಗಬಹುದು, ಅವುಗಳನ್ನು ಬಗೆಹರಿಸಿಕೊಂಡು ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.

ನಿಯಮದಂತೆ, 2.5 ಲಕ್ಷ ರುಪಾಯಿಗಳಿಗಿಂತ ಹೆಚ್ಚಿನ ಯಾವುದೇ ಒಪ್ಪಂದವನ್ನು ಸ್ಪರ್ಧಾತ್ಮಕ ಬಿಡ್ಡಿಂಗ್‌ ಮೂಲಕ ನೀಡಬೇಕು. ಆದರೆ, ಈ ವರ್ಗದಲ್ಲಿ ಎಲ್‌ & ಟಿ ಅರ್ಹವಾದ ಏಕೈಕ ಕಂಪನಿ ಆಗಿರುವುದರಿಂದ ನಾವು ಅವರನ್ನು ನಾಮನಿರ್ದೇಶನ ಮಾಡಬಹುದು, ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

 ಒಂದು ತಿಂಗಳಲ್ಲಿ ನಿರ್ಮಾಣ ಪೂರ್ಣ

ಒಂದು ತಿಂಗಳಲ್ಲಿ ನಿರ್ಮಾಣ ಪೂರ್ಣ

ಪರಿಶೀಲನೆ ಎಲ್ಲಾ ಮುಗಿದ ನಂತರ ಕೆಲಸದ ಆದೇಶವನ್ನು ಒಂದು ತಿಂಗಳೊಳಗೆ ಎಲ್‌ & ಟಿ ಗೆ ನೀಡಬಹುದು. ಅವರು ಈಗಾಗಲೇ ಕಟ್ಟಡದ ವಿನ್ಯಾಸಗಳನ್ನು ನಮಗೆ ಸಲ್ಲಿಸಿದ್ದಾರೆ ಮತ್ತು ಒಂದು ತಿಂಗಳಲ್ಲಿ ಕಟ್ಟಡವು ಸಿದ್ಧವಾಗಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ಎಸ್. ರಾಜೇಂದ್ರ ಕುಮಾರ್ ಹೇಳಿದರು.

 ಏನಿದು 3ಡಿ ತಂತ್ರಜ್ಞಾನ ಕಟ್ಟಡ ಕಾಮಗಾರಿ?

ಏನಿದು 3ಡಿ ತಂತ್ರಜ್ಞಾನ ಕಟ್ಟಡ ಕಾಮಗಾರಿ?

ಕಾಂಕ್ರೀಟ್ ಮಿಶ್ರಣವನ್ನು ಬಳಸಿಕೊಂಡು ಕಟ್ಟಡವನ್ನು ಮುದ್ರಿಸುವ ತಂತ್ರಜ್ಞಾನ ಎನ್ನಬಹುದು. ಇಟ್ಟಿಗೆ, ಮರಳು ಎನ್ನುವ ಸಾಂಪ್ರದಾಯಿಕ ಶೈಲಿಯಿಂದ ಭಿನ್ನವಾಗಿ ಕಟ್ಟಡ ನಿರ್ಮಾಣ ಮಾಡುವುದಾಗಿದೆ. ಕಡಿಮೆ ಸಮಯದಲ್ಲಿ ಮತ್ತು ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಟ್ಟಡಗಳನ್ನು ನಿರ್ಮಾಣ ಮಾಡಬಹುದಾಗಿದೆ.
ಕಾಂಕ್ರೀಟ್ ಮಿಶ್ರಣ ಬಳಸಿ ಯಂತ್ರೋಪಕರಣಗಳ ಸಹಾಯದಿಂದ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಎಲ್‌ & ಟಿ ಕಂಪನಿ 106 ಗಂಟೆಗಳಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಯಶಸ್ವಿಯಾಗಿದೆ.

ಭಾರತೀಯ ಸೇನೆಯ ಮಿಲಿಟರಿ ಎಂಜಿನಿಯರಿಂಗ್ ಸೇವೆಗಳು (MES) 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ಎರಡು ಮನೆಗಳನ್ನು ನಿರ್ಮಿಸಿದೆ.

English summary
India's first 3D-printed post office will built soon in Bengaluru. Cambridge Layout in Halasuru is set to witness this technological marvel. Through this innovation, the construction cost would be reduced to one-fourth of the amount spent on a traditional model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X