Indian Railways: ಬೆಂಗಳೂರಿನ ಈ 6 ಪ್ರಮುಖ ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ- ವೆಚ್ಚ ಎಷ್ಟು ಕೋಟಿ?
ಬೆಂಗಳೂರು, ಫೆಬ್ರವರಿ, 11: ಭಾರತೀರ ರೈಲ್ವೆಯು ದಿನದಿಂದ ದಿನಕ್ಕ ದೊಡ್ಡಮಟ್ಟದಲ್ಲು ಬೆಳವಣಿಗೆಯಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಮತ್ತು ಸರಕು ಸಾಗಣೆಯ ದೃಷ್ಟಿಯಿಂದ ಲೈನ್ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನ ಆರು ಪ್ರಮುಖ ಭಾಗಗಳಲ್ಲಿ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸುವ ನೈಋತ್ಯ ರೈಲ್ವೆಯ ಪ್ರಸ್ತಾವನೆಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.
ಹೆಚ್ಚಿನ ಪ್ರಮಾಣದಲ್ಲಿ ರೈಲುಗಳ ಸಂಚಾರಕ್ಕೆ ಅನುಕೂಲ ಆಗಲು ಹಾಗೂ ರೈಲು ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಬೆಂಗಳೂರಿನ ಆರು ಪ್ರಮುಖ ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಸಿಸ್ಟಂ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಒಟ್ಟು 639.05 ಕಿಲೋ ಮೀಟರ್ ದೂರಕ್ಕೆ ಅನುಮತಿ ಸಿಕ್ಕಿದ್ದು, ಇದಕ್ಕೆ ಸುಮಾರು 874 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಸ್ವಯಂಚಾಲಿತ ಸಿಗ್ನಲಿಂಗ್ ಎಲ್ಲೆಲ್ಲಿ ಎಷ್ಟು ಕಿ.ಮೀ?
1. ಬೆಂಗಳೂರು ನಗರ - ಯಶವಂತಪುರ - ಯಲಹಂಕ 17.75 ಕಿ.ಮೀ
2. ಯಶವಂತಪುರ - ಅರಸೀಕೆರೆ ವಿಭಾಗದಲ್ಲಿ 160.65 ಕಿ.ಮೀ
3. ಲೊಟ್ಟೆಗೊಲ್ಲಹಳ್ಳಿ - ಹೊಸೂರು ವಿಭಾಗದ 63.6 ಕಿ.ಮೀ
4. ವೈಟ್‌ಫೀಲ್ಡ್ - ಜೋಲಾರಪೇಟೆ ವಿಭಾಗ 119 ಕಿ.ಮೀ
5. ಬೈಯ್ಯಪ್ಪನಹಳ್ಳಿ - ಪೆನುಕೊಂಡ ವಿಭಾಗ ಚನ್ನಸಂದ್ರ ಮಾರ್ಗವಾಗಿ 139.8 ಕಿ.ಮೀ
5. ಬೆಂಗಳೂರು ನಗರ - ಮೈಸೂರು 138.25 ಕಿ.ಮೀ
ಪ್ರಸ್ತುತ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಕೆಎಸ್‍ಆರ್ ಬೆಂಗಳೂರು ನಗರ-ವೈಟ್‍ಫೀಲ್ಡ್ ವಿಭಾಗದಲ್ಲಿ ಆಟೋಮೆಟಿಕ್ ಸಿಗ್ನಲ್ ಅಳವಡಿಕೆ ಮಾಡಲಾಗಿದೆ. ಇದುವರೆಗೂ ರೈಲ್ವೆಯ ರಿಲೇರೂಮ್‍ನಲ್ಲಿ ಸಿಗ್ನಲ್‍ಗಳನ್ನು ಸಿಬ್ಬಂದಿ ಕಂಟ್ರೋಲ್ ಮಾಡುತ್ತಿದ್ದಾರೆ. ಇದೀಗ ರಿಲೇರೂಮ್‍ನಲ್ಲಿ ಆಟೋಮೆಟಿಕ್ ಆಗಿ ಆನ್ ಆಂಡ್ ಆಫ್ ಆಗಲಿವೆ. ಇದರಿಂದ ಒಂದು ಸಮಯದಲ್ಲಿ ಒಂದು ರೈಲಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಜೊತೆಗೆ ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರು ಹೋಗಲು ಹಾಗೂ ಬರಲು ಅನುಕೂಲ ಆಗಲಿದೆ. ಇದರಿಂದ ರೈಲುಗಳ ದಕ್ಷತೆ ಹೆಚ್ಚಾಗಲಿದ್ದು, ರೈಲ್ವೆ ಇಲಾಖೆಯ ಈ ಕ್ರಮ ಪ್ರಯಾಣಿಕರಲ್ಲಿ ಸಂತೋಷ ತರಿಸಿದೆ.
SWR ಅಧಿಕಾರಿಗಳ ಪ್ರಕಾರ, ಇದು ಥ್ರೋಪುಟ್ ಅನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಮತ್ತು ಚೆನ್ನೈ, ಮೈಸೂರು, ಹುಬ್ಬಳ್ಳಿ ಮತ್ತು ಹೈದರಾಬಾದ್ ಸೇರಿದಂತೆ ಎಲ್ಲಾ ದಿಕ್ಕುಗಳಲ್ಲಿ ಬೆಂಗಳೂರು ಪ್ರದೇಶಕ್ಕೆ ಮತ್ತು ಅಲ್ಲಿಂದ ಬರುವ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
"ಸ್ವಯಂಚಾಲಿತ ಸಿಗ್ನಲಿಂಗ್ ರೈಲು ಮೂಲಸೌಕರ್ಯವನ್ನು ಆಧುನೀಕರಿಸುವ ಮತ್ತು ಉತ್ತಮಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಹೆಚ್ಚು ಪರಿಣಾಮಕಾರಿ ಮತ್ತು ದೃಢವಾದ ಸಾರಿಗೆ ಜಾಲವನ್ನು ಖಾತ್ರಿಪಡಿಸುತ್ತದೆ. ಸ್ವಯಂಚಾಲಿತ ಸಿಗ್ನಲಿಂಗ್ ಅಳವಡಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಎಸ್‌ಡಬ್ಲ್ಯೂಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
SWR ಅಧಿಕಾರಿಯು ಹೇಳುವಂತೆ, "ಮೊದಲನೆಯದಾಗಿ, ನಿಲ್ದಾಣಗಳಿಂದ ಕೋಚಿಂಗ್ ರೈಲುಗಳ ಕ್ಲಿಯರೆನ್ಸ್ ಅನ್ನು ಖಾತ್ರಿಪಡಿಸುವ ಮೂಲಕ ಪ್ಲಾಟ್‌ಫಾರ್ಮ್‌ಗಳಂತಹ ಸ್ಥಿರ ಸ್ವತ್ತುಗಳ ಅತ್ಯುತ್ತಮ ಬಳಕೆಯನ್ನು ಇದು ಅನುಮತಿಸುತ್ತದೆ. ಇದರರ್ಥ ರೈಲುಗಳು ತ್ವರಿತವಾಗಿ ನಿರ್ಗಮಿಸಬಹುದು, ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ದಕ್ಷತೆಯನ್ನು ಸುಧಾರಿಸುತ್ತದೆ. ಎರಡನೆಯದಾಗಿ, ಲೈನ್ ಸಾಮರ್ಥ್ಯವು 100% ಮೀರಿದೆ ಮತ್ತು ಶುದ್ಧತ್ವವು ಸಂಭವಿಸಿದ ವಿಭಾಗಗಳಲ್ಲಿ, ಸ್ವಯಂಚಾಲಿತ ಸಿಗ್ನಲಿಂಗ್‌ನ ಪರಿಚಯವು ಹೆಚ್ಚಿನ ಸಂಖ್ಯೆಯ ಕೋಚಿಂಗ್ ಮತ್ತು ಸರಕು ರೈಲುಗಳ ಕಾರ್ಯಾಚರಣೆಯನ್ನು ಶಕ್ತಗೊಳಿಸುತ್ತದೆ.












Click it and Unblock the Notifications