ಬೆಂಗಳೂರಿನಲ್ಲಿ ಭಾರತ-ದ. ಆಫ್ರಿಕಾ ಪಂದ್ಯ: ಸ್ಟೇಡಿಯಂ ಸುತ್ತ ಸಂಚಾರ, ಪಾರ್ಕಿಂಗ್ ನಿರ್ಬಂಧ

ಬೆಂಗಳೂರು, ಜೂನ್ 19: ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಅಂತಾರಾಷ್ಟ್ರೀಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಈಗಾಗಲೇ ಉಭಯ ತಂಡಗಳು 2-2 ಪಂದ್ಯಗಳಲ್ಲಿ ಗೆದ್ದು ಸಮಬಲ ಸಾಧಿಸಿದ್ದು, ಭಾನುವಾರದ ಪಂದ್ಯ ಕುತೂಹಲವನ್ನು ಹೆಚ್ಚಿಸಿದೆ.

40000 ಆಸನದ ಸಾಮರ್ಥ್ಯ ಹೊಂದಿರುವ ಚಿನ್ನಸ್ವಾಮಿ ಕ್ರೀಡಾಂಗಣ ಭಾನುವಾರದ ಪಂದ್ಯದಲ್ಲಿ ಭರ್ತಿಯಾಗಲಿದೆ. ಪಂದ್ಯದ ವೇಳೆ ಕ್ರೀಡಾಂಗಣದ ಸುತ್ತ ಮತ್ತು ಸಮೀಪದ ಹಲವು ರಸ್ತೆಗಳಲ್ಲಿ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಉಂಟಾಗುವುದರಿಂದ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಹಲವು ರಸ್ತೆಗಳಲ್ಲಿ ಪಾರ್ಕಿಂಗ್, ಸಂಚಾರಕ್ಕೆ ನಿರ್ಬಂಧ ವಿಧಿಸಿದೆ.

ಮಧ್ಯಾಹ್ನ 2 ರಿಂದ ಮಧ್ಯರಾತ್ರಿ 12.30 ರವರೆಗೆ ಕೆಳಗಿನ ಪ್ರದೇಶಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಿಎಂಆರ್‌ಸಿಎಲ್ ಕೂಡ ಕ್ರಿಕೆಟ್ ಪ್ರೇಮಿಗಳ ಅನುಕೂಲಕ್ಕಾಗಿ ವಿಶೇಷ ಮೆಟ್ರೋ ರೈಲುಗಳನ್ನು ಓಡಿಸಲಿದೆ.

ಟ್ರಾಫಿಕ್, ಪಾರ್ಕಿಂಗ್ ಕಿರಿಕಿರಿ ಬೇಡ ಅನ್ನುವವರು ಮೆಟ್ರೋ ಸೌಲಭ್ಯ ಬಳಸಬಹುದು. ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ನಮ್ಮ ಮೆಟ್ರೋ ವಿಶೇಷ ಟಿಕೆಟ್ ನೀಡಲಿದ್ದು, ಪಂದ್ಯ ವೀಕ್ಷಿಸುವವರು ಟಿಕೆಟ್ ಬಳಸಿ ಪ್ರಯಾಣ ಮಾಡಬಹುದು.

ಇಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ

ಇಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ

ಬಾಳೇಕುಂದ್ರಿ ವೃತ್ತ ಮತ್ತು ಕ್ವೀನ್ಸ್ ವೃತ್ತದ ನಡುವೆ ಕ್ವೀನ್ಸ್ ರಸ್ತೆಯಲ್ಲಿ ಎರಡೂ ಬದಿ ಪಾರ್ಕಿಂಗ್ ನಿಷೇಧಿಸಲಾಗಿದೆ, ಕ್ವೀನ್ಸ್ ವೃತ್ತ ಮತ್ತು ಕಾವೇರಿ ಎಂಪೋರಿಯಂ ಜಂಕ್ಷನ್ ನಡುವೆ ಎಂಜಿ ರಸ್ತೆ, ಲಿಂಕ್ ರಸ್ತೆ, ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ, ಟಿ ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ, ಅನಿಲ್ ಕುಂಬ್ಳೆ ವೃತ್ತ ಮತ್ತು ಶಿವಾಜಿನಗರ ಬಸ್ ನಿಲ್ದಾಣದ ನಡುವಿನ ಸೆಂಟ್ರಲ್ ಸ್ಟ್ರೀಟ್‌ನಲ್ಲಿ ಎರಡೂ ಬದಿಯ ಪಾರ್ಕಿಂಗ್ ನಿಷೇಧಿಸಲಾಗಿದೆ, ಕಬ್ಬನ್ ರಸ್ತೆಯಲ್ಲಿ ಸಿಟಿಒ ವೃತ್ತ ಮತ್ತು ಕಾಮರಾಜ ರಸ್ತೆ ಜಂಕ್ಷನ್ ನಡುವೆ ಎರಡೂ ಬದಿ ಪಾರ್ಕಿಂಗ್ ಮಾಡಬಾರದು.

ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ ನಡುವೆ ಡಿಕನ್ಸನ್ ರಸ್ತೆ ಜಂಕ್ಷನ್, ಸೇಂಟ್ ಮಾರ್ಕ್ಸ್ ರಸ್ತೆ ಕ್ಯಾಶ್ ಫಾರ್ಮಸಿ ಜಂಕ್ಷನ್ ಮತ್ತು ಅನಿಲ್ ಕುಂಬ್ಳೆ ವೃತ್ತ, ಮ್ಯೂಸಿಯಂ ರಸ್ತೆ ಎಂಜಿ ರಸ್ತೆ ಮತ್ತು ಸೇಂಟ್ ಮಾರ್ಕ್ಸ್ ರಸ್ತೆ ನಡುವೆ ರೆಸಿಡೆನ್ಸಿ ರಸ್ತೆ, ಕಸ್ತೂರಬಾವರೆಗೆ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ.

ಕ್ವೀನ್ಸ್‌ ವೃತ್ತದಿಂದ ಹಡ್ಸನ್‌ ವೃತ್ತ, ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್‌ಆರ್‌ಎಂಆರ್‌ ವೃತ್ತ, ಕಬ್ಬನ್‌ ಪಾರ್ಕ್‌ ಒಳಗೆ, ಪ್ರೆಸ್‌ ಕ್ಲಬ್‌ ಹಾಗೂ ಬಾಲಭವನ ಕಾರಂಜಿ ರಸ್ತೆ, ಕ್ವೀನ್ಸ್‌ ವೃತ್ತದಿಂದ ವಿಟ್ಲ ಮಲ್ಯ ರಸ್ತೆ ನಡುವೆ ಲಾವೆಲ್ಲೆ ರಸ್ತೆ, ಸಿದ್ದಲಿಂಗಯ್ಯ ವೃತ್ತ ಮತ್ತು ಬಿಷಪ್‌ಕಾಟನ್ ಬಾಲಕಿಯರ ಶಾಲೆ ನಡುವೆ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ.

ಪಾರ್ಕಿಂಗ್ ಮಾಡಲು ಸ್ಥಳ ನಿಗದಿ

ಪಾರ್ಕಿಂಗ್ ಮಾಡಲು ಸ್ಥಳ ನಿಗದಿ

ಮಲ್ಯ ಆಸ್ಪತ್ರೆ ಬಳಿಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಮ್ಯೂಸಿಯಂ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲಾ ಮೈದಾನ, ಯು ಬಿ ಸಿಟಿ ಮತ್ತು ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಪಂದ್ಯ ವೀಕ್ಷಿಸಲು ಬರುವವರಿಗೆ ಮಧ್ಯಾಹ್ನ 3 ರಿಂದ 12.30 ರವರೆಗೆ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ನಿಗದಿಪಡಿಸಲಾಗಿದೆ. ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಎಸ್‌ಸಿಎ ಸದಸ್ಯರು ಪಾರ್ಕಿಂಗ್ ಮಾಡಬಹುದು.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರವೇಶ ಮಾರ್ಗ

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರವೇಶ ಮಾರ್ಗ

ಕಬ್ಬನ್ ರಸ್ತೆಯಲ್ಲಿ ಗೇಟ್ ನಂ.1 ರಿಂದ ಗೇಟ್ ನಂ.6, ಲಿಂಕ್ ರಸ್ತೆಯಲ್ಲಿ ಗೇಟ್ ನಂ.7 ರಿಂದ ಗೇಟ್ ನಂ.11 ರಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸಬಹುದು. ಅನಿಲ್ ಕುಂಬ್ಳೆ ವೃತ್ತದಿಂದ ಲಿಂಕ್ ರಸ್ತೆ ಮತ್ತು ಬಿಆರ್‌ವಿ ವೃತ್ತ ಮತ್ತು ಗೇಟ್ ನಂ.12 ರಿಂದ ಕ್ವೀನ್ಸ್ ರಸ್ತೆಯಲ್ಲಿ ಗೇಟ್ ನಂ.21 ಕ್ಕೆ ಪಂದ್ಯವನ್ನು ವೀಕ್ಷಿಸಲು ತೆರಳುವವರು ತಲುಪಲು ಸೂಚಿಸಲಾಗಿದೆ.

ಈ ಮಾರ್ಗದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ

ಈ ಮಾರ್ಗದಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ

ಇನ್‌ಫೆಂಟ್ರಿ ರಸ್ತೆ, ಬಾಳೇಕುಂದ್ರಿ ರಸ್ತೆಯಿಂದ ಸಿಟಿಒ ವೃತ್ತದ ಕಡೆಗೆ ಚಲಿಸುವ ವಾಹನಗಳು ಟ್ರಾಫಿಕ್ ಹೆಡ್ ಕ್ವಾರ್ಟರ್ಸ್ ಜಂಕ್ಷನ್‌ಗೆ ಬಂದು ಇನ್‌ಫೆಂಟ್ರಿ ರಸ್ತೆಯಲ್ಲಿ ಮಾತ್ರ ಚಲಿಸುವಂತೆ ಸೂಚಿಸಲಾಗಿದೆ. ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತಕ್ಕೆ ತೆರಳುವ ವಾಹನಗಳು ಸಿದ್ದಲಿಂಗಯ್ಯ ವೃತ್ತದಲ್ಲಿ ಬಲಕ್ಕೆ ತಿರುಗಿ ಮಲ್ಯ ಆಸ್ಪತ್ರೆ ರಸ್ತೆ ಕಡೆಗೆ ಹೋಗುವಂತೆ ಸೂಚಿಸಲಾಗಿದೆ.

ಎಮ್ ಜಿ ರಸ್ತೆಯಿಂದ ಕ್ವೀನ್ಸ್ ವೃತ್ತದ ಕಡೆಗೆ ಹೋಗುವ ವಾಹನಗಳು ವೆಬ್ಸ್ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಡಿಕನ್ಸನ್ ರಸ್ತೆಯಲ್ಲಿ ಹೋಗಲು ಸೂಚಿಸಲಾಗಿದೆ. ಕಬ್ಬನ್ ರಸ್ತೆಯ ಮಣಿಪಾಲ ಸೆಂಟರ್‌ನಿಂದ ಸಿಟಿಒ ವೃತ್ತದ ಕಡೆಗೆ ಸಾಗುವ ವಾಹನಗಳು ಬಿಆರ್‌ವಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಸೆಂಟ್ರಲ್ ಸ್ಟ್ರೀಟ್, ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ ಹೋಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+