ಭಾರತ ಜಾಗತಿಕ ಶಕ್ತಿಯಾಗಿದ್ದರಿಂದ ಧೋಕ್ಲಾಂ ಸಮಸ್ಯೆ ಇತ್ಯರ್ಥ: ರಾಜನಾಥ್

ಬೆಂಗಳೂರು, ಅಕ್ಟೋಬರ್ 8: ಭಾರತ ಜಾಗತಿಕ ಶಕ್ತಿಯಾಗಿ ಎದ್ದು ನಿಂತಿದ್ದರಿಂದ ಚೀನಾ ಜತೆಗಿನ ಧೋಕ್ಲಾಂ ಸಮಸ್ಯೆ ಬಗೆ ಹರಿಯಿತು ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ.

ಅರಮನೆ ಮೈದಾನದಲ್ಲಿ ಇಂದು ನಡೆದ ವಿಶ್ವಕರ್ಮ ಸಮುದಾಯದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಭಾರತದ ಗೌರವ, ಪ್ರತಿಷ್ಠೆ ಜಾಗತಿಕ ಮಟ್ಟದಲ್ಲಿ ಬದಲಾಗಿದೆ ಎಂದು ಅಭಿಪ್ರಾಯಪಟ್ಟರು.

India is a world power, So Doklam issue got resolved: Rajnath in Bengaluru

ಧೋಕ್ಲಾಂ ಬಿಕ್ಕಟ್ಟಿನುದ್ದಕ್ಕೂ ಭಾರತ ಪರಿಪಕ್ವ ನಡವಳಿಕೆ ತೋರಿತು ಎಂದ ರಾಜನಾಥ್ ಸಿಂಗ್, "ಭಾರತ ಜಾಗತಿಕ ಶಕ್ತಿಯಾಗಿದೆ. ಒಂದೊಮ್ಮೆ ಭಾರತ ಅಶಕ್ತ ರಾಷ್ಟ್ರವಾಗೇ ಉಳಿದಿದ್ದರೆ ಧೋಕ್ಲಾಂ ವಿವಾದ ಯಾವತ್ತೂ ಬಗೆ ಹರಿಯುತ್ತಲೇ ಇರಲಿಲ್ಲ," ಎಂದು ವಿಶ್ಲೇಷಿಸಿದರು.

ಚೀನಾ ಗಡಿಗೆ ನಿರ್ಮಲಾ ಸೀತಾರಾಮನ್

ಇನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಚೀನಾ ಗಡಿ ನಾಥು ಲಾ ಗೆ ಭೇಟಿ ನೀಡಿದರು. ಈ ವೇಳೆ ಚೀನಿ ಸೈನಿಕರು ರಕ್ಷಣಾ ಸಚಿವರಿಗೆ ಕೈ ಮುಗಿದು ವಂದಿಸಿದರು. ಗಡಿಯಾಚೆಗೆ ನಿಂತು ರಕ್ಷಣಾ ಸಚಿವರ ಫೋಟೋಗಳನ್ನು ಚೀನಿ ಸೈನಿಕರು ತೆಗೆದುಕೊಳ್ಳುತ್ತಿದ್ದುದು ಕಂಡು ಬಂತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+