2ನೇ ಬಾರಿ ವಿಚಾರಣೆಗೆ ಬರುವಂತೆ ಡಿಕೆಶಿಗೆ ಐಟಿ ಬುಲಾವ್
ಬೆಂಗಳೂರು, ಆಗಸ್ಟ್ 09 : ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನಲೆಯಲ್ಲಿ ಒಂದು ಬಾರಿ ವಿಚಾರಣೆಗೆ ಹಾಜರಾಗಿದ್ದ ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ 2ನೇ ಬಾರಿ ವಿಚಾರಣೆಗೆ ಬರುವಂತೆ ಐಟಿ ಅಧಿಕಾರಿಗಳು ಬುಧವಾರ ಸಮನ್ಸ್ ಜಾರಿ ಮಾಡಿದ್ದಾರೆ.
ಈಗಾಗಲೇ ಡಿಕೆ ಶಿವಕುಮಾರ್ ಅವರ ಮೊದಲ ಬಾರಿಯ ವಿಚಾರಣೆ ಮುಗಿದಿದ್ದು, ಇದೀಗ 2ನೇ ಬಾರಿಯ ವಿಚಾರಣೆಗೆ ಗುರುವಾರ (ಆಗಸ್ಟ್ 10) ಬೆಂಗಳೂರಿನಲ್ಲಿರುವ ಕೇಂದ್ರ ಆದಾಯ ತರಿಗೆ ಕಚೇರಿಗೆ ಬರುವಂತೆ ಡಿಕೆ ಶಿವಕುಮಾರ್ ಹಾಗೂ ಆಪ್ತ, ಸಂಬಂಧಿಕರಿಗೆ ಆದಾಯ ತೆರಿಗೆ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.

ಕರ್ನಾಟಕದ ಪವರ್ ಫುಲ್ ಸಚಿವ ಡಿಕೆ ಶಿವಕುಮಾರ್ ಹಾಗೂ ಅವರ ಆಪ್ತರಿ ಐಟಿ ದಾಳಿಯಿಂದಾಗಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ದಾಳಿಯ ವೇಳೆ 300 ಕೋಟಿ ರು.ಗೂ ಅಧಿಕ ಅಘೋಷಿತ ಆಸ್ತಿ-ಪಾಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿದ್ದವು ಎನ್ನಲಾಗಿದೆ.












Click it and Unblock the Notifications