ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಚೆನ್ನೈನ ಸತ್ಯಂ ಸಿನಿಮಾಸ್
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರು ಅಂತಸ್ತುಗಳ ಗಂಗಮ್ಮ ತಿಮ್ಮಯ್ಯ (ಜಿಟಿ ಮಾಲ್) ವರ್ಲ್ಡ್ ಮಾಲ್ ಗೆ ಹೊಸ ಆಕರ್ಷಣೆ ಶುಕ್ರವಾರ(ಜೂನ್ 09) ಸೇರ್ಪಡೆಗೊಂಡಿದೆ.
ಬೆಂಗಳೂರು, ಜೂನ್ 08 : ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಆರು ಅಂತಸ್ತುಗಳ ಗಂಗಮ್ಮ ತಿಮ್ಮಯ್ಯ (ಜಿಟಿ ಮಾಲ್) ವರ್ಲ್ಡ್ ಮಾಲ್ ಗೆ ಹೊಸ ಆಕರ್ಷಣೆ ಶುಕ್ರವಾರ(ಜೂನ್ 09) ಸೇರ್ಪಡೆಗೊಂಡಿದೆ.
ಒಂದು ಅಂತಸ್ತಿನಲ್ಲಿ ಐದು ಸಿನಿಮಾ ಸ್ಕ್ರೀನ್ ಗಳನ್ನು ಅಳವಡಿಸಲಾಗಿದ್ದು, ಚೆನ್ನೈನ ಸತ್ಯಂ ಸಿನಿಮಾಸ್ 7.1 ಡಾಲ್ಬಿ ಸಿಸ್ಟಮ್ ನಡಿ ಅತ್ಯಾಧುನಿಕವಾಗಿ ಹೈಟೆಕ್ ತಂತ್ರಜ್ಞಾನದೊಂದಿಗೆ ಸಿನಿಮಾ ಸ್ಕ್ರೀನ್ಸ್ ನಿರ್ಮಿಸಿದ್ದಾರೆ.
[ಮಾಗಡಿ ರಸ್ತೆಯಲ್ಲಿ ಅನಾವರಣಗೊಂಡ ಬೃಹತ್ ಮಾಲ್]
'ದ ಸಿನಿಮಾ' ಎಂದು ಈ ಮಲ್ಟಿಪ್ಲೆಕ್ಸ್ ಗೆ ಹೆಸರಿಡಲಾಗಿದೆ. 2017ರ ಜನವರಿ 16ರಂದು ಲೋಕಾಪರ್ಣೆಗೊಂಡಿದ್ದ ಸುಮಾರು 160 ಕೋಟಿ ರೂ. ವೆಚ್ಚದ ಮಾಲ್ ಇದಾಗಿದೆ.
ಮಾರ್ಚ್ 1ರಿಂದ ಸಿನಿಮಾ ಪ್ರದರ್ಶನ ಆರಂಭಗೊಳ್ಳಬೇಕಿತ್ತು. ಆದರೆ, ತಾಂತ್ರಿಕ ತೊಂದರೆಯಿಂದ ವಿಳಂಬವಾಗಿ ಜೂನ್ 09ರಿಂದ ಕಾರ್ಯಾರಂಭ ಮಾಡುತ್ತಿದೆ. ಸಾಮಾನ್ಯ ಟಿಕೆಟ್ ದರ(ಎಲೈಟ್ ಕ್ಲಾಸ್) 100 ರಿಂದ 120ರೂ. ಆಗಲಿದ್ದು, ಗೋಲ್ಡ್ ಸೀಟ್‍ಗೆ 170 ರಿಂದ 290 ರೂ. ನಿಗದಿ ಪಡಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಮಾಲೀಕರಾದ ಟಿ.ಆನಂದಪ್ಪ ತಿಳಿಸಿದ್ದಾರೆ.

ಕನ್ನಡ ಸಿನಿಮಾಗಳಿಗಾಗಿ ಮೀಸಲು
* ಒಂದು ಸಿನಿಮಾ ಸ್ಕ್ರೀನ್ ನಲ್ಲಿ 225 ಮಂದಿ ಸಿನಿಮಾ ನೋಡಲು ಅವಕಾಶವಿದ್ದು, ಎರಡು ಸ್ಕ್ರೀನ್ ಗಳನ್ನು ಕನ್ನಡ ಸಿನಿಮಾಗಳಿಗಾಗಿ ಮೀಸಲಿರಿಸಲು ಉದ್ದೇಶಿಸಲಾಗಿದೆ.
* ಮೂರು ಸ್ಕ್ರೀನ್ ಗಳನ್ನು ಇತರೆ ಭಾಷೆಗಳ ಚಿತ್ರಗಳಿಗೆ ನೀಡಲಾಗುತ್ತದೆ. ದ್ವಿಚಕ್ರ ವಾಹನ ಪಾರ್ಕಿಂಗ್‍ಗೆ 10ರೂ., ಕಾರ್ ಪಾರ್ಕಿಂಗ್‍ಗೆ 30ರೂ. ನಿಗದಿಪಡಿಸಲಾಗಿದೆ ಎಂದು ಟಿ ಆನಂದಪ್ಪ ಹೇಳಿದರು.

ರಾಕ್‍ಲೈನ್ ವೆಂಕಟೇಶ್ ಕನಸು
2002ರಲ್ಲೇ ರಾಕ್‍ಲೈನ್ ವೆಂಕಟೇಶ್ ಹಾಗೂ ತಾವು ಈ ಬೃಹತ್ ಮಾಲ್ ನಿರ್ಮಾಣ ಮಾಡಲು ಮುಂದಾಗಿದ್ದರು. ನಂತರ ನಗರದ ಹೊರವಲಯದಲ್ಲಿ ಸಿನಿಮಾ ಹಾಲ್ ನಿರ್ಮಿಸಿದರು. 2008ರಲ್ಲಿ ಮಾಲ್ ನಿರ್ಮಾಣಕ್ಕೆ ಅನುಮತಿ ದೊರೆತಿತ್ತು.2010ಕ್ಕೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಈಗ ಪೂರ್ಣವಾಗಿದೆ. ನಾಲ್ಕು ತಿಂಗಳ ವಿಳಂಬದ ಬಳಿಕ ಇಂದು ಮೊದಲ ಸಿನಿಮಾ ಓಡುತ್ತಿದೆ.

ಜಿಟಿ ಮಾಲ್ ಬಗ್ಗೆ
* 2.5 ಎಕರೆ ವಿಸ್ತೀರ್ಣ, ಒಟ್ಟಾರೆ 250 ಕೋಟಿ ರು ವೆಚ್ಚ
* 'ದ ಸಿನಿಮಾ' ದಲ್ಲಿ ಐದು ಸ್ಕ್ರೀನ್ ಸಿನಿಮಾ ಹಾಲ್ , 7.1 ಸೌಂಡ್ ಸಿಸ್ಟಮ್
* 100 ರಿಂದ 120 ಟಿಕೆಟ್ ದರ, ಗೋಲ್ಡ್ ಕ್ಲಾಸ್ 300ಗಿಂತ ಕಡಿಮೆ
* ನಾಲ್ಕು ಅಂತಸ್ತುಗಳಲ್ಲಿ ಬಿಗ್ ಬಜಾರ್ ಸೇರಿದಂತೆ 57 ಬ್ರಾಂಡ್ ಸ್ಟಾಲ್
* ವಿಜಯಗರದ ಹಾದಿಯಲ್ಲಿ ಮಾಗಡಿ ರಸ್ತೆಯಲ್ಲಿರುವ ಮಾಲ್

ಸತ್ಯಂ ಸಿನಿಮಾಸ್ ಸ್ಪೆಷಲ್
* ಎಲ್ಲಾ ಸ್ಕ್ರೀನ್ ಗಳು 4K ಪ್ರೊಜೆಕ್ಷನ್ ಬಾರ್ಕೊ, ಹಾರ್ಕ್ ನೆಸ್ ಕ್ಲಾರಸ್ ಎಕ್ಸ್ ಸಿ ಸಿಲ್ವರ್ ಸ್ಕ್ರೀನ್, 3ಡಿ ತಂತ್ರಜ್ಞಾನ,ಡಾಲ್ಬಿ atmos ಹೊಂದಿವೆ.
* ಮಾಲ್ ನಲ್ಲಿರುವ ಫುಡ್ ಕೋರ್ಟ್ ನ ಮೆನು ಕಾರ್ಡ್ ಹಾಗೂ ವಿನ್ಯಾಸ ಫ್ರೆಂಚ್ ಬಾಣಸಿಗ ಮೈಕಲ್ ಬೆಸ್ಸೆ ಮಾಡಿದ್ದಾರೆ.












Click it and Unblock the Notifications