ಚಿತ್ರ: ಯುಎಸ್ ನಲ್ಲಿ ಮೋದಿ ಅವರ ಆ ದಿನಗಳು
ಬೆಂಗಳೂರು, ಸೆ.26: ಪ್ರಧಾನಿ ನರೇಂದ್ರ ಮೋದಿ ಅವರ ಐದು ದಿನಗಳ ಅಧಿಕೃತ ಅಮೆರಿಕ ಪ್ರವಾಸ ಆರಂಭಗೊಳ್ಳುವುದಕ್ಕೂ ಮುನ್ನವೇ ಮೋದಿ ಪ್ರವಾಸದ ಬಗ್ಗೆ ರಾಜಕಾರಣಿಗಳು, ಉದ್ಯಮಿಗಳಲ್ಲದೆ ಸಾರ್ವನಿಕರಲ್ಲೂ ಕುತೂಹಲ ಹೆಚ್ಚಾಗಿದೆ. ಸೆ.26 ರಿಂದ ಮೋದಿ ಅವರ ಪ್ರವಾಸ ಆರಂಭಗೊಳ್ಳಲಿದೆ.
ಮೋದಿ-ಒಬಾಮಾ ಭೇಟಿ, ಉದ್ಯಮಿಗಳ ಜೊತೆ ಭೇಟಿ, ಮ್ಯಾಡಿಸನ್ ಸ್ಕ್ವೇರ್ ಹಾಗೂ ವಿಶ್ವಸಂಸ್ಥೆ ಭಾಷಣ ಸಾಲು ಸಾಲು ಕಾರ್ಯಕ್ರಮ ಪಟ್ಟಿಗಳ ನಡುವೆ ಮೋದಿ ಅವರು 90 ರ ದಶಕದಲ್ಲಿ ಕೈಗೊಂಡಿದ್ದ ಯುಎಸ್ ಜಾಲಿ ಟ್ರಿಪ್ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಗಿರಕಿ ಹೊಡೆಯುತ್ತಿವೆ.
ಮೋದಿ ಅವರು ತಮ್ಮ ಐದು ದಿನಗಳ ಪ್ರವಾಸದ ವೇಳೆ ನ್ಯೂಯಾರ್ಕ್, ವಾಷಿಂಗ್ಟನ್ ಸೇರಿ ಅಮೆರಿಕ ಪ್ರಮುಖ ನಗರಗಳಲ್ಲಿ ಸಂಚರಿಸಲಿದ್ದಾರೆ. ಈ ಅವಧಿಯಲ್ಲಿ 50ಕ್ಕೂ ಹೆಚ್ಚು ಕಾರ್ಯಕ್ರಮ, ಸಂದರ್ಶನ, ಸಭೆ ನಡೆಸಲಿದ್ದಾರೆ.ಮೋದಿ ಭೇಟಿಗಾಗಿ ಗೂಗಲ್, ಬೋಯಿಂಗ್, ಜನರಲ್ ಎಲೆಕ್ಟ್ರಿಕ್ ಸೇರಿದಂತೆ 15ಕ್ಕೂ ಅಧಿಕ ಟಾಪ್ ಕಾರ್ಪೊರೇಟ್ ದಿಗ್ಗಜರು ಕಾದಿದ್ದಾರೆ. [ಮೋದಿಗಾಗಿ ಕಾದಿರುವ ಯುಎಸ್]
ವಿಶೇಷವೆಂದರೆ ಅಮೆರಿಕಕ್ಕೆ 90 ರ ದಶಕದಲ್ಲಿ ಮೋದಿ ಅವರು ಪ್ರವಾಸ ಕೈಗೊಂಡಾಗ ಅವರ ಜೊತೆಗೆ ಕರ್ನಾಟಕದ ಬಿಜೆಪಿ ಮುಖಂಡ ಬೆಂಗಳೂರು ದಕ್ಷಿಣ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ್ ಅವರು ಇದ್ದರು. ಮೋದಿ ಅವರು ಅಮೆರಿಕದ ಕಡಲ ತೀರದಲ್ಲಿ ಸುತ್ತಾಡಿದ್ದು, ಬೋಟ್ ರೇಸ್ ಮಾಡಿದ್ದು, ಶ್ವೇತ ಭವನದ ಮುಂದೆ ನಿಂತು ಪೋಸ್ ಕೊಟ್ಟ ಚಿತ್ರಗಳಿವೆ. [ಯುಎಸ್ ಪ್ರವಾಸದ ವೇಳಾಪಟ್ಟಿ]

ಯುಎಸ್ ಪ್ರವಾಸ ಚಿತ್ರಗಳು
1999ರಲ್ಲಿ ಮತ್ತೊಮ್ಮೆ ಮೋದಿ ಅವರು ಯುಎಸ್ ಪ್ರವಾಸ ಕೈಗೊಂಡಿದ್ದರು. ಆಗಲೂ ಮೋದಿ ಅವರು ಕೇವಲ ಪಕ್ಷದ ಪ್ರಚಾರಕ ಸಾಮಾನ್ಯ ಕಾರ್ಯಕರ್ತರೇ ಯುಎಸ್ ನಲ್ಲಿ ಸುತ್ತಾಡಿದ್ದರು.

ನಿರಂತರವಾಗಿ ವೀಸಾ ನಿರಾಕರಿಸಲಾಗಿತ್ತು
2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದ ನಂತರ 2005ರಿಂದ ಮೋದಿ ಅವರಿಗೆ ನಿರಂತರವಾಗಿ ವೀಸಾ ನಿರಾಕರಿಸಲಾಗಿತ್ತು. ಈಗ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರತಿನಿಧಿಯಾಗಿ ಅಮೆರಿಕಕ್ಕೆ ಮೋದಿ ತೆರಳುತ್ತಿದ್ದಾರೆ.

ಸೂಟುಧಾರಿ ಮೋದಿ-ಅನಂತ್ ಕುಮಾರ್
ಸೂಟುಧಾರಿಗಳಾಗಿ ನರೇಂದ್ರ ಮೋದಿ-ಅನಂತ್ ಕುಮಾರ್

ಶ್ವೇತಭವನದ ಮುಂದೆ ನರೇಂದ್ರ ಮೋದಿ
ಬಿಜೆಪಿಯ ಸಹ ಪ್ರಚಾರಕರ ಜೊತೆ ಶ್ವೇತಭವನದ ಮುಂದೆ ನರೇಂದ್ರ ಮೋದಿ ಸರಳ ಕುರ್ತಾ ದಿರಿಸಿನಲ್ಲಿ ಕಾಣಿಸಿಕೊಂಡಿದ್ದರು.

ಆಮೆರಿಕದ ವಿವಿಧ ತಾಣಗಳಲ್ಲಿ ಮೋದಿ
ಆಮೆರಿಕದ ವಿವಿಧ ಪ್ರವಾಸಿ ತಾಣಗಳಿಗೆ ಮೋದಿ ಹಾಗೂ ಅನಂತ್ ಅವರು ಭೇಟಿ ನೀಡಿದ್ದರು.

ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ
ಈಗ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಧಾನಿಯಾಗಿ ಮೋದಿ ಅವರು ಸೆ.27ರಂದು ಭಾಷಣ ಮಾಡಲಿದ್ದಾರೆ.

ಅಮೆರಿಕನ್ನರ ಜೊತೆ ಮೋದಿ ಪೋಸ್
ಅಮೆರಿಕನ್ನರ ಜೊತೆ ಮೋದಿ ಪೋಸ್ ನೀಡಿರುವ ಚಿತ್ರ. (source: kishanreddy.org)

ಅಮೆರಿಕನ್ ಅಧಿಕಾರಿಗಳ ಜೊತೆ ಮೋದಿ
ಅಮೆರಿಕನ್ ಅಧಿಕಾರಿಗಳ ಜೊತೆ ಮೋದಿ ಹಾಗೂ ಅನಂತ್ ಕುಮಾರ್ ಅವರಿರುವ ಚಿತ್ರ (source: kishanreddy.org)












Click it and Unblock the Notifications