ಗಾಳಿ ಮಳೆಗೆ ತತ್ತರಿಸಿದ ಬೆಂಗಳೂರು 'ಮಹಾನಗರ'
ಬೆಂಗಳೂರು,
ಏ. 30: ಬೆಂಗಳೂರಲ್ಲಿ ಬೆಳಗ್ಗೆ ಸಾರಿಗೆ ನೌಕರರ ಮುಷ್ಕರದಿಂದ ನಾಗರೀಕರು ಪರಿತಪಿಸಿದ್ದರೆ, ಮಧ್ಯಾಹ್ನ ವರುಣದೇವ ಕಾಟ ನೀಡಿದ್ದಾನೆ. ಶುಭ್ರವಾಗಿದ್ದ ಆಗಸದಲ್ಲಿ ಏಕಾಏಕಿ ಮೋಡಗಳು ಕಾಣಿಸಿಕೊಂಡವು. ನಗರದೆಲ್ಲೆಡೆ ಸುಮಾರು ಮುಕ್ಕಾಲು ಗಂಟೆಗಳ ಕಾಲ ಗುಡುಗಿನಿಂದ ಕೂಡಿದ ಮಳೆ ಸುರಿಯಿತು. ಗಾಳಿ ಜೋರಾಗಿ ಬೀಸುವಿದರೊಂದಿಗೆ ಆರಂಭವಾದ ಮಳೆ ಮಲೆನಾಡ ವಾತಾವರಣವನ್ನು ನೆನಪು ಮಾಡಿದ್ದು ಸುಳ್ಳಲ್ಲ. id="toptextpromo"> id='are-slot-1' class='oiad oi-axt oiadv'>ಮಧ್ಯಾಹ್ನ
4 ಗಂಟೆ ವೇಳೆಗೆ ಆರಂಭವಾದ ಮಳೆ ಅನಾಹುತಗಳನ್ನು ಮಾಡಿತು. ಗಾಳಿ ಮಳೆ ರಭಸಕ್ಕೆ ಅನೇಕ ಕಡೆ ಮರಗಳು ಧರೆಗುರುಳಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಮುಷ್ಕರದ ಪರಿಣಾಮ ಅಲ್ಲಲ್ಲಿ ಸಿಕ್ಕಿಹಾಕಿಕೊಂಡು ಬಸ್ ಗೆ ಕಾಯುತ್ತಿದ್ದ ನಾಗರೀಕರು ಸಂಜೆ ವೇಳೆಗೆ ವ್ಯವಸ್ಥೆ ಸರಿ ಹೋಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಎಲ್ಲದಕ್ಕೂ ಅಡ್ಡಿ ಮಾಡಿ ಮರೆಯಾಯಿತು.[ಶುರುವಾಯಿತು ಮಳೆ, ಬೆಂಗಳೂರಲ್ಲಿ ಆತಂಕದ ಹೊಳೆ] id='are-slot-2' class='oiad oi-axt oiadv'>
ಎಲ್ಲೆಲ್ಲೂ ನೀರೆ ನೀರು
ಪ್ರತಿಬಾರಿ ಮಳೆಯಾದಾಗಲೂ ಬೆಂಗಳೂರಿಗರ ತಾಪತ್ರಯ ಮತ್ತೆ ಹೊಸದಾಗಿ ಹೇಳಬೇಕಾಗಿಲ್ಲ. ಜಯನಗರದ ಸುತ್ತಮುತ್ತಲೂ ಅನೇಕ ಮರಗಳು ಧರೆಗುರುಳಿದ್ದವು. ರಸ್ತೆ ಮೇಲೆ ಹರಿಯುತ್ತಿದ್ದ ನೀರು ಒಳಚರಂಡಿ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿತ್ತು.

ಕಾರ ಮೇಲೆ ಉರುಳಿದ ಮರ
ಜಯನಗರದ ಮಲಬಾರ್ ಗೋಲ್ಡ್ ಆಭರಣ ಮಳಿಗೆ ಬಳಿ ಕಾರಿನ ಮೇಲೊಂದು ಮರ ಉರುಳಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಚಲಿಸುತ್ತಿದ್ದ ಕಾರಿನ ಮೇಲೆ ಮರ ಮುರಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಅವಘಡ ಸಂಭವಿಸಿಲ್ಲ.

ರಸ್ತೆ ಮೇಲೆ ನೀರು
ಏಕಾಏಕಿ ಗುಡುಗು ಸಮೇತ ಗಾಳಿ ಮಳೆ ಆರಂಭವಾಗಿದ್ದರಿಂದ ನಾಗರಿಕರು ತಮ್ಮ ವಾಹನಗಳನ್ನು ರಸ್ತೆ ಬದಿಗೆ ನಿಲ್ಲಿಸಿಕೊಂಡರು. ಬಸ್ ಸಂಚಾರ ಇಲ್ಲವಾದ್ದರಿಂದ ಕೊಂಚ ಪ್ರಮಾಣದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿತ್ತು.

ಅಲ್ಲೋಲ-ಕಲ್ಲೋಲ
ಕಳೆದ ಗುರುವಾರದಿಂದ ಪ್ರತಿದಿನ ಸಂಜೆ ಮಳೆಯಾಗುತ್ತಿದೆ. ಬೆಳಗ್ಗೆ ಬಿಸಿಲಿನ ಪರಿತಾಪ ಜೋರಾಗಿರುತ್ತದೆ. ಸಂಜೆ ಏಕಾಏಕಿ ಗುಡುಗಿನಿಂದ ಕೂಡಿದ ಮಳೆ ಸುರಿಯುವುದು ಸಾಮಾನ್ಯ ಎಂಬ ರೀತಿ ಆಗಿಹೋಗಿದೆ.

ಹವಾಮಾನ ಇಲಾಖೆ ಮೂನ್ಸೂಚನೆ ನೀಡಿತ್ತು
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹಿಂದೆಯೇ ಹೇಳಿತ್ತು. ಶುಕ್ರವಾರ ಮತ್ತು ಶನಿವಾರ ಸಹ ಮಳೆ ಸುರಿಯುವ ಸಂಭವವಿದೆ ಎಂದು ಹೇಳಲಾಗಿದೆ.

ಕುಸಿದ ಉಷ್ಣಾಂಶ
ಗಾಳಿ ಮಳೆ ಪರಿಣಾಮ ಬೀಸಿಯೇರಿದ್ದ ಬೆಂಗಳೂರು ತಣ್ಣಗಾಗಿದೆ. 34 ಡಿಗ್ರಿ ಇದ್ದ ಉಷ್ಣಾಂಶ ಏಕಾಏಕಿ 24 ಡಿಗ್ರಿಗೆ ಕುಸಿದಿದೆ. ಅಲ್ಲದೇ ತಂಪು ಗಾಳಿ ಬೀಸುತ್ತಿದ್ದು ವಾಥಾವರಣದ ಏರುಪೇರು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೂ ಎದುರಾಗಿದೆ.


Click it and Unblock the Notifications
