ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಮಳೆ ನೀರಿನಲ್ಲಿ ಮುಳುಗಿತು ಬೆಂಗಳೂರಿಗರ ಬದುಕು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05 : ಗುರುವಾರ ಮಧ್ಯಾಹ್ನ ಬೆಂಗಳೂರು ನಗರದಲ್ಲಿ ಸುರಿದ ಮಳೆ ಭಾರೀ ಅನಾಹುತ ಉಂಟು ಮಾಡಿದೆ. ವಿವಿಧ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.

In Pics:ಕುಂಭದ್ರೋಣ ಮಳೆಗೆ ಮುಳುಗುತಿಹುದು ಬೆಂಗಳೂರು

ಮಲ್ಲೇಶ್ವರಂ, ನಾಯಂಡಹಳ್ಳಿ, ರಾಜಾಜಿನಗರ, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಬನ್ನೇರುಘಟ್ಟ ರಸ್ತೆ ಮುಂತಾದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

ಗುರುವಾರ ಮಧ್ಯಾಹ್ನ ಸುರಿದ ಮಳೆಗೆ ಬೆಂಗಳೂರಿಗರು ತತ್ತರಗುರುವಾರ ಮಧ್ಯಾಹ್ನ ಸುರಿದ ಮಳೆಗೆ ಬೆಂಗಳೂರಿಗರು ತತ್ತರ

ನಾಯಂಡಹಳ್ಳಿ, ಬಿನ್ನಿಮಿಲ್ ರಸ್ತೆಯಲ್ಲಿ ಎರಡು ಮನೆಗಳು ಕುಸಿದುಬಿದ್ದಿವೆ. ಶಿವಾನಂದ ಸರ್ಕಲ್, ಶಾಂತಿನಗರ, ಬಿಟಿಎಂ ರಿಂಗ್ ರಿಂಗ್ ರಸ್ತೆ, ಕೊನಪ್ಪನ ಅಗ್ರಹಾರ, ಶೇಷಾದ್ರಿಪುರಂ, ಮಹಾರಾಜ ಜಂಕ್ಷನ್ ಮುಂತಾದ ಪ್ರದೇಶಗಳಲ್ಲಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟಕರ್ನಾಟಕದ ಜಲಾಶಯಗಳ ನೀರಿನ ಮಟ್ಟ

ನಾಯಂಡಹಳ್ಳಿಯಲ್ಲಿ ರಾಜಾಕಾಲುವೆ ಉಕ್ಕಿ ಹರಿಯುತ್ತಿದ್ದು, ಕೊಳಚೆ ನೀರು ರಸ್ತೆಯ ತುಂಬಾ ತುಂಬಿಕೊಂಡಿದೆ. ವೈಟ್‌ಫೀಲ್ಡ್ ಬಳಿ ಸಿಲಿಂಡರ್‌ ಸಾಗಣೆ ಮಾಡುತ್ತಿದ್ದ ಲಾರಿಯ ಮೇಲೆ ಮರ ಬಿದ್ದಿದೆ. ವಿಲ್ಸನ್ ಗಾರ್ಡನ್‌ನಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ಆಂಬ್ಯುಲೆನ್ಸ್‌ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಕಳೆದ 9 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 65 ಮಿ.ಮೀ.ಮಳೆಯಾಗಿದೆ ಎಂದು ಸ್ಕೈ ಮೆಟ್ ವೆದರ್ ಮಾಹಿತಿ ನೀಡಿದೆ.

ಬಿಬಿಎಂಪಿ ಸಹಾಯವಣಿ ಸಂಖ್ಯೆ : 080-22660000

ಸಕಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿ ಬಿಬಿಎಂಪಿ ಆಪ್ಸಕಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿ ಬಿಬಿಎಂಪಿ ಆಪ್

ವಿಲ್ಸನ್ ಗಾರ್ಡನ್

ವಿಲ್ಸನ್ ಗಾರ್ಡನ್

ಗುರುವಾರ ಮಧ್ಯಾಹ್ನ ಸುರಿದ ಮಳೆಗೆ ವಿಲ್ಸನ್ ಗಾರ್ಡನ್ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ರಸ್ತೆಯಲ್ಲಿನ ವಾಹನಗಳು ನೀರಿನಲ್ಲಿ ಸಿಲುಕಿದೆ. ಆಂಬ್ಸುಲೆನ್ಸ್‌ ನೀರಿನಲ್ಲಿ ಮುಳುಗಡೆಗೊಂಡಿದೆ.

ನಾಯಂಡಹಳ್ಳಿ

ನಾಯಂಡಹಳ್ಳಿ

ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ರಾಜಾಕಾಲುವೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ವಾಹನ ಸವಾರರು ಪರದಾಡುತ್ತಿದ್ದಾರೆ.

ಶಾಂತಿನಗರದಲ್ಲಿ ರಸ್ತೆ ಜಲಾವೃತ

ಶಾಂತಿನಗರದಲ್ಲಿ ರಸ್ತೆ ಜಲಾವೃತ

ಶಾಂತಿನಗರದಲ್ಲಿ ಮಳೆ ನೀರು ರಸ್ತೆಯ ಎರಡೂ ಕಡೆ ತುಂಬಿಕೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಬನ್ನೇರುಘಟ್ಟ ರಸ್ತೆ

ಬನ್ನೇರುಘಟ್ಟ ರಸ್ತೆ

ಬನ್ನೇರುಘಟ್ಟ ಮುಖ್ಯ ರಸ್ತೆ ಮತ್ತು ಬಿಟಿಎಂ ಔಟರ್ ರಿಗ್ ರಸ್ತೆ ಮಳೆ ನೀರಿನಿಂದ ತುಂಬಿಕೊಂಡಿದ್ದು, ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದೆ.

ಕೋನಪ್ಪನ ಅಗ್ರಹಾರ

ಕೋನಪ್ಪನ ಅಗ್ರಹಾರ

ಕೋನಪ್ಪನ ಅಗ್ರಹಾರ ಬಳಿ ಮಳೆಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಬಿಎಂಟಿಸಿ ಬಸ್, ಕಾರು, ಸೇರಿದಂತೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಶೇಷಾದ್ರಿಪುರಂ ಕಡೆ ಹೋಗಬೇಡಿ

ಶೇಷಾದ್ರಿಪುರಂ ಕಡೆ ಹೋಗಬೇಡಿ

ಶೇಷಾದ್ರಿಪುರಂ ಬ್ರಿಡ್ಜ್ ಬಳಿ ರಸ್ತೆಯ ಮೇಲೆ ಮಳೆ ನೀರು ನಿಂತಿದ್ದು ಆ ಕಡೆ ಹೋಗಬೇಡಿ ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಮಹಾರಾಜ ಜಂಕ್ಷನ್

ಮಹಾರಾಜ ಜಂಕ್ಷನ್

ಮಹಾರಾಜ ಜಂಕ್ಷನ್, ವಿಪ್ರೋ ಜಂಕ್ಷನ್ ಗಳ ಬಳಿ ರಸ್ತೆಯ ಎರಡೂ ಕಡೆ ನೀರು ತುಂಬಿಕೊಂಡಿದ್ದು ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ನೆಹರು ಸರ್ಕಲ್

ನೆಹರು ಸರ್ಕಲ್

ಗುರುವಾರ ಮಧ್ಯಾಹ್ನ ಸುರಿದ ಮಳೆಗೆ ನೆಹರು ಸರ್ಕಲ್ ಬಳಿಯ ರಸ್ತೆ ಜಲಾವೃತವಾಗಿದೆ.

ವೀರಸಂದ್ರ ಜಂಕ್ಷನ್

ವೀರಸಂದ್ರ ಜಂಕ್ಷನ್

ವೀರಸಂದ್ರ ಜಂಕ್ಷನ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ.

ಪಿಇಎಸ್ ಕಾಲೇಜು ಬಳಿ

ಪಿಇಎಸ್ ಕಾಲೇಜು ಬಳಿಯ ನೈಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿರುವುದು

ಕ್ಯಾಂಪಸ್ ತುಂಬಾ ನೀರು

ಕ್ಯಾಂಪಸ್ ತುಂಬಾ ನೀರು

ಇನ್ಫೋಸಿಸ್ ಕ್ಯಾಂಪಸ್ ತುಂಬಾ ನೀರು ತುಂಬಿಕೊಂಡಿದೆ. ಕ್ಯಾಂಪಸ್‌ನಲ್ಲಿ ಸಂಚರಿಸಲಾಗದೆ ಟೆಕ್ಕಿಗಳು ಪರದಾಡುತ್ತಿದ್ದಾರೆ.

English summary
Heavy rain lashed Bengaluru city on October 5, 2017. Here are the pics of rain from various part of city. Rain likely to continue over the southern districts of the Karnataka for the next 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X