ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದಿಂದಾಗಿ ಬೆಂಗಳೂರಿನಲ್ಲಿ ಬಾಗಿಲು ಮುಚ್ಚಿದ 8 ಸಾವಿರ ಪಿಜಿಗಳು

|
Google Oneindia Kannada News

ಬೆಂಗಳೂರು, ಜೂನ್ 07:ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕಿನಿಂದಾಗಿ ಇಡೀ ದೇಶವೇ ಅಲ್ಲೋಲಕಲ್ಲೋಲವಾಗಿದೆ.

ಬಹುತೇಕ ಮಂದಿ ಆರ್ಥಿಕ ದುಸ್ಥುತಿ ಎದುರಿಸುತ್ತಿದ್ದಾರೆ, ವ್ಯವಹಾರಗಳೆಲ್ಲಾ ಬಂದ್ ಆಗಿವೆ, ಅಂಗಡಿ ಮುಂಗಟ್ಟುಗಳು ಮುಚ್ಚಿವೆ, ಬಹುತೇಕ ಮಂದಿ ನಗರನ್ನೇ ತೊರೆದು ತಮ್ಮ ಊರಿಗೆ ಹಿಂದಿರುಗಿದ್ದಾರೆ.

ಇನ್ನು ಕಾಲೇಜು, ಕಚೇರಿಗಳು ಬಾಗಿಲು ತೆಗೆಯದ ಕಾರಣ ನಗರದಲ್ಲಿರುವ ಪಿಜಿಗಳು ಕೂಡ ಕಳೆದ ಒಂದು ವರ್ಷದಿಂದ ಜನರಿಲ್ಲದೆ ಬಾಗಿಲು ಮುಚ್ಚಿವೆ.ನಗರದಲ್ಲಿ 8 ಸಾವಿರಕ್ಕೂ ಅಧಿಕ ಪಿಜಿಗಳನ್ನು ಬಂದ್ ಮಾಡಲಾಗಿದ್ದು, ಅದರಿಂದ 30 ಸಾವಿರಕ್ಕೂ ಅಧಿಕ ಮಂದಿ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ವಿದ್ಯಾರ್ಥಿ, ಐಟಿ ಸೆಕ್ಟರ್‌ನಲ್ಲಿ ಕೆಲಸ ಮಾಡುತ್ತಿರುವವರಿಂದಲೇ ಪಿಜಿಗಳು ನಡೆಯುತ್ತಿತ್ತು.

In Bengaluru Nearly 8 Thousand PGs Shut Shop Amid Covid 19

ಬೆಂಗಳೂರಿನ ಪಿಜಿ ಓನರ್ಸ್ ಅಸೋಸಿಯೇಷನ್ ನೀಡಿರುವ ಮಾಹಿತಿ ಪ್ರಕಾರ' ನಗರದಲ್ಲಿ ಒಟ್ಟು 12 ಸಾವಿರ ಪಿಜಿಗಳಿವೆ, ಈಗ ಅವುಗಳಲ್ಲಿ ಕೇವಲ 4 ಪಿಜಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸುಮಾರು 8 ಸಾವಿರ ಪಿಜಿಗಳನ್ನು ಅನಿವಾರ್ಯವಾಗಿ ಬಂದ್ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.

'ಜನವರಿಯಲ್ಲಿ ಮತ್ತೆ ಪಿಜಿಗಳು ತೆರೆಯುತ್ತವೆ ಎಂದು ಖುಷಿಯಿಂದ ಇದ್ದೆವು ಆದರೆ ಕೊರೊನಾ ಎರಡನೇ ಅಲೆ ಬಂದ ಕಾರಣ ಇಲ್ಲಿಯವರೆಗೂ ಯಾರೊಬ್ಬರೂ ಪಿಜಿಗೆ ಬರುತ್ತಿಲ್ಲ''.

ಆನ್‌ಲೈನ್ ತರಗತಿಗಳು, ವರ್ಕ್ ಫ್ರಂ ಹೋಂ ಇರುವುದರಿಂದ ಎಲ್ಲರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಪಿಜಿಯಲ್ಲಿ ಜನರಿಲ್ಲದಿದ್ದರೂ ಕೆಲಸಗಾರರಿಗೆ ಸಂಬಳ ಕೊಡಬೇಕಿದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ತಿಳಿಸಿದ್ದಾರೆ.

ಹಲವು ಪಿಜಿ ಓನರ್‌ಗಳು ಬ್ಯಾಂಕಿನಿಂದ ಸಾಲ ಪಡೆಯಲು ಮುಂದಾಗಿದ್ದರು ಆದರೆ ಬ್ಯಾಂಕ್‌ಗಳು ಸಾಲ ನೀಡಲು ಮುಂದೆಬರುತ್ತಿಲ್ಲ. ಪಿಜಿಯ ವಿದ್ಯುತ್ ಬಿಲ್, ನೀರಿನ ಬಿಲ್ ಕಟ್ಟುವುದೂ ಕಷ್ಟಕ್ಕೆ ಬಂದಿದೆ ಎಂದರು.

ಯಾರ್ಯಾರು ಪಿಜಿ ಖಾಲಿ ಮಾಡಿ ತೆರಳಿದ್ದಾರೋ ಅವರು ತಮ್ಮ ಸಾಮಾನುಗಳನ್ನು ಅಲ್ಲಿಯೇ ಇಟ್ಟಿದ್ದಾರೆ ಹೀಗಾಗಿ ಆ ಜಾಗಗಳನ್ನು ಬೇರೆ ಉಪಯೋಗಕ್ಕೆ ಬಳಸುವಂತೆಯೂ ಇಲ್ಲ.

Recommended Video

ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಡಿರೋ ಎಡವಟ್ಟು ನೋಡಿ! | Oneindia Kannada

English summary
About 8,000 paying guest (PG) accommodations in Bengaluru have shut down amid the pandemic and related lockdowns, with students and workers in the IT sector who form a majority of the occupants leaving the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X