ಬೆಂಗಳೂರು: ಮೈಕ್ರೋ ಕಂಟೈನ್ಮೆಂಟ್ ಜೋನ್‌ಗಳೆಷ್ಟು, ಎಷ್ಟು ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ?
ಬೆಂಗಳೂರು, ಆಗಸ್ಟ್ 10: ಬೆಂಗಳೂರಲ್ಲಿ ಕೊರೊನಾ ಮೂರನೇ ಅಲೆ ಪ್ರಾರಂಭದ ಹಂತದಲ್ಲಿದ್ದು, ಕೊರೊನಾ ಸೋಂಕು ಹೆಚ್ಚಾಗದಂತೆ ತಡೆಗಟ್ಟಲು ಸರ್ಕಾರ ಹಾಗೂ ಬಿಬಿಎಂಪಿ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ.
ಕೇಸ್ಗಳು ಹೆಚ್ಚುತ್ತಿರುವ ಹಿನ್ನೆಲೆ, ನಗರದಲ್ಲಿ ಮೈಕ್ರೋ ಕಂಟೈನ್ಮೆಂಟ್ ಪ್ರದೇಶಗಳು ಹೆಚ್ಚಾಗುತ್ತಿವೆ. ಸೋಂಕು ತ್ವರಿತ ಗತಿಯಲ್ಲಿ ಹರಡುತ್ತಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ಹಾಗೆಯೇ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಜೊತೆಗೆ 8 ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ.
ಬೆಂಗಳೂರಿನಲ್ಲಿ 160 ಕೊರೊನಾ ಮೈಕ್ರೋ ಕಂಟೈನ್ಮೆಂಟ್ ಪ್ರದೇಶಗಳು ಇವೆ ಎಂಬ ಮಾಹಿತಿ ಲಭ್ಯವಾಗಿದೆ.

79 - ಅಪಾರ್ಟ್ಮೆಂಟ್‌ಗಳು
70 - ಮನೆಗಳು01 - ಶಾಲೆ (ಪೊಲೀಸ್ ಶಸ್ತ್ರಾಸ್ತ್ರ ತರಬೇತಿ ಶಾಲೆ)
08 - ಹಾಸ್ಟೆಲ್, ಪಿಜಿ, ಕ್ವಾಟರ್ಸ್
02 - ಇತರೆ
ಒಟ್ಟು 160 ಕಂಟೈನ್ಮೆಂಟ್ ಜೋನ್‌ಗಳಿದ್ದು, ಈ ಪ್ರದೇಶಗಳಲ್ಲಿ 648 ಜನರಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ 5,860 ಜನರನ್ನು ಬಿಬಿಎಂಪಿ ಕ್ವಾರಂಟೈನ್ ಮಾಡಿದೆ.
ವಲಯವಾರು ಕಂಟೈನ್ಮೆಂಟ್ ಪ್ರದೇಶಗಳು:
ಯಲಹಂಕ : 20 - 77 ಕೇಸ್ - 2,247 ಮಂದಿ ಕ್ವಾರಂಟೈನ್
ಬೊಮ್ಮನಹಳ್ಳಿ : 24 - 113 ಕೇಸ್ - 2,235 ಮಂದಿ ಕ್ವಾರಂಟೈನ್
ದಕ್ಷಿಣ ವಲಯ : 20 - 74 ಕೇಸ್ - 604 ಮಂದಿ ಕ್ವಾರಂಟೈನ್
ಮಹಾದೇವಪುರ : 42 - 186 ಕೇಸ್ - 157 ಮಂದಿ ಕ್ವಾರಂಟೈನ್
ಪೂರ್ವ ವಲಯ : 35 - 121 ಕೇಸ್ - 403 ಮಂದಿ ಕ್ವಾರಂಟೈನ್
ಆರ್ ಆರ್ ನಗರ : 10 - 39 ಕೇಸ್ - 67 ಮಂದಿ ಕ್ವಾರಂಟೈನ್
ಪಶ್ಚಿಮ ವಲಯ : 06 - 25 ಕೇಸ್ - 132 ಮಂದಿ ಕ್ವಾರಂಟೈನ್
ದಾಸರಹಳ್ಳಿ : 03 - 13 ಕೇಸ್ - 15 ಮಂದಿ ಕ್ವಾರಂಟೈನ್
ಒಟ್ಟು CZ : 160
ಒಟ್ಟು ಕೇಸ್ : 648
ಒಟ್ಟು Q : 5,860
ಬೆಂಗಳೂರಿನಲ್ಲಿ ಕೊರೊನಾ 2ನೇ ಅಲೆ ಭಯಾನಕ ಸನ್ನಿವೇಶವನ್ನು ಸೃಷ್ಟಿಸಿತ್ತು. ಆಮ್ಲಜನಕ, ಹಾಸಿಗೆ ವೆಂಟಿಲೇಟರ್ ಸಿಗದೆ ಕೊರೊನಾ ರೋಗಿಗಳು ಅಕ್ಷರಶಃ ತತ್ತರಿಸಿ ಹೋಗಿದ್ದರು. ಕೊನೆಗೆ ಸ್ಮಶಾನದಲ್ಲೂ ಕೂಡ ಸರತಿಯಲ್ಲಿ ಕಾಯುವ ಪರಿಸ್ಥಿತಿಯೂ ಎದುರಾಗಿತ್ತು.
ಈ ಕೊರೊನಾ 3ನೇ ಅಲೆ ಎರಡನೇ ಅಲೆಯಷ್ಟು ಭೀಕರವಾಗಿರುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅಲೆಯ ಭೀಕರತೆ ಹೇಗಿರಲಿದೆ ಎಂದು ಇನ್ನು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸೋಂಕು ಹೆಚ್ಚಾದರೆ ಇನ್ನೂ ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ನಿಶ್ಚಿತ.
ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ತಗ್ಗಿಸಲು ಸ್ವಾತಂತ್ರ್ಯೋತ್ಸವ ದಿನಾಚರಣೆ ನಂತರ ವೈದ್ಯರ ನಡೆ ಸೋಂಕಿತರ ಮನೆ ಕಡೆ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿ ಕೋವಿಡ್ ಸೋಂಕರನ್ನು ಪ್ರಾರಂಭಿಕ ಹಂತದಲ್ಲಿಯೇ ನಿಯಂತ್ರಿಸುವ ನಿಟ್ಟಿನಲ್ಲಿ ಆ.16ರಿಂದ ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗೂ ವೈದ್ಯರ ತಂಡವನ್ನು ಕಳುಹಿಸಿ ಆರೋಗ್ಯ ತಪಾಸಣೆ ನಡೆಸುವ ವಿನೂತನ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಈ ಕುರಿತು ಪ್ರಾಯೋಗಿಕವಾಗಿ 108 ತಂಡಗಳನ್ನು ರಚಿಸಲಿದ್ದು, ಈ ತಂಡಗಳನ್ನು ಮನೆ-ಮನೆಗೆ ಕಳುಹಿಸಿ ಮನೆಯ ಎಲ್ಲಾ ಸದಸ್ಯರ ಆರೋಗ್ಯ ತಪಾಸಣೆಗೆ ಒಳಪಡಿಸಲು ಯೋಜಿಸಲಾಗಿದೆ.
ಮನೆಗೆ ಭೇಟಿ ನೀಡುವ ವೇಳೆ ಏನೇನು ಪ್ರಶ್ನೆಗಳು ಕೇಳಬಹುದು ಎಂಬ ಪ್ರಶ್ನಾ ಪಟ್ಟಿ ಸಿದ್ಧಪಡಿಸಿಕೊಂಡು ಎಲ್ಲಾ ಮನೆಯಲ್ಲಿ ಸಂಗ್ರಹಿಸುವ ಮಾಹಿತಿಯನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ ತಂತ್ರಾಂಶ ರೂಪಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಸಚಿವ ಆರ್ ಅಶೋಕ್ ಹೇಳಿದರು.
ಜತೆಗೆ ನಾಗರಿಕರಲ್ಲಿ ಅರಿವು ಮೂಡಿಸುವ ಕರಪತ್ರ ನೀಡಲಾಗುವುದು, ಮನೆಗೆ ಭೇಟಿ ನೀಡುವ ವೇಳೆ ಲಸಿಕೆ ಪಡೆದಿರುವ ಬಗ್ಗೆ ಖಾತರಿ ಮತ್ತು ಸೋಂಕು ಲಕ್ಷಣಗಳಿದ್ದರೆ ಪರೀಕ್ಷೆ ನಡೆಸಿರುವ ಕುರಿತು ಯಾವುದಾದರೂ ಕಾಯಿಲೆಗಳು ಇವೆಯೇ ಎಂಬುದು ಸೇರದಂತೆ ಇತರೆ ಮಾಹಿತಿ ಇರಲಿದೆ.












Click it and Unblock the Notifications