Rain Alert: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಬಿರುಗಾಳಿ ಮಳೆ, ಆರೆಂಜ್ ಅಲರ್ಟ್‌

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಮಳೆ ಸಕ್ರಿಯವಾಗಿದೆ. ಆದರೆ ನಿರೀಕ್ಷೆಯಷ್ಟು ಭಾರೀ ಮಳೆ ಆಗದೇ ತುಂತುರು, ಹಗುರ ಮಳೆ ಸುರಿಯುತ್ತಿದೆ. ಕರಾವಳಿ, ಮಲೆನಾಡು ಮತ್ತು ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಮಾತ್ರವೇ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಿದ್ದು ಬಿಟ್ಟರೆ ಉಳಿದೆಲ್ಲಡೆ ಸಾಮಾನ್ಯ ಮಳೆ ದಾಖಲಾಗಿದೆ. ಮುಂದಿನ ಮೂರು ದಿನ ಕರಾವಳಿ ಸೇರಿದಂತೆ ಒಟ್ಟು 6 ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದೆ.

ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ವಾಯು ಚಂಡಮಾರುತದ ಪ್ರಸರಣದ ಪ್ರಭಾವದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆಗುತ್ತಿದೆ. ಕರಾವಳಿ, ಪಶ್ಚಿಮ ಘಟ್ಟಗಳು, ಮಲೆನಾಡು ಜಿಲ್ಲೆಗಳಲ್ಲಿನ ಭಾರೀ ಮಳೆಯಿಂದಾಗಿ ಪ್ರಮುಖ ಜಲಾಶಯಗಳ ಒಳಹರಿವು ಏರಿಕೆ ಆಗಿದೆ. ಇದೀಗ ಮತ್ತೆ ಮಳೆ ಸಕ್ರಿಯವಾಗಿದೆ.

Heavy Rain

ಈ ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ

ಆಗಸ್ಟ್ 1ರವರೆಗೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರತಿ ಗಂಟೆಗೆ ಗರಿಷ್ಠ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಅಂದಾಜು 200 ಮಿಲಿ ಮೀಟರ್ ವರೆಗೆ ಮಳೆ ಆಗಲಿದೆ. ಹೀಗಾಗಿ ಈ ಮೂರು ದಿನ 'ಆರೆಂಜ್ ಅಲರ್ಟ್' ನೀಡಲಾಗಿದೆ. ಇದೇ ಅವಧಿಯಲ್ಲಿ ಬೆಳಗಾವಿ, ಚಿಕ್ಕಮಗಳೂರಿನ ಹಲವು ಪ್ರದೇಶಗಳಲ್ಲಿ ಸಾಧಾರಣದಲ್ಲಿ ಭಾರೀ ಮಳೆ ಆಗಲಿದ್ದು, ಗರಿಷ್ಠ 115 ಮಿಲಿ ಮೀಟರ್‍‌ವರೆಗೆ ಮಳೆ ನಿರೀಕ್ಷೆ ಹಿನ್ನೆಲೆಯ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಗಸ್ಟ್ 2ರ ನಂತರ ಕರಾವಳಿ ಮತ್ತು ಮಲೆನಾಡಿನ ವಿವಿಧೆಡೆ ಮಳೆ ಪ್ರಭಾವ ತಗ್ಗಲಿದೆ. ಇನ್ನು ಮುಂದಿನ ಒಂದು ವಾರ ಕಾಲ ಬೆಂಗಳೂರು ನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ದಾವಣಗೆರೆ ಹಾಗೂ ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ರಾಯಚೂರು, ಕಲಬುರಗಿ, ಬೀದರ್ ವ್ಯಾಪ್ತಿಯಲ್ಲಿ ಹಗುರದಿಂದ ಸಾಮಾನ್ಯ ಮಳೆ, ಕೆಲವೆಡೆ ಜೋರು ಮಳೆ ಸಂಭವವಿದೆ.

ಇದರ ಹೊರತಾಗಿ ವಾತಾವರಣದಲ್ಲಿ ಗಂಭೀರ ಸ್ವರೂಪದ ಬದಲಾವಣೆ, ವೈಪರೀತ್ಯಗಳು ಸದ್ಯಕ್ಕಿಲ್ಲ. ರಾಜ್ಯದ ಮಂಗಳೂರು, ಆಗುಂಬೆ, ಶಿವಮೊಗ್ಗ, ಮೂಡಬಿದರಿ, ಶಿಕಾರಿಪುರ, ಶೃಂಗೇರಿ, ಬೆಳಗಾವಿ, ಕೊಡಗು ಇನ್ನಿತರ ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ರಾಜ್ಯದ ಉಳಿದ ಜಿಲ್ಲೆಗಳ ಕೆಲವೆಡೆ ಆಗಾಗ ಸೋನೆ ಮಳೆ ದಾಖಲಾಗಿದೆ. ಮಳೆ ಕೊರತೆ ಆಗಿ ಒಣಗಿದ್ದ ಮುಂಗಾರು ಮಳೆ ಪ್ರಸ್ತುತದ ಜಿಟಿ ಜಿಟಿ ಮಳೆಗೆ ಕೊಂಚ ಚೇತರಿಸಿಕೊಂಡಿವೆ.

ಬೆಂಗಳೂರು ಹವಾಮಾನ ಮುನ್ಸೂಚನೆ

ರಾಜಧಾನಿ ಬೆಂಗಳೂರು ನಗರದ ಹವಾಮಾನ ನೋಡುವುದಾದರೆ, ಮುಂದಿನ ಒಂದು ವಾರ ನಗರದಲ್ಲಿ ಇದೇ ರೀತಿಯ ತಂಪು ವಾತಾವರಣ, ಕಡಿಮೆ ತಾಪಮಾನ ಕಂಡು ಬರಲಿದೆ. ಕೆಲವೆಡೆ ಸೋನೆ ಮಳೆ ಆಗಬಹುದು. ಈ ವೇಳೆ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ನಿರೀಕ್ಷೆ ಇದೆ ಎಂದು ಹವಾಮಾನ ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+