ಐಎಂಎ ಸಂಸ್ಥೆಯ ಲೆಕ್ಕಪರಿಶೋಧಕನ ಬಂಧಿಸಿದ ಎಸ್‌ಐಟಿ

ಬೆಂಗಳೂರು, ಜೂನ್ 14: ಐಎಂಎ ಜ್ಯುವೆಲ್ಸ್‌ ಸಂಸ್ಥೆಯ ನಿರ್ದೇಶಕರನ್ನು ಬಂಧಿಸಿದ ಬೆನ್ನಲ್ಲೆ ಎಸ್‌ಐಟಿಯು ತಂಡವು ಐಎಂಎ ಯ ಆಡಿಟರ್ (ಲೆಕ್ಕಪರಿಶೋಧಕ)ನನ್ನು ಇಂದು ಬಂಧಿಸಿದೆ.

ಐಎಂಎ ಸಂಸ್ಥೆಯ ಲೆಕ್ಕಪರಿಶೋಧಕ ಇಕ್ಬಾಲ್ ಖಾನ್ ಅವರನ್ನು ಇಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ. ಇದೇ ಎಸ್‌ಐಟಿಯು ಮೊನ್ನೆ ರಾತ್ರಿಯಷ್ಟೆ ಐಎಂಎ ನ ಏಳು ನಿರ್ದೇಶಕರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು.

ಎಸ್‌ಐಟಿಗೆ ಪ್ರಕರಣವನ್ನು ವಶಪಡಿಸಿಕೊಂಡ ಮೇಲೆ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಬೆಳವಣಿಗೆ ಆಗಿದ್ದು, ಐಎಂಎ ಮಾಲೀಕ ಮನ್ಸೂರ್‌ ಖಾನ್ ನ ಕಾರನ್ನು ಸಹ ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ.

IMA auditor Iqbal Khan has been arrested by Special Investigation Team

ಈ ನಡುವೆ ಇಡಿ (ಜಾರಿ ನಿರ್ದೇಶನಾಲಯವು) ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದು, ಪ್ರಕರಣದ ಬಗ್ಗೆ ಮಾಹಿತಿ ಕೇಳಿದೆ.

ಸುಮಾರು 25000 ಕ್ಕೂ ಹೆಚ್ಚು ದೂರುಗಳು ಐಎಂಎ ಸಂಸ್ಥೆ ವಿರುದ್ಧ ದಾಖಲಾಗಿದ್ದು, ಎಲ್ಲ ದೂರನ್ನು ಎಸ್‌ಐಟಿಗೆ ವರ್ಗಾವಣೆ ಮಾಡಲಾಗುತ್ತಿದೆ. ದುಬೈ, ಮುಂಬೈ, ಮೈಸೂರು ಸೇರಿದಂತೆ ಹಲವು ನಗರಗಳಿಂದಲೂ ಐಎಂಎ ಗೆ ಹೂಡಿಕೆ ಹರಿದು ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+