ಮೊಬೈಲ್ ಕಾಲ್‌ನಲ್ಲೇ ಅಕ್ರಮ ವಹಿವಾಟು: ಕೇರಳ ಕುಟ್ಟಿ ಸೆರೆ !

ಬೆಂಗಳೂರು, ಮಾರ್ಚ್ 16: ಅಂತಾರಾಷ್ಟ್ರೀಯ ಪೋನ್ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಟೆಲಿಕಾಂ ಕಂಪನಿಗಳಿಗೆ ವಂಚಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕ್ಯಾಲಿಕಟ್ ಮೂಲದ ಅಶ್ರಫ್ ಉನಿಚಿರವಿಟ್ಟಲ್ ಬಂಧಿತ ಆರೋಪಿ. ಈತ ತನ್ನ ಮೊಬೈಲ್ ಅಕ್ರಮ ವಹಿವಾಟಿಗಾಗಿ ಟೆಲಿಪೋನ್ ಎಕ್ಸ್ ಚೇಂಜ್ ಇಟ್ಟುಕೊಂಡಿದ್ದ !

ನೆಪಕ್ಕೆ ಟೀ ಅಂಗಡಿ ಇಟ್ಟುಕೊಂಡದ್ದ ಕೇರಳ ಮೂಲದ ಉನಿಚಿರವಿಟ್ಟಲ್ ಚಿಕ್ಕಬಾಣವಾರದಲ್ಲಿ ತಾನಿದ್ದ ಮನೆಯ ಸಮೀಪವೇ ಇನ್ನೊಂದು ಮನೆ ಬಾಡಿಗೆ ಪಡೆದಿದ್ದ. ಸಿಮ್ ಕಾರ್ಡ್ ಗಳನ್ನು ಬಳಿಸಿ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡುತ್ತಿದ್ದ. ಈ ಮೂಲಕ ದೂರ ಸಂಪರ್ಕ ಇಲಾಖೆಗೆ ವಂಚನೆ ಮಾಡುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ವೇಳೆ ಹಲವು ಎಲೆಕ್ಟ್ರಾನಿಕ್ ಉಪಕರಣಗಳು ಸಿಕ್ಕಿದ್ದು, ಅನಧಿಕೃತವಾಗಿ ಟೆಲಿಪೋನ್ ಎಕ್ಸ್ ಚೇಂಜ್ ಮಾಡಿಕೊಂಡಿರುವುದು ಪತ್ತೆಯಾಗಿದೆ.

Bengaluru: Illegal telephone exchange : man held by CCB police

ಅನಧಿಕೃತ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿತನ ವಿರುದ್ಧ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ತನ್ನ ಲಾಭಕ್ಕಾಗಿ ಮಾಡುತ್ತಿದ್ದನೇ ? ಇಲ್ಲವೇ ಇತರೆ ಅನಧಿಕೃತ ಕೃತ್ಯಗಳಲ್ಲಿ ಭಾಗಿಯಾಗಲು ಈ ವ್ಯವಸ್ಥೆ ಮಾಡಿಕೊಂಡಿದ್ದನೇ ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+