ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಅಕ್ರಮ ಆಸ್ತಿಗಳಿಕೆ, ಪೊಲೀಸ್ ಅಧಿಕಾರಿಗೆ 4 ವರ್ಷ ಜೈಲು

|
Google Oneindia Kannada News

ಬೆಂಗಳೂರು, ಜುಲೈ 01: ಆದಾಯ ಮೀರಿ ಅಕ್ರಮ ಆಸ್ತಿಯನ್ನು ಸಂಪಾದನೆ ಮಾಡಿದ್ದ ಎಸ್ಪಿಯನ್ನು 2007ರಲ್ಲಿ ಲೋಕಾಯುಕ್ತ ಬಲೆಗೆ ಕೆಡವಿತ್ತು. ಯಲಹಂಕದ ಶಸಸ್ತ್ರ ಪೊಲೀಸ್ ತರಬೇತಿ ಶಾಲೆಯ ಎಸ್ಪಿಯಾಗಿದ್ದ ಶ್ರೀನಿವಾಸ್ ಐಯ್ಯರ್ ಮನೆ ಮೇಲೆ ದಾಳಿ ನಡೆಸಿದ್ದ ವೇಳೆ 53.58ರಷ್ಟು ಆದಾಯ ಮೀರಿದ ಆಸ್ತಿ ಪತ್ತೆಯಾಗಿತ್ತು. ಇದೀಗ ಈ ಪ್ರಕರಣ ಸಂಬಂಧ ಆರೋಪಿಗೆ 1 ಕೋಟಿ ದಂಡ, 4 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಆದೇಶವನ್ನು ನೀಡಿದೆ.

ಎಸ್ಪಿ ಶ್ರೀನಿವಾಸ್ ಐಯ್ಯರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ನವೆಂಬರ್ 03,2007ರಲ್ಲಿ ದಾಳಿಯನ್ನು ನಡೆಸಿದ್ದರು. ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯವನ್ನು ನಡೆಸಿದ್ದರು. ತನಿಖೆಯು ಪೂರ್ಣಗೊಂಡ ನಂತರ ಆರೋಪಿ ಶ್ರೀನಿವಾಸ್ ಐಯ್ಯರ್ ಆದಾಯಕ್ಕಿಂತ 40,60,324,41 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು. ಅಂದರೆ ಶೇ 53.58ರಷ್ಟು ಅಕ್ರಮ ಆಸ್ತಿಯನ್ನು ಹೊಂದಿದ್ದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.

1,00,000,00 ದಂಡ. ನಾಲ್ಕು ವರ್ಷ ಜೈಲು ; ವಿಚಾರಣೆ ಪೂರ್ಣಗೊಳಿಸಿದೆ 77ನೇ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಧೀಶರು (ಸಿಸಿಹೆಚ್ 78) ಮತ್ತು ವಿಶೇಷ ನ್ಯಾಯಾಧೀಶರಾದ ಎಸ್ ವಿ. ಶ್ರೀಕಾಂತ್ ಆರೋಪಿತರಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ಕಲಂ 13(1)(ಇ) ಸಹವಾಚನ 13(2) ಪ್ರಕಾರ ಸಾದ ಸಾಜೆ, ಮತ್ತು ರೂ 1,00,000,00 (ಒಂದು ಕೋಟಿ) ದಂಡವನ್ನು ವಿಧಿಸಲಾಗಿದೆ. ದಂಡ ವಿಧಿಸಲು ತಪ್ಪಿದ್ದಲ್ಲಿ 2 ವರ್ಷ ಸಾದ ಸಜೆಯನ್ನು ಅನುಭವಿಸಬೇಕೆಂದು ಆದೇಶವನ್ನು ನೀಡಲಾಗಿದೆ.

Illegal Asset Case SP Srinivas Iyer Sentenced 4 Years of Jail and Fine of Rs 1 Crore

ಲೋಕಾಯುಕ್ತ ಸಂಸ್ಥೆಗೆ ಸರ್ಕಾರ ಹೊಸದಾಗಿ ಲೋಕಾಯುಕ್ತ ಬಿಎಸ್ ಪಾಟೀಲರನ್ನು ನೇಮಿಸಿದ್ದರು ಲೋಕಾಯುಕ್ತ ಸಂಸ್ಥೆಗೆ ಹಲ್ಲುಕಿತ್ತ ಹಾವನ್ನಾಗಿಸಿದೆ. ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾ ಸಂಸ್ಥೆಯನ್ನೇ ನಿಷ್ಪ್ರಯೋಜಕ ಸಂಸ್ಥೆಯಂತೆ ಮಾಡಲಾಗಿದ್ದರೂ ಹಳೇಯ ಕೇಸ್‌ನಲ್ಲಿ ಭ್ರಷ್ಟಾಚಾದ ಆರೋಪಿಯೊಬ್ಬನಿಗೆ ಜೈಲು ಶಿಕ್ಷೆಯ ಜೊತೆಗೆ ದಂಡವನ್ನು ಹಾಕುವಂತೆ ತನಿಖೆಯನ್ನು ನಡೆಸಿರುವುದು ಲೋಕಾಯುಕ್ತ ಸಂಸ್ಥೆಗೆ ಸಲ್ಲಬೇಕಾದ ಹೆಗ್ಗಳಿಕೆಯಾಗಿದೆ.

Recommended Video

HD Devegowdaರ ಸಾವು ಬಯಸಿ ನಾಲಗೆ ಹರಿಬಿಟ್ಟ KN Rajanna | Oneindia Kannada

English summary
Lokayukta officials conducted raid on Srinivas Iyer, SP of Yalahanka Armed Police Special School on illegal asset case on 2007. Now accused has been sentenced to 4 year jail and fine of Rs 1 crore. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X