ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿಗಳ ಹಿತ ಕಾಯ್ದ ಐಐಎಂಬಿ, ಇಂಗ್ಲೀಷ್ ನಲ್ಲೇ ಪ್ರಮಾಣ ಪತ್ರ!

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 19: ಕನ್ನಡ ಪರ ಹೋರಾಟಗಾರರು, ಕನ್ನಡ ಮನಸ್ಸುಳ್ಳ ವಿದ್ಯಾರ್ಥಿಗಳ ಪ್ರತಿಭಟನೆಗೆ ಕೊನೆಗೂ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ತಲೆ ಬಾಗಿದೆ. 43ನೇ ವಿವಿ ಘಟಿಕೋತ್ಸವದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಇಂಗ್ಲೀಷ್ ನಲ್ಲೇ ಇದ್ದ ಪ್ರಮಾಣ ಪತ್ರವನ್ನು ಪಡೆದುಕೊಂಡ ಸಂತಸದಲ್ಲಿದ್ದರು.

ಪದವಿ ಪ್ರಮಾಣಪತ್ರವನ್ನು ಹಿಂದಿ ಭಾಷೆಯಲ್ಲೂ ನೀಡಲು ಐಐಎಂ ಮುಂದಾಗಿದ್ದು, ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ವಿವಿ ಆಡಳಿತ ಮಂಡಳಿ ಸುತ್ತೋಲೆ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿವಾದದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಬಂದಿತ್ತು.

IIMB certificates in English Only

ವಿದ್ಯಾರ್ಥಿಗಳು ತಮ್ಮ ಹೆಸರನ್ನು ಹಿಂದಿಯಲ್ಲೂ ಬರೆದು ಕಳುಹಿಸುವಂತೆ ಸೂಚಿಸಲಾಗಿತ್ತು. ಇದು ಹಿಂದಿ ಹೇರಿಕೆಯ ಕ್ರಮ, ಬೇಕಾದರೆ, ನಮ್ಮ ಮಾತೃಭಾಷೆಯಲ್ಲಿ ಪ್ರಮಾಣ ಪತ್ರ ಕೊಡಿ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದರು.

'ವಿಶ್ವವಿದ್ಯಾಲಯಗಳ ವೆಬ್ ಸೈಟಿನಲ್ಲಿ ಕನ್ನಡ ಕಡ್ಡಾಯ''ವಿಶ್ವವಿದ್ಯಾಲಯಗಳ ವೆಬ್ ಸೈಟಿನಲ್ಲಿ ಕನ್ನಡ ಕಡ್ಡಾಯ'

ಐಐಎಂ ನಿರ್ದೇಶಕ ರಘುರಾಮ್, ಇದು ಪ್ರಸ್ತಾವನೆಯಷ್ಟೇ, ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಯಾವುದೇ ಭಾಷೆ ಹೇರಿಕೆ ನಡೆಯುವುದಿಲ್ಲ. ವಿದ್ಯಾರ್ಥಿಗಳ ಹಿತ ಮುಖ್ಯ ಎಂದಿದ್ದರು.

ಹಿಂದಿ ಹೇರಲು ಹೊರಟ ಬೆಂಗಳೂರು ಐಐಎಂ ವಿರುದ್ಧ ಪ್ರತಿಭಟನೆಹಿಂದಿ ಹೇರಲು ಹೊರಟ ಬೆಂಗಳೂರು ಐಐಎಂ ವಿರುದ್ಧ ಪ್ರತಿಭಟನೆ

ಒಟ್ಟಾರೆ, ವಿದ್ಯಾರ್ಥಿಗಳ ಒಕ್ಕೊರಲ ದನಿಗೆ ಬಲ ಸಿಕ್ಕಿದೆ. 593 ವಿದ್ಯಾರ್ಥಿಗಳು ಪದವಿ, ಡಿಪ್ಲೋಮಾ ಪ್ರಮಾಣ ಪತ್ರ ಪಡೆದುಕೊಂಡರು.ಈ ಬಾರಿ ಚಿನ್ನದ ಪದಕ ಗೆದ್ದವರ ಪಟ್ಟಿಯಲ್ಲಿ ವಿದ್ಯಾರ್ಥಿನಿಯರಿದ್ದರು ಎಂಬುದು ವಿಶೇಷ.

English summary
After a section of the postgraduate students at the Indian Institute of Management (IIM), Bangalore, has expressed displeasure over a proposal to issue graduation certificates in Hindi as well. Now, student received certificates in English only
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X