Bengaluru Rain: ಬೆಂಗಳೂರಿನಲ್ಲಿ ಮಳೆಯಾದರೆ ಆನಂದಕ್ಕಿಂತ ಸಮಸ್ಯೆಗಳೇ ಅಧಿಕ- ನಿವಾಸಿಗಳ ಅಳಲು!
ಬೆಂಗಳೂರು ನಗರದಲ್ಲಿ ಶುಕ್ರವಾರ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ. ಸುಡುವ ಶಾಖದಿಂದ ಕಂಗೆಟ್ಟಿದ್ದ ನಿವಾಸಿಗಳು ಧಾರಾಕಾರ ಮಳೆಯನ್ನು ಆನಂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಳೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಫೋಟೋಗಳು ಹರಿದಾಡುತ್ತಿವೆ. ಕೆಲವರು ಒದ್ದೆಯಾಗುವ ಮೂಲಕ ಮಳೆಯನ್ನು ಸಂಭ್ರಮಿಸಿದರೆ, ಇನ್ನು ಕೆಲವರು ವಿಶೇಷವಾಗಿ ಪ್ರಯಾಣಿಕರು ನಗರದ ಕೆಲವು ಭಾಗಗಳು ಜಲಾವೃತವಾಗಿದ್ದರಿಂದ ಅಳಲು ತೋಡಿಕೊಂಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಗಾಳಿ ಸಮೇತ ಮಳೆ ಆಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ಶುಕ್ರವಾರ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ನಾಯಂಡಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 29.5 ಮಿಮೀ, ರಾಜರಾಜೇಶ್ವರಿ ನಗರದಲ್ಲಿ 29 ಮಿಮೀ ಮಳೆಯಾಗಿದೆ. ನಗರದ ಇತರ 25 ವಾರ್ಡ್‌ಗಳಲ್ಲಿ 10 ಮಿ.ಮೀ.ಗೂ ಅಧಿಕ ಮಳೆ ಸುರಿದಿದೆ.

ಮಳೆಯಿಂದ ಟ್ರಾಫಿಕ್
6 ತಿಂಗಳ ಕಾಯುವಿಕೆಯ ನಂತರ ಬೆಂಗಳೂರಿಗೆ ಅಂತಿಮವಾಗಿ ಅಗತ್ಯವಿರುವ ಮಳೆ ಸುರಿದಿದೆ. ಬೇಸಿಗೆಯ ಶಾಖದಿಂದ ಪರಿಹಾರವನ್ನು ತಂದಿದೆ. ಮಳೆಯಾಗುತ್ತಿದ್ದಂತೆ ಅನೇಕ ಜನ ಸಂತೋಷವನ್ನು ತಡೆಯಲು ಸಾಧ್ಯವಾಗಿದೆ ತುಂತುರು ಮಳೆಯಲ್ಲಿ ಆನಂದಿಸಿದ್ದಾರೆ.
A round or two of rains and here is our crippling Namma Bengaluru infra. Massive pile up of traffic near Jayadeva flyover metro station due to the rain this evening. #BengaluruRains #Bengaluru #Jayadeva #NammaMetro #BBMP @BBMPCOMM @ChristinMP_ @maddyvoldy pic.twitter.com/PUB8VYaRYh
— Mohan Nellore (@mohanbn) May 3, 2024
ಇದೊಂದು ಹೃದಯಸ್ಪರ್ಶಿ ಕ್ಷಣವಾಗಿತ್ತು. ಇದು ಮುಂಬರುವ ತಂಪಾದ ದಿನಗಳ ಭರವಸೆಯನ್ನು ಸಂಕೇತಿಸುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ತನ್ನ ಸ್ವಯಂಸೇವಕರು ಮಳೆಯಲ್ಲಿ ನೆನೆಯುವ ವೀಡಿಯೊವನ್ನು ಹಂಚಿಕೊಂಡಿದೆ.

ಮಳೆ ಬಗ್ಗೆ ಭಿನ್ನಾಭಿಪ್ರಾಯ
"ಬೆಂಗಳೂರಿನಲ್ಲಿ ಮಳೆ ಮರಳಿದೆ, ಶಾಖದಿಂದ ಹೆಚ್ಚು ತಂಪು ತಂದಿದೆ. ಮಳೆ ಹನಿ ಶಬ್ದಗಳಿಗಾಗಿ ನಮ್ಮ ಕಿವಿಗಳು ಹಂಬಲಿಸುತ್ತಿದ್ದವು " ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ನಿವಾಸಿಯೊಬ್ಬರು ಮಳೆ ನೀರು ಕೊಯ್ಲಿನ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.
After over 6 months of anticipation, Bengaluru finally received the much-needed rain, bringing relief from the scorching summer heat.
— Art of Living International Center (@BangaloreAshram) May 3, 2024
Our volunteers at the Campus couldn’t contain their joy and embraced the downpour, reveling in the refreshing showers. It was a heartwarming… pic.twitter.com/bhvftRbrHf
ಮತ್ತೊಂದೆಡೆ ಬಳಕೆದಾರರು ಹೀಗೆ ಬರೆದಿದ್ದಾರೆ, "ಆತ್ಮೀಯ ಬಿಬಿಎಂಪಿಯವರೇ. ಬೆಂಗಳೂರಿನಲ್ಲಿ ಮಳೆ ಇಲ್ಲದೆ ನೀವು 6 ತಿಂಗಳು ಕಳೆದಿದ್ದೀರಿ. ಈ ಸಮಯದಲ್ಲಿ ನೀವು ಡ್ರೈನ್‌ಗಳನ್ನು ಶುದ್ಧಗೊಳಿಸಿಲ್ಲ. ರಸ್ತೆಗಳನ್ನು ದುರಸ್ತಿ ಮಾಡಿಸಲಿಲ್ಲ. ಇದರಿಂದಾಗಿ ಟ್ರಾಫಿಕ್ ಜಾಮ್ ಮತ್ತು ಬೆಂಗಳೂರಿನಲ್ಲಿ ಸಾಮಾನ್ಯ ಮಳೆಯಾದರೆ ರಸ್ತೆಗಳು ಜಲಾವೃತವಾಗುತ್ತಿವೆ. ನಾವು ಪ್ರಯಾಣಿಸಲು ನರಕವನ್ನು ಅನುಭವಿಸುತ್ತಿದ್ದೇವೆ. ಮಳೆಯ ಸಮಯ ನಮಗೆ ಸುಂದರವಾದ ಅನುಭವವಾಗಬೇಕಿತ್ತು. ಆದರೆ ನಾಗರಿಕರು ಬಳಲುವಂತಾಗಿದೆ" ಎಂದಿದ್ದಾರೆ.
The rain has returned with full force in Bengaluru, a much needed respite from the heat.
— Arif (@mdarifkhan87) May 3, 2024
Our ears were longing for these sounds matlab Kaan Taras Gaye the bhai
~ Bangalore Rains pic.twitter.com/RXq3M28LdQ
ಸೌಕರ್ಯಗಳನ್ನು ಕಿತ್ತಿಕೊಳ್ಳುವ ಮಳೆ
ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಕೂಡ ಜಲಾವೃತಗೊಂಡ ರಸ್ತೆಯ ಚಿತ್ರವನ್ನು ಹಂಚಿಕೊಂಡಿದೆ. "ಸಂಚಾರ ಸಲಹೆ: ನಾಗವಾರ ಸಿಗ್ನಲ್ ಕಡೆಗೆ ನೀರು ನಿಂತಿರುವುದರಿಂದ ನಿಧಾನವಾಗಿ ವಾಹನಗಳು ಚಲಿಸುತ್ತಿವೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ದಯವಿಟ್ಟು ಸಹಕರಿಸಿ" ಎಂದು ಪೋಸ್ಟ್ ಮಾಡಿದೆ.
The first collection of cloud juice this year in #Bengaluru A tad silty but hey we are #Readyfortherains and for #monsoon2024 Its simple is harvesting rain. pic.twitter.com/D8MkXakEmc
— zenrainman (@zenrainman) May 3, 2024
"ಒಂದು ಅಥವಾ ಎರಡು ಸುತ್ತಿನ ಮಳೆ ಬೆಂಗಳೂರು ಮೂಲ ಸೌಕರ್ಯಗಳ ಸಮಸ್ಯೆಯನ್ನು ಹೆಚ್ಚಿಸಿ ಬಿಡುತ್ತದೆ. ಶುಕ್ರವಾರ ಸಂಜೆ ಸುರಿದ ಮಳೆಗೆ ಜಯದೇವ ಫ್ಲೈಓವರ್ ಮೆಟ್ರೋ ನಿಲ್ದಾಣದ ಬಳಿ ಭಾರೀ ದಟ್ಟಣೆ ಉಂಟಾಗಿದೆ' ಎಂದು ಮತ್ತೊಬ್ಬ ನಿವಾಸಿ ಫೋಟೋ ಹಂಚಿಕೊಂಡಿದ್ದಾರೆ.
“ಸಂಚಾರ ಸಲಹೆ “
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 3, 2024
ಮಾನ್ಯತಾ ಬಳಿ ರಸ್ತೆಯಲ್ಲಿ ನೀರು ನಿಂತಿರುವುದರಿಂದ. ನಾಗವರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ ವಿರುತ್ತದೆ, ದಯಮಾಡಿ ಸಹಕರಿಸಿ.
Traffic advisory
Slow-moving traffic due to water logging in Manyatha towards Nagwara signal, Kindly co-operate. pic.twitter.com/6ru51GoRCF
"ಮಳೆಯಾಗದಿದ್ದರೆ, ಜನರು ನೀರಿನ ಕೊರತೆಯಿಂದ ಬಳಲುತ್ತಾರೆ. ಮಳೆಯಾದರೆ ಜನರು ಜಲಾವೃತದಿಂದ ಬಳಲುತ್ತಾರೆ. ಬೆಂಗಳೂರಿನಲ್ಲಿ ಎರಡು ವಿಪರೀತ? ಇದು ಜನರಿಗೆ ಬೇಕಾದ ಅಭಿವೃದ್ಧಿಯೇ? ಎಂದು ಮತ್ತೊಬ್ಬ ನಿವಾಸಿ ಪ್ರಶ್ನಿಸಿದ್ದಾರೆ.
-
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ












Click it and Unblock the Notifications