ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈದ್ಗಾ ವಿವಾದ: ಜುಲೈ 12ಕ್ಕೆ ಚಾಮರಾಜ ಪೇಟೆ ಭಾಗಶಃ ಬಂದ್!

|
Google Oneindia Kannada News

ಬೆಂಗಳೂರು,ಜುಲೈ 11: ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ನಾಳೆ (ಜುಲೈ12)ಕ್ಕೆ ಚಾಮರಾಜಪೇಟೆ ಬಂದ್‌ಗೆ ಕರೆಯನ್ನು ನೀಡಲಾಗಿದೆ. ಚಾಮರಾಜಪೇಟೆಯನ್ನು ಭಾಗಶಃ ಮುಚ್ಚಿಸಿ ಬಂದ್ ಯಶಸ್ವಿಗೊಳಿಸಬೇೆಕೆಂದು ಕೆಲವು ಸಂಘಟನೆಗಳು ನಿರಂತರವಾದ ಪ್ರಯತ್ನವನ್ನು ಮಾಡುತ್ತಿವೆ. ಕರಪತ್ರವನ್ನು ಹಂಚುವ ಮೂಲಕ ಚಾಮರಾಜಪೇಟೆ ಬಂದ್‌ಗೆ ಸಹಕಾರವನ್ನು ನೀಡುವಂತೆ ಕೇಳಿಕೊಳ್ಳಲಾಗುತ್ತಿದೆ.

Recommended Video

ಬಕ್ರೀದ್ ಸಂಭ್ರಮಕ್ಕೆ‌ ಜಮೀರ್ ಅಹ್ಮದ್ ಜೊತೆ‌ ಮುಸ್ಲಿಂ‌ ವೇಷ ತೊಟ್ಟ ಸಿದ್ದರಾಮಯ್ಯ | *Politics | OneIndia Kannada

ಚಾಮರಾಜಪೇಟೆಯ ಅಂಗಡಿಗಳ ಮೇಲೂ ಬಂದ್ ಬೆಂಬಲದ ಬೋರ್ಡ್ ಹಾಕಲಾಗಿದೆ. ಬಂದ್‌ಗೆ ನಮ್ಮ ಬೆಂಬಲವಿದೆ ಚಾಮರಾಜಪೇಟೆ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಬೇಕೆಂಬ ಸಾಲು ಬರೆಯಲಾಗಿದೆ. ಜ್ಯುವೆಲ್ಲರಿ ಶಾಪ್ಸ್, ದಿನಸಿ ಅಂಗಡಿ, ಬೇಕರಿ, ಮೆಕಾನಿಕ್ ಶಾಪ್ ಮುಂದೆ ಬೋರ್ಡ್ ಅಳವಡಿಕೆ ಮಾಡಲಾಗಿದೆ.

ಬಂದ್‌ಗೆ ಬೆಂಬಲ ಕೊಡುತ್ತೇವೆ ಎಂದಿರುವ ಅಂಗಡಿಗಳಿಗೆ ಪೋಸ್ಟರ್ ಹಂಚಿಕೆ ಮಾಡಲಾಗಿದೆ. ಬಂದ್‌ಗೆ ಕರೆಕೊಟ್ಟ ಚಾಮರಾಜಪೇಟೆ ನಾಗರೀಕರ ಒಕ್ಕೂಟದಿಂದ ಪೋಸ್ಟರ್ ಅಳವಡಿಕೆ ಮಾಡಲಾಗಿದೆ. ನಮ್ಮ ಅಂಗಡಿ ಸಂಪೂರ್ಣ ಬಂದ್ ಅಂತ ಬೆಂಬಲ ನೀಡಲಿವೆ ಎಂದಿರುವ ಹೋಟೆಲ್, ಜ್ಯೂಸ್ ಅಂಗಡಿ, ಫ್ಯಾನ್ಸಿ ಸ್ಟೋರಿ, ಸ್ಟೇಷನರಿ ಅಂಗಡಿಗಳ ಮುಂದೆ ಬೋರ್ಡ್ ಅಳವಡಿಕೆಯನ್ನು ಮಾಡಲಾಗಿದೆ. ಚಾಮರಾಜಪೇಟೆ ವಾರ್ಡ್‌ನಲ್ಲಿ ಬೋರ್ಡ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಚಾಮರಾಜಪೇಟೆ ನಾಗರೀಕರಲ್ಲೂ ಬಂದ್ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆಯಿಂದ ಕರೆ

ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆಯಿಂದ ಕರೆ

ಚಾಮರಾಜಪೇಟೆ ಆಟದ ಮೈದಾನ ಬಿಬಿಎಂಪಿ ಸ್ವತ್ತು ಹೀಗಾಗಿ ಮೈದಾನವನ್ನ ಪಾಲಿಕೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ರಂಜಾನ್, ಬಕ್ರಿದ್ ಹಬ್ಬಗಳ ಹಾಗೆ ಗೌರಿ ಗಣೇಶ ಹಬ್ಬ, ಕನ್ನಡ ರಾಜ್ಯೋತ್ಸವ ಸೇರಿದಂತೆ ಎಲ್ಲಾ ಹಬ್ಬ ಆಚರಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಚಾಮರಾಜಪೇಟೆ ಬಂದ್‌ಗೆ ಕರೆನೀಡಲಾಗಿದೆ. ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆ ಜುಲೈ12 ರಂದು ಚಾಮರಾಜಪೇಟೆ ಬಂದ್‌ಗೆ ಕರೆನೀಡಿದೆ.

ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಬಂದ್

ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಬಂದ್

""ಜುಲೈ 12ಕ್ಕೆ ಚಾಮರಾಜಪೇಟೆ ಬಂದ್‌ಗೆ ಕರೆ ಕೊಟ್ಟಿದ್ದೆವೆ, ಈ ಬಂದ್ ಗೆ ಚಾಮರಾಜಪೇಟೆಯ ಅಂಗಡಿ ಮಾಲಿಕರು, ಶಾಲೆಗಳು, ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಬೆಂಬಲ ಸೂಚಿಸುತ್ತಿದ್ದಾರೆ.‌ ಮಂಗಳವಾರ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಬಂದ ಆಚರಿಸಲಾಗುತ್ತದೆ.‌ ನಂತರ ಜುಲೈ13 ರಿಂದ 15ರ ಒಳಗೆ ಚಾಮರಾಜಪೇಟೆಯಿಂದ ಬಿಬಿಎಂಪಿವರೆಗೂ ಬೈಕ್ ರ್ಯಾಲಿ ಮಾಡಲಾಗುತ್ತದೆ.‌ ಆ ದಿನ ಪಾಲಿಕೆ ಮುಖ್ಯ ಆಯುಕ್ತ ಮನವಿ ಪತ್ರ ಸಲ್ಲಿಸಲಾಗುತ್ತದೆ. ‌ಶಾಸಕ ಜಮೀರ್ ಅಹಮ್ಮದ್ ‌ನೇತೃತ್ವದಲ್ಲಿ ಸಭೆ ನಡೆದಿದ್ದು ಆ ಸಭೆಗೆ ನಮ್ಮನ್ನ ಕರೆದಿರಲಿಲ್ಲ.‌‌ ಚಾಮರಾಜಪೇಟೆ ಆಟದ ಮೈದಾನ ಎಲ್ಲೂ ಹೋಗಿಲ್ಲ ಅಂತಾರೆ, ರಾಜಕೀಯ ಲಾಭಕ್ಕಾಗಿ ಶಾಸಕ ಜಮೀರ್ ಅಹ್ಮದ್ ಈ ರೀತಿ ಹೇಳಿಕೆ‌ ನೀಡುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು. ಜುಲೈ 12 ಕ್ಕೆ ನಮ್ಮ ಬಂದ್ ಯಶಸ್ವಿಯಾಗುತ್ತದೆ.‌ ಚಾಮರಾಜಪೇಟೆ ಮೈದಾನವನ್ನ ಪಾಲಿಕೆ ಪಡೆಯಲೇಬೇಕು'' ಎಂದು ರುಕ್ಮಾಂಗದ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಕಾರ್ಯದರ್ಶಿ ತಿಳಿಸಿದ್ದಾರೆ. ‌

ವರ್ಕ್ಫ್ ಬೋರ್ಡ್‌ ಸ್ವಾತಂತ್ರ್ಯೋತ್ಸವಕ್ಕೆ ಅವಕಾಶ ನೀಡಲ್ಲ

ವರ್ಕ್ಫ್ ಬೋರ್ಡ್‌ ಸ್ವಾತಂತ್ರ್ಯೋತ್ಸವಕ್ಕೆ ಅವಕಾಶ ನೀಡಲ್ಲ

""ಚಾಮರಾಜಪೇಟೆ ಬಂದ್‌ಗೆ ಬೆಂಬಲ ನೀಡುವಂತೆ ನಾಗರೀಕ ವೇದಿಕೆಯ‌ ಮುಖಂಡರು ಅಂಗಡಿಗಳಿಗೆ, ಸಾರ್ವಜನಿಕರಿಗೆ ಕರಪತ್ರ ಹಂಚಿದ್ದಾರೆ.‌ ಮೈದಾನಕ್ಕೆ ಸಂಬಂಧ ಪಟ್ಟಂತೆ ನಮ್ಮ ಬಳಿ ದಾಖಲೆಗಳಿವೆ, ಅದನ್ನು ನಾವು ಬಿಬಿಎಂಪಿಗೆ ಈಗಾಗಲೇ ನೀಡಿದ್ದೇವೆ. ಚಾಮರಾಜಪೇಟೆ ಮೈದಾನ ಸಾರ್ವಜನಿಕರ ಸ್ವತ್ತಾಗಬೇಕು ಮೈದಾನದಲ್ಲಿ ಎಲ್ಲಾ ರೀತಿಯ ಕಾರ್ಯಕ್ರಮ ಮಾಡಲು ಅವಕಾಶ ನೀಡಬೇಕು.‌ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೆೇವೆ. ಶಾಸಕರು ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದು ಹೇಳುತ್ತಾರೆ.‌ ಧ್ವಜಕ್ಕೆ ನಾವು ಗೌರವ ಸೂಚಿಸುತ್ತೇವೆ.‌ ಆದರೆ ಅದನ್ನು ಯಾರೇ ಹಾರಿಸಬೇಕಾದರು ಸರ್ಕಾರದ ಅನುಮತಿ ಪಡೆದೇ ಹಾರಿಸಲಿ.‌ ಇಲ್ಲಾವದಲ್ಲಿ ಧ್ವಜಾರೋಹಣಕ್ಕೆ ನಾವು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ವರ್ಕ್ಫ್ ಬೋರ್ಡ್‌ನಿಂದ ಸ್ವಾತಂತ್ರ್ಯ ದಿನ ಆಚರಣೆಗೆ ಅವಕಾಶ ನೀಡಬಾರದು. ಅವಕಾಶ ಕೊಟ್ರೆ ಗಣೇಶ ಹಬ್ಬ, ಹಿಂದೂ ಕಾರ್ಯಕ್ರಮಗಳಿಗೆ ಅವಕಾಶ ಕೊಡಲಿ, ಇಲ್ಲವಾದರೇ ನಾವು ಹೊರಾಟ ಮಾಡಿ ಜೈಲಿಗೆ ಹೋಗುದಕ್ಕು ಸಿದ್ದ. ಮೈದಾನ ಸಂಬಂಧ ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದಾಖಲೆ‌‌ ನೀಡಿದ್ದೇವೆ, ಪಾಲಿಕೆ ಹಾಗೂ ಸರ್ಕಾರ ಕ್ರಮ‌ ಕೈಗೊಳ್ಳದೇ ಹೋದಲ್ಲಿ ನಾವೇ ಕೋರ್ಟ್‌ ಮೂಲಕ ಕಾನೂನು ಹೋರಾಟ ಮಾಡುತೇವೆ'' ಎಂದು ‌ಚಾಮರಾಜಪೇಟೆ ನಾಗರೀಕರ ವೇದಿಕೆ ಅಧ್ಯಕ್ಷ ರಾಮೇಗೌಡ ಮಾಹಿತಿಯನ್ನು ನೀಡಿದರು.

ಬಂದ್‌ಗೆ ಬೆಂಬಲದ ಬೋರ್ಡ್

ಬಂದ್‌ಗೆ ಬೆಂಬಲದ ಬೋರ್ಡ್

ಜುಲೈ 12 ನೀಡಲಾಗಿರುವ ಬಂದ್ ಕರೆಗೆ ಚಾಮರಾಜಪೇಟೆಯ ಅಂಗಡಿಗಳ ಮೇಲೂ ಬಂದ್ ಬೆಂಬಲದ ಬೋರ್ಡ್ ಹಾಕಲಾಗಿದೆ. ಬಂದ್‌ಗೆ ನಮ್ಮ ಬೆಂಬಲವಿದೆ ಚಾಮರಾಜಪೇಟೆ ಆಟದ ಮೈದಾನ ಬಿಬಿಎಂಪಿ ಸ್ವತ್ತಾಗಬೇಕೆಂಬ ಸಾಲು ಬರೆಯಲಾಗಿದೆ. ಜ್ಯುವೆಲ್ಲರಿ ಶಾಪ್ಸ್, ದಿನಸಿ ಅಂಗಡಿ, ಬೇಕರಿ, ಮೆಕಾನಿಕ್ ಶಾಪ್ ಮುಂದೆ ಬೋರ್ಡ್ ಅಳವಡಿಕೆ ಮಾಡಲಾಗಿದೆ. ಶಾಸಕ ಜಮೀರ್ ಅಹಮದ್‌ ಖಾನ್ ನಡೆಸಿ ಶಾಂತಿ ಸಭೆಯ ಬಳಿಕವೂ ಬಂದ್ ಆಚರಣೆ ನಡೆಸಲಾಗುತ್ತಿದ್ದು ಬಂದ್ ಯಶಸ್ವಿಗೆ ಚಾಮರಾಜಪೇಟೆ ನಾಗರೀಕ ವೇದಿಕೆ ಪ್ರಯತ್ನ ನಡೆಸುತ್ತಿದ್ದು. ಈದ್ಗಾ ಮೈದಾನ ವಿವಾದ ಧಾರ್ಮಿಕ ಸೂಕ್ಷ್ಮತೆಯನ್ನು ಹೊಂದಿರುವುದರಿಂದ ಬಂದ್ ರೂಪುರೇಷೆ ಮತ್ತು ಬಂದ್ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮವನ್ನು ಕೈಗೊಳ್ಳಬೇಕಿದೆ.

English summary
Chamarajpet Citizens Forum has announced bandh in Chamarajpet on July 12 in protest against the BBMP's decision to give up its claim on the 2.10-acre Idgah Maidan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X