ಮುಚ್ಚಲಿದೆ ಬೆಂಗಳೂರಿನ ಮಲ್ಲೇಶ್ವರದ ಪ್ರಸಿದ್ಧ ಹೋಟೆಲ್ ನ್ಯೂ ಕೃಷ್ಣ ಭವನ! ಆಹಾರ ಪ್ರಿಯರ ಬೇಸರ

ಬೆಂಗಳೂರಿನ ಮಲ್ಲೇಶ್ವರದ ಹೃದಯಭಾಗದಲ್ಲಿರುವ ಪುರಾತನ ನ್ಯೂ ಕೃಷ್ಣ ಭವನ ಹೋಟೆಲ್ ಮುಚ್ಚುವ ಸುದ್ದಿ ಸದ್ಯ ನಗರದ ಆಹಾರ ಪ್ರಿಯರಿಗೆ ಬೇಸರ ತರಿಸಿದೆ. ಹಲವು ಮಾಧ್ಯಮಗಳಲ್ಲಿ ಪ್ರಸಿದ್ಧ ಹೋಟೆಲ್ ಮುಚ್ಚುವ ಸುದ್ದಿ ಬಂದ ನಂತರ, ಆಹಾರ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 6 ರ ನಂತರ ನ್ಯೂ ಕೃಷ್ಣಭವನ ಉಪಾಹಾರ ಗೃಹವನ್ನು ಮುಚ್ಚುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡಿತು. ಸಾಂಪ್ರದಾಯಿಕ ಪಾಕಶಾಲೆಯ ನೆಲೆಯಾಗಿದ್ದ ಆಸ್ತಿಯನ್ನು ಹೆಸರಾಂತ ಆಭರಣ ಸಂಸ್ಥೆಗೆ ಮಾರಾಟ ಮಾಡಲಾಗಿದೆ, ಈ ಜಾಗದಲ್ಲಿ ಹೊಸ ಕಟ್ಟಡ ತಲೆ ಎತ್ತಲಿದೆ.

Iconic Bengaluru Eatery, New Krishna Bhavan, Established in 1954, Set to Close

ಗೋಪಿನಾಥ್ ಪ್ರಭು ಅವರಿಂದ 1954 ರಲ್ಲಿ ಪ್ರಾರಂಭವಾದ ನ್ಯೂ ಕೃಷ್ಣ ಭವನ ತಲೆಮಾರುಗಳವರೆಗೆ ತನ್ನ ವಿಶಿಷ್ಟವಾದ ಪಾಕಶಾಲೆಯ ಕೊಡುಗೆಗಳ ಮೂಲಕ ನಿಷ್ಠಾವಂತ ಗ್ರಾಹಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ.

ಬಟನ್ ಇಡ್ಲಿ, ಮಂಗಳೂರು ನೀರ್ ದೋಸೆ, ಗ್ರೀನ್ ಮಸಾಲಾ ಇಡ್ಲಿ, ಸೇಲಂ ಸಾಂಬಾರ್ ವಡೆ, ಉಡುಪಿ ಬನ್ಸ್ ಮತ್ತು ಉಡುಪಿ ಗುಳಿಪ, ಮಂಡ್ಯ ರಾಗಿ ದೋಸೆ, ಮತ್ತು ಓಪನ್ ಬಟರ್ ಮಸಾಲೆ ದೋಸೆ ಇಲ್ಲಿ ಸಾಕಷ್ಟು ಪ್ರಸಿದ್ಧವಾಗಿತ್ತು. ಈ ತಿನಿಸು ತನ್ನ ಪ್ರತಿ ಖಾದ್ಯಕ್ಕೂ ಅಪ್ಪಟ ಮಂಗಳೂರಿನ ಸೊಗಡನ್ನು ಹೊಂದಿದ್ದು, ವಿಶಿಷ್ಠವಾಗಿತ್ತು. ಆಹಾರದಿಂದ ಮಾತ್ರವಲ್ಲಿ ಆರಂಭಿಕ ದಿನಗಳಲ್ಲಿ ಇದು ಇಲ್ಲಿನ ವಸತಿ ಗೃಹ ಸಾಕಷ್ಟು ಚಟುವಟಿಕೆ ಹೊಂದಿತ್ತು. ವೈದ್ಯರು, ಜ್ಯೋತಿಷಿಗಳು ಇಲ್ಲಿ ಜನರ ಜೊತೆ ಸಮಾಲೋಚನೆ ಮಾಡುತ್ತಿದ್ದರು.

ಹೊಸ ಕೃಷ್ಣ ಭವನದ ಪರಂಪರೆಯು ಅದರ ರುಚಿಕರವಾದ ಪಾಕಪದ್ಧತಿ ಮತ್ತು ಅನನ್ಯ ವಾತಾವರಣದೊಂದಿಗೆ ಕೊನೆಯಾಗಿಲ್ಲ, ತ್ಯಾಜ್ಯ ನಿರ್ವಹಣೆಯಲ್ಲಿ ಕೂಡ ಈ ಹೋಟೆಲ್ ಇತರರಿಗೆ ಮಾದರಿಯಾಗಿತ್ತು. ಬೇರೆಲ್ಲೂ ಸಿಗದ ರಾಗಿ ರೊಟ್ಟಿ, ನೀರ್ ದೋಸೆ ಮತ್ತು ಹಸಿರು ಇಡ್ಲಿಯಂತಹ ವಿನೂತನ ಕರ್ನಾಟಕದ ಖಾದ್ಯಗಳನ್ನು ಪರಿಚಯಿಸಿದ್ದು ನ್ಯೂ ಕೃಷ್ಣ ಭವನದ ವಿಶೇಷತೆಯಾಗಿದೆ.

ಮತ್ತೆ ತಲೆ ಎತ್ತುತ್ತಾ ಹೋಟೆಲ್?

ಇನ್ನು ಕೆಲವು ಮೂಲಗಳ ಪ್ರಕಾರ ನ್ಯೂ ಕೃಷ್ಣ ಭವನ ಹೋಟೆಲ್‌ ಹೊಸ ಕಟ್ಟಡದಲ್ಲಿ ತಲೆ ಎತ್ತಲಿದೆ ಎನ್ನಲಾಗಿದೆ. ಈಗ ಕೃಷ್ಣ ಭವನ ಇರುವ ಹೋಟೆಲ್ ಆವರಣದಲ್ಲಿ ಆಭರಣ ಮಳಿಗೆ ತಲೆ ಎತ್ತಲಿದೆ ಎನ್ನಲಾಗಿದೆ.

ಏನಾದರೂ ಡಿಸೆಂಬರ್ 6ರ ನಂತರ ನ್ಯೂ ಕೃಷ್ಣ ಭವನ ಹೋಟೆಲ್‌ನ ತಿನಿಸುಗಳು ಸಿಗುವುದಿಲ್ಲ. ಆಹಾರ ಪ್ರಿಯರು ಅದಕ್ಕೂ ಮುನ್ನ ಈ ಹೋಟೆಲ್‌ಗೆ ಭೇಟಿ ನೀಡಿ ನಿಮ್ಮಿಷ್ಟದ ಆಹಾರವನ್ನು ಸವಿಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+