ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರವಿ ಅಗಲಿಕೆ, ಭ್ರಷ್ಟರ ಶಿಕ್ಷೆಗೆ ಆಗ್ರಹಿಸಿದ ಫ್ಯಾನ್ ಪೇಜ್

By Mahesh
|
Google Oneindia Kannada News

ಬೆಂಗಳೂರು, ಮಾ.17: ದಕ್ಷ, ಪ್ರಾಮಾಣಿಕ, ಯುವ ಐಎಎಸ್ ಅಧಿಕಾರಿ ಡಿಕೆ ರವಿ ಅವರ ದುರಂತ ಸಾವಿಗೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ. ಕುಣಿಗಲ್, ಕೋಲಾರ ಸೇರಿದಂತೆ ಹಲವೆಡೆ ಸ್ವಯಂಘೋಷಿತ ಬಂದ್ ಆಚರಿಸಲಾಗುತ್ತಿದೆ. ಈ ನಡುವೆ ಸಾಮಾಜಿಕ ಜಾಲ ತಾಣಗಳಲ್ಲಿ 'ಡಿಕೆ ರವಿ ಸಾವು ಆತ್ಮಹತ್ಯೆಯಲ್ಲ-ಕೊಲೆ' ಎಂದು ಹೇಳುತ್ತಾ ಸಮಗ್ರ ತನಿಖೆಗೆ ಆಗ್ರಹಿಸಿ ಅಭಿಯಾನ ಆರಂಭಿಸಲಾಗಿದೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]

ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಾಮಾಣಿಕತೆಗೆ ಇದೇನಾ ಶಿಕ್ಷೆ? ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.ಫೇಸ್ ಬುಕ್ ಫ್ಯಾನ್ ಪುಟದಲ್ಲಿ ಬಂದಿರುವ ಕೆಲವು ಪೋಸ್ಟ್ ಗಳತ್ತ ಕಣ್ಣೋಟ ಇಲ್ಲಿದೆ: [ಮಾಫಿಯಾಗಳ ದಾಹಕ್ಕೆ ದಕ್ಷ ಅಧಿಕಾರಿ ಬಲಿ]

ಸುಮ್ಮನೆ ಬದುಕಿ ವಯಸ್ಸು ಸವೆಸುವುದಲ್ಲ
ಬದುಕಿದ್ದರೆ ಹುಲಿಯಂತೆ ನಾಲ್ಕು ದಿನ
ಬದುಕಬೇಕು. ಸಿಕ್ಕಿದ ಅಧಿಕಾರವನ್ನು ಜನರ
ಹಿತಕ್ಕೆ ಜನರ ಕಲ್ಯಾಣಕ್ಕೆ ಬಳಸೋಣ-ಡಿಕೆ ರವಿ
(ಸಾವಿಗೂ ಮುನ್ನ ತಮ್ಮ ಕಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರವಿ ಅವರು ಹೇಳಿದ ಮಾತುಗಳಿವು)

ಮಾನ್ಯ ಮುಖ್ಯಮಂತ್ರಿಗಳೇ ನಿಮ್ಮ ರಾಜ್ಯದಲ್ಲಿ ಒಬ್ಬ ನಿಷ್ಟಾವಂತ ಪ್ರಾಮಾಣಿಕ ಅಧಿಕಾರಿಗೆ ಬದುಕಲಾಗದ ಪರಿಸ್ಥಿತಿ ಬಂದಿದೆ. ಜನ ಕಷ್ಟಪಟ್ಟು IAS IP ಅಧಿಕಾರಿಗಳಾಗ್ತಾರೆ. ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ. [ಡಿಕೆ ರವಿ ಸಾವು : ಪ್ರಮುಖ ಬೆಳವಣಿಗೆಗಳು]

ಆದರೆ ನಮ್ಮ ವ್ಯವಸ್ತೆ ಒಬ್ಬ ಅಧಿಕಾರಿಯ ಜೀವ ಉಳಿಸೋಕೆ ಆಗದಷ್ಟು ದುರ್ಬಲವೇ?? ಇದು ಆತ್ಮಹತ್ಯೆ ಖಂಡಿತ ಅಲ್ಲ. ಇದರ ಹಿಂದೆ ರಾಜಕೀಯ ಭೂಗತ ಪಾತಕಿಗಳ ಕೈವಾಡ ಖಂಡಿತ ಇದೆ. ನಿಷ್ಪಕ್ಷಪಾತ ತನಿಖೆ ನಡೆಸಲು ನಿಮ್ಮಿಂದ ಸಾಧ್ಯವೇ ??- ಯಜ್ಞಾ ಭಟ್. ಡಿಕೆ ರವಿ ಬೆಂಬಲಿಗರ ಫೇಸ್ ಬುಕ್ ಫ್ಯಾನ್ ಪುಟ ಇಲ್ಲಿದೆ...

ಅಭಿಮಾನಿಗಳಿಂದ ಆಕ್ರೋಶ, ಸಂತಾಪದ ನುಡಿಗಳು

ಅಭಿಮಾನಿಗಳಿಂದ ಆಕ್ರೋಶ, ಸಂತಾಪದ ನುಡಿಗಳು

ಇವತ್ತಿನ ಸೂರ್ಯೋದಯ ಕಂಡು ಆ ಮನೆಯವರು ಅದೆಷ್ಟು ನೊಂದಿರಬಹುದು.. ಜಗ ಬೆಳಗಲು ನೀನಿದ್ದೀಯ, ಮನೆ ಬೆಳಗಲು ಅವನಿಲ್ಲವೆಂದು ಅದೆಷ್ಟು ಪರಿತಪಿಸಿರಬಹುದು... ನಾವ್ಯಾಕೆ ಹೀಗೆ.. ಕಳೆದುಕೊಂಡ ಮೇಲಷ್ಟೇ ಪರಿತಪಿಸುತ್ತೇವೆ, ಸತ್ತಹೋದ ಮೇಲಷ್ಟೆ ಪ್ರತಿಭಟಿಸುತ್ತೇವೆ... ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.. ನಿಜ.. ಆ ದುಷ್ಟರ ಉಸಿರಡಗಲು ಆ ಮನೆಯವರ ನಿಟ್ಟುಸಿರೊಂದೇ ಸಾಕು... Yes.. ರವಿಗೆ ರವಿಯೇ ಸಾಟಿ.. Missing you Ravi Sir. ‪- ಮಂಜು ಕಡ್ಲೆ

ಇದು ಆತ್ಮಹತ್ಯೆ ಖಂಡಿತ ಅಲ್ಲ

ಇದು ಆತ್ಮಹತ್ಯೆ ಖಂಡಿತ ಅಲ್ಲ

ನಮ್ಮ ವ್ಯವಸ್ತೆ ಒಬ್ಬ ಅಧಿಕಾರಿಯ ಜೀವ ಉಳಿಸೋಕೆ ಆಗದಷ್ಟು ದುರ್ಬಲವೇ?? ಇದು ಆತ್ಮಹತ್ಯೆ ಖಂಡಿತ ಅಲ್ಲ. ಇದರ ಹಿಂದೆ ರಾಜಕೀಯ ಭೂಗತ ಪಾತಕಿಗಳ ಕೈವಾಡ ಖಂಡಿತ ಇದೆ. ನಿಷ್ಪಕ್ಷಪಾತ ತನಿಖೆ ನಡೆಸಲು ನಿಮ್ಮಿಂದ ಸಾಧ್ಯವೇ ??- ಯಜ್ಞಾ ಭಟ್

ವಿಕ್ಟೋರಿಯಾ ಆಸ್ಪತ್ರೆ ಬಳಿ ಜಮಾಯಿಸಿದ ಅಭಿಮಾನಿಗಳು

ವಿಕ್ಟೋರಿಯಾ ಆಸ್ಪತ್ರೆ ಬಳಿ ಜಮಾಯಿಸಿದ ಅಭಿಮಾನಿಗಳು

ವಿಕ್ಟೋರಿಯಾ ಆಸ್ಪತ್ರೆ ಬಳಿ ಜಮಾಯಿಸಿದ ಅಭಿಮಾನಿಗಳು ಶ್ರದ್ಧಾಂಜಲಿ ಕೋರುವ ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯಿಂದ ಡಿಕೆ ರವಿ ಅವರ ಮೃತದೇಹ ನಾಗರಭಾವಿ ಬಳಿ ಇರುವ ಮಾನವ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿಂದ ಅವರ ಹುಟ್ಟೂರಾದ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಸಮೀಪದ ದೊಡ್ಡಕೊಪ್ಪಲು ಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ.

ನಾಡಿನೆಲ್ಲೆಡೆಯಿಂದ ಹರಿದು ಬಂದ ಜನಸಾಗರ

ನಾಡಿನೆಲ್ಲೆಡೆಯಿಂದ ಹರಿದು ಬಂದ ಜನಸಾಗರ

ಅಧಿಕಾರಿಯೊಬ್ಬನ ಸಾವಿಗೆ ಇಡೀ ರಾಜ್ಯವೇ ಕಂಬನಿ ಮಿಡಿದಿದೆ. ಡಿಕೆ ರವಿ ಸಾವಿನ ಸುದ್ದಿ ಕೇಳಿಸಿಕೊಂಡ ಕನ್ನಡ ಜನತೆ ಕೋಲಾರ, ಕುಣಿಗಲ್, ಕಲಬುರಗಿ ಸೇರಿದಂತೆ ವಿವಿಧೆಡೆಗಳಿಂದ ಬೆಂಗಳೂರಿಗೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಈ ಸಾವು ನ್ಯಾಯವೇ? ಎಂಬ ಪ್ರಶ್ನೆ ಎಲ್ಲರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಕುಣಿಗಲ್ ತಾಲೂಕಿನಲ್ಲಿ ನೀರವ ಮೌನ

ಕುಣಿಗಲ್ ತಾಲೂಕಿನಲ್ಲಿ ನೀರವ ಮೌನ

ಕೃಷಿಕ ಕುಟುಂಬದಿಂದ ಬಂದ ಡಿಕೆ ರವಿ ಅವರ ಹುಟ್ಟೂರು ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಮೀಪದ ದೊಡ್ಡ ಕೊಪ್ಪಲು. ಕರಿಯಪ್ಪ -ಗೌರಮ್ಮ ಎಂಬುವರ ಪುತ್ರ ಡಿ.ಕೆ ರವಿ ಅವರು ಓದಿದ್ದು ಕೂಡಾ ಕೃಷಿ ವಿಷಯವನ್ನೇ, ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ರವಿ ಅವರ ಸರಳತೆಗೆ ಮಾರು ಹೋಗದವರೇ ಇಲ್ಲ. ರವಿ ಅವರ ಊರಿನಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.

ಡಿಕೆ ರವಿ ಸರಳತೆಗೆ ಇದಕ್ಕಿಂತ ಸಾಕ್ಷಿ ಬೇಕೆ?

ಡಿಕೆ ರವಿ ಸರಳತೆಗೆ ಇದಕ್ಕಿಂತ ಸಾಕ್ಷಿ ಬೇಕೆ?

ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಡಿಕೆ ರವಿ ಅವರು ದಲಿತರು ಹಾಗೂ ಸವರ್ಣೀಯರ ನಡುವಿನ ಕದಂಕವನ್ನು ಸರಿಪಡಿಸಲು ಸಾಕಷ್ಟು ಕ್ರಮ ಕೈಗೊಂಡು ಯಶಸ್ವಿಯಾಗಿದ್ದರು. ದಲಿತರ ಮನೆಯಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವ ದೃಶ್ಯ ಎಲ್ಲರ ಕಣ್ಣು ತೆರೆಸಿತು. ಸರಳತೆ ಸಜ್ಜನಿಕೆ ಹಾಗೂ ದಕ್ಷತೆಗೆ ಇನ್ನೊಂದು ಹೆಸರಾಗಿದ್ದ ಡಿಕೆ ರವಿ ಕಳೆದುಕೊಂಡ ಕೋಲಾರ ತಮ್ಮ ದತ್ತು ಪುತ್ರ ಅಗಲಿಕೆಯ ನೋವಿನಲ್ಲಿ ತತ್ತರಿಸಿದೆ.

English summary
A fan page is created to show support to the honesty of late IAS officer D.K Ravi. 'He is not a coward to commit suicide we request the police department to find out the culprits' the fan page says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X