ಸೋಲನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಸಂಘಟಿಸುತ್ತೇನೆ: ದೇವೇಗೌಡ

Recommended Video

      ಮತ್ತೆ ಪಕ್ಷ ಸಂಘಟನೆ ಮಾಡ್ತೀನಿ ಎಂದ್ರು ಗೌಡ್ರು

      ಬೆಂಗಳೂರು, ಜೂನ್ 07: ಲೋಕಸಭೆ ಚುನಾವಣೆ ಸೋಲನ್ನು ಸವಾಲಾಗಿ ಸ್ವೀಕರಿಸಿ, ಮೈತ್ರಿ ಸರ್ಕಾರಕ್ಕೆ ಧಕ್ಕೆ ಆಗದ ರೀತಿಯಲ್ಲಿ ಜೆಡಿಎಸ್ ಪಕ್ಷವನ್ನು ಪುನಃ ಸಂಘಟಿಸುತ್ತೇನೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಹೇಳಿದರು.

      ನಗರದ ಅರಮನೆ ಮೈದಾನದಲ್ಲಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಜನಪ್ರತಿನಿಧಿಗಳಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

      ಲೋಕಸಭೆ ಚುನಾವಣೆಯಲ್ಲಿ ಸೋತ ಕೂಡಲೇ ಮನೆಯಲ್ಲಿ ಕೂರುವುದಿಲ್ಲ, ಭೂಮಿಯಿಂದ ಎದ್ದು ಬರುವ ಬಲ ಇದೆ ಎಂದು ವೀರಾವೇಶದ ಮಾತನ್ನಾಡಿದರು.

      I will re unite jds party from root level: Deve Gowda

      ಈಗ ನಗರಸಭೆ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದವರಿಂದಲೇ ತಾಲ್ಲೂಕು ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡಿಸಲಾಗುವುದು ಎಂದು ಯೋಜನೆ ಬಿಚ್ಚಿಟ್ಟ ಅವರು, ಎಲ್ಲ ಸಮುದಾಯದವರು ಒಗ್ಗಟ್ಟಾಗಿ ಹಿಂದಿನ ಕಹಿಗಳನ್ನು ಮರೆತು ಪಕ್ಷಕ್ಕಾಗಿ ದುಡಿಯಬೇಕು ಎಂದು ಹೇಳಿದರು.

      ಯಾರೇ ಪಕ್ಷ ಬಿಟ್ಟು ಹೋದರು ಹೆದರುವುದಿಲ್ಲ, ಪಕ್ಷಕ್ಕೆ ನಿಷ್ಠರಾದವರು ಮಾತ್ರವೇ ಪಕ್ಷದಲ್ಲಿ ಉಳಿಯಲಿ, ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಪಕ್ಷದ ಕಾರ್ಯ ನೀಡಲಾಗುವುದು ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+