ನಾನು ರಾಜೀನಾಮೆ ನೀಡಲಿದ್ದೇನೆ ಎಂಬ ಸುದ್ದಿ ಸುಳ್ಳು ಎಂದ ಕುಮಾರಸ್ವಾಮಿ
Recommended Video

ಬೆಂಗಳೂರು, ನವೆಂಬರ್ 28: "ಅನಾರೋಗ್ಯದ ಕಾರಣಗಳಿಂದ ನಾನು ರಾಜೀನಾಮೆ ನೀಡಲಿದ್ದೇನೆ ಎಂದು ಕೆಲ ಟಿವಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಪ್ರಸಾರವಾಗುತ್ತಿರುವ ಎಲ್ಲ ಅಂಶಗಳು ಆಧಾರ ರಹಿತವಾಗಿವೆ". -ಹೀಗೆ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಅನಾರೋಗ್ಯದ ಕಾರಣಗಳಿಂದ ನಾನು ರಾಜೀನಾಮೆ ನೀಡಲಿದ್ದೇನೆ ಎಂದು ಕೆಲ ಟಿವಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಪ್ರಸಾರವಾಗುತ್ತಿರುವ ಎಲ್ಲ ಅಂಶಗಳು ಆಧಾರ ರಹಿತವಾಗಿವೆ.
— H D Kumaraswamy (@hd_kumaraswamy) 28 November 2018
ಮಾಧ್ಯಮಗಳಲ್ಲಿ ಹೀಗೊಂದು ಸುದ್ದಿ ತೇಲಿಬಂತಂತೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಸ್ವತಃ ಅವರೇ ಮಾತನಾಡಿದ್ದರಿಂದ ಸುದ್ದಿಗೆ ರೆಕ್ಕೆಪುಕ್ಕ ಬಂದು, ಕಾಳ್ಗಿಚ್ಚಿನಂತೆ ಹರಡಿತು. ಯಾವಾಗ ಇದು ವಿಪರೀತಕ್ಕೆ ಹೋಗುತ್ತಿದೆ ಎನಿಸಿತೋ ಆಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂದೇಶ ಹಾಕಿದ್ದಾರೆ.

ಅಷ್ಟೇ ಅಲ್ಲ, ಇದೇ ವಿಚಾರವಾಗಿ ಮತ್ತೊಂದು ಕಡೆ ಮಾತನಾಡುತ್ತಾ, ದಿನಕ್ಕೆ ಇಪ್ಪತ್ತು ಗಂಟೆಗಳ ಕಾಲ ಕೆಲಸ ಮಾಡುವಷ್ಟು ದೈಹಿಕವಾಗಿ ನಾನು ಆರೋಗ್ಯವಾಗಿದ್ದೇನೆ. ಅಷ್ಟು ಚೈತನ್ಯ ನನಗಿದೆ ಎಂದು ಕೂಡ ಅವರು ಹೇಳಿದ್ದಾರೆ. ನಟ ಹಾಗೂ ಮಾಜಿ ಸಚಿವ ಅಂಬರೀಶ್ ನಿಧನದ ನಂತರ ತಾವೇ ಮುಂದಾಳತ್ವ ವಹಿಸಿ, ಅಂತ್ಯಕ್ರಿಯೆಯನ್ನು ಯಾವುದೇ ಗೊಂದಲ ಇಲ್ಲದಂತೆ ನೆರವೇರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಶ್ರಮಿಸಿದ್ದನ್ನು ಇಲ್ಲಿ ಶ್ರಮಿಸಬಹುದು.












Click it and Unblock the Notifications