Rishab Shetty: ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿಬಿಟ್ಟಿದ್ದಾರೆ, ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎಂದ ರಿಷಬ್ ಶೆಟ್ಟಿ
ಬೆಂಗಳೂರು, ಏಪ್ರಿಲ್. 02: ಕಾಂತಾರ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನದ ನಂತರ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದಾದ ನಂತರ ಅವರಿಗೆ ತಳುಕು ಹಾಕಿಕೊಂಡಿದ್ದು ರಾಜಕಿಯ ಪ್ರವೇಶ ಎಂಬ ವದಂತಿ. ರಿಷಬ್ ಶೆಟ್ಟಿ ಒಂದು ನಿರ್ದಿಷ್ಟ ಪಕ್ಷಕ್ಕೆ ಸೇರುತ್ತಾರೆ ಎಂಬ ಬಗ್ಗ ಊಹಾಪೋಹಗಳು ಹರಿದಾಡುತ್ತಿದ್ದವು. ಅದಕ್ಕೆ ಸ್ವತಃ ಅವರೇ ಫುಲ್ ಸ್ಟಾಫ್ ಇಟ್ಟಿದ್ದಾರೆ.
ರಿಷಬ್ ರಾಜಕೀಯಕ್ಕೆ ಎಂಟ್ರಿ
— Saraswathi Jagirdar 🇮🇳 (@saraswathi1717) April 1, 2023
ಇವತ್ತಿನ ಸುದ್ದಿ..@shetty_rishab #April1st pic.twitter.com/GgyAbK6kf1
ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ರಾಜಕೀಯ ಸೇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ತಾವು ಎಂದಿಗೂ ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಸಿನಿಮಾವನ್ನು ಬೆಂಬಲಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಪತ್ರಕರ್ತರೊಬ್ಬರು ರಿಷಬ್ ಶೆಟ್ಟಿ ರಾಜಕೀಯಕ್ಕೆ ಸೇರುತ್ತಿದ್ದರೆ ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ, 'ಇದು ಸುಳ್ಳು ಸುದ್ದಿ ಎಂದು ಹೇಳಿ. ಇಂದು ಏಪ್ರಿಲ್ 1 ಎಂದು ಸ್ಪಷ್ಟವಾಗಿ ಹೇಳಿ, "ಕೆಲವರು ಈಗಾಗಲೇ ನನ್ನನ್ನು ಒಂದು ನಿರ್ದಿಷ್ಟ ಪಕ್ಷದ ಬೆಂಬಲಿಗ ಎಂದು ತೋರಿಸಿದ್ದಾರೆ. ನಾನು ಎಂದಿಗೂ ರಾಜಕೀಯಕ್ಕೆ ಹೋಗುವುದಿಲ್ಲ" ಎಂದು ಹೇಳಿದ್ದಾರೆ.
ರಿಷಬ್ ರಾಜಕೀಯ ಎಂಟ್ರಿ...ಇವತ್ತಿನ ಸುದ್ದಿ.. ಎಂದು ಟ್ವಿಟ್ ಮಾಡಿರುವ ಪತ್ರಕರ್ತರೊಬ್ಬರು ರಿಷಬ್ ಶೆಟ್ಟಿಯನ್ನು ಟ್ಯಾಗ್ ಮಾಡಿ ಹ್ಯಾಶ್‌ಟ್ಯಾಗ್‌ನಲ್ಲಿ ಏಪ್ರಿಲ್ 1 ಎಂದು ಸೇರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ " ಸುಮ್ನನೆ ಇರಿ ಮರ್ರೆ. ಸುಳ್ಳು ಸುದ್ದಿ, #April1st ಹೀಗೆ ಹೇಳಿ... ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ" ಎಂದು ಕೈ ಮುಗಿದು ರಿಪ್ಲೈ ಮಾಡಿದ್ದಾರೆ.
ಅವರ ಅಭಿಮಾನಿಯೊಬ್ಬರು ಅವರು ರಾಜಕೀಯಕ್ಕೆ ಸೇರಬೇಕು, ನಿಮ್ಮನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ. ಇದಕ್ಕೂ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ, "ಬೇಡ ದೇವ್ರು, ನನ್ನ ಸಿನಿಮಾಗೆ ನಿಮ್ಮ ಸಪೋರ್ಟ್ ಇದ್ರೆ ಸಾಕು" ಎಂದಿದ್ದು, ರಾಜಕೀಯ ಬೇಡ, ನನ್ನ ಸಿನಿಮಾಗಳನ್ನು ಬೆಂಬಲಿಸಿ ಎಂದು ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಕಾಂತಾರ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಅವರು ರಾಜಕೀಯ ಪಕ್ಷ ಸೇರಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ರಿಷಬ್ ಶೆಟ್ಟಿ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದು, ರಾಜಕೀಯಕ್ಕೆ ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆಗಳು ತುಂಬಾ ಹೆಚ್ಚಿರುವುದರಿಂದ ಕಾಂತಾರ ಫ್ರಾಂಚೈಸಿಯಲ್ಲಿ ರಿಷಬ್ ಗಂಭೀರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ.
ಇನ್ನು, ಕಳೆದ ತಿಂಗಳು ನಟ ರಿಷಬ್ ಶೆಟ್ಟಿ ಅರಣ್ಯ ನಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಕಾಂತಾರ ಸಿನಿಮಾ ಚಿತ್ರೀಕರಣ ಸೇರಿದಂತೆ ಹಲವು ಕಾಲ ಕಾಡಿನಲ್ಲಿ ಕಾಲ ಕಳೆದಿರುವ ನಟ ರಿಷಬ್ ಶೆಟ್ಟಿ, ಅಲ್ಲಿನ ಜನರ ಸಮಸ್ಯೆಗಳು ಮತ್ತು ಕಾಡಾನೆ ದಾಳಿ, ಕಾಡ್ಗಿಚ್ಚುಗಳ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು.
"ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು" ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದರು.












Click it and Unblock the Notifications