"ಬೆಂಗಳೂರಿಗೆ ಬಂದು 2 ವರ್ಷದಲ್ಲಿ ಕನ್ನಡ ಕಲಿತೆ: ಈಗ ಮರಾಠಿ ಕಲಿಯಬೇಕು.. ಎಲ್ಲಾ ವೆಸ್ಟ್ ಆಗೋಯ್ತು" ವೈರಲ್ ಪೋಸ್ಟ್!
ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವವರು ಕನ್ನಡ ಕಲಿಯಬೇಕು. ಕನ್ನಡಿಗರೊಂದಿಗೆ ಕಲಿತು ಕನ್ನಡದಲ್ಲೇ ವ್ಯವಹರಿಸಬೇಕು ಎನ್ನುವುದನ್ನು ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯದವರೂ ಅರ್ಥ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಹೊರ ರಾಜ್ಯದಿಂದ ಬಂದವರು ಸ್ವಲ್ಪವಾದರೂ ಕನ್ನಡ ಕಲಿತು ಮಾತನಾಡುತ್ತಿದ್ದಾರೆ. ಕೆಲವರು ಕನ್ನಡ ಭಾಷೆಯನ್ನು ಕಲಿಯುವುದಕ್ಕೆ ಹಿಂದೇಟು ಹಾಕುವುದು ಅಥವಾ ಅಸಡ್ಡೆ ತೋರಿದರೂ. ಹಲವರು ಪ್ರೀತಿ ಹಾಗೂ ಆಸೆಯಿಂದಲೇ ಕನ್ನಡ ಭಾಷೆಯನ್ನು ಕಲಿಯುತ್ತಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಬೆಂಗಳೂರಿಗೆ ಬಂದು ಕನ್ನಡ ಕಲಿತರೂ ಪ್ರಯೋಜನವಾಗಲಿಲ್ಲ ಅಂತ ಪೋಸ್ಟ್ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಯಾವ ಕಾರಣಕ್ಕೆ ಕನ್ನಡ ಕಲಿತರೂ ಅದನ್ನು ಬಳಸಲಾಗಲಿಲ್ಲ ಎನ್ನುವುದನ್ನೂ ವ್ಯಕ್ತಿ ಬರೆದುಕೊಂಡಿದ್ದಾರೆ.
ಬೆಂಗಳೂರು ಹಾಗೂ ಕರ್ನಾಟಕಕ್ಕೆ ಹೊರ ರಾಜ್ಯ ಹಾಗೂ ದೇಶಗಳಿಂದ ಉದ್ಯೋಗ ಹಾಗೂ ಶಿಕ್ಷಣಕ್ಕೆಂದು ಬರುವವರಲ್ಲಿ ಬಹುತೇಕರು ಕನ್ನಡ ಭಾಷೆಯನ್ನು ಕಲಿಯುವುದಿಲ್ಲ. ಕೆಲವರು ಕೆಲಸಕ್ಕೆ ಬೇಕಾದಷ್ಟು ಮಾತ್ರ ಕನ್ನಡ ಕಲಿತು ವರ್ಷಗಳ ಕಾಲ ಇಲ್ಲಿ ನೆಲೆಸಿರುವುದು ಇದೆ. ಆದರೆ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಎರಡು ವರ್ಷಗಳ ಕಾಲ ನೆಲೆಸಿ, ಕನ್ನಡ ಭಾಷೆಯನ್ನು ಕಲಿತೆ ಆದರೆ ಅದನ್ನು ಬಳಸುವುದರ ಒಳಗಾಗಿ ನನ್ನ ಜೀವನದಲ್ಲಿ ಬದಲಾವಣೆ ಆಯಿತು ಎಂದು ಪೋಸ್ಟ್ ಮಾಡಿಕೊಂಡಿದ್ದು. ಇದು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ.

Ra_Bies 3.0 ಎನ್ನುವ ಖಾತೆಯಿಂದ ಮಾಡಲಾಗಿರುವ ಟ್ವೀಟ್ ಭಾರೀ ಚರ್ಚೆಯಾಗುತ್ತಿದೆ. ಈ ಟ್ವೀಟ್ ನೋಡಿ ಕೆಲವು ನಾರ್ಥಿಗಳು ಇದೆಲ್ಲಾ ಬೇಕಾ ಎನ್ನುತ್ತಿದ್ದಾರೆ. ಆದರೆ ಕನ್ನಡಿಗರು ಈತ ನಿಜವಾಗಿಯೂ ಬೆಂಗಳೂರಿನಲ್ಲಿ ನೆಲೆಸಿ ಕನ್ನಡ ಕಲಿತಿದ್ದಾನೆ ಎನ್ನುವ ಬಗ್ಗೆ ಅನುಮಾನವಿದೆ ಎಂದಿದ್ದಾರೆ.
ನನಗೆ ಬೆಂಗಳೂರಿಗೆ ವರ್ಗಾವಣೆ ಆಯ್ತು, ನನ್ನ ಜೀವನಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಕನ್ನಡ ಕಲಿತೆ. ಕನ್ನಡ ಕಲಿಯಲು ನನಗೆ 2 ವರ್ಷಗಳು ಬೇಕಾಯಿತು. ನಾನು ಮಾತನಾಡಲು ಪ್ರಾರಂಭಿಸಿದ ತಕ್ಷಣ, ನನಗೆ ಮುಂಬೈನಲ್ಲಿ ಹುದ್ದೆ ಸಿಕ್ಕಿದೆ. ನಾನೀಗ ಮುಂಬೈಗೆ ವರ್ಗಾವಣೆ ಆಗುತ್ತಿದ್ದೇನೆ ಎಂದು ಪೋಸ್ಟ್ ಮಾಡಲಾಗಿದೆ. ಇದಕ್ಕೆ ನಾರ್ಥಿಗಳು ಸರಿ ಹೋಯ್ತು ಈಗ ನೀವು ಮರಾಠಿ ಕಲಿಯಬೇಕು ಎಂದಿದ್ದಾರೆ. ಮಹಾರಾಷ್ಟ್ರದಲ್ಲೂ ಹಿಂದಿ ಹೇರಿಕೆ ವಿರೋಧಿಸಿ ಬೃಹತ್ ಅಭಿಯಾನಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ಮರಾಠಿ ಮೊದಲು ಎನ್ನುವ ಅಭಿಯಾನ ಶುರುವಾಗಿದೆ. ಈ ಪೋಸ್ಟ್‌ನಲ್ಲಿ ಕನ್ನಡ - ಮರಾಠಿ ಭಾಷೆಯನ್ನು ಏಕಕಾಲಕ್ಕೆ ನಾರ್ಥಿಗಳು ಟ್ರೋಲ್ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಅನುಮಾನವೂ ಶುರುವಾಗಿದೆ.
I got transferred to Bangalore, for the sake of my life, I learnt Kannada. It took me 2 years to learn it. As soon I start speaking it, I got posted in Mumbai
— Ra_Bies 3.0 (@Ra_Bies) July 3, 2025
ಬೆಂಗಳೂರಿನಲ್ಲಿ ಭಾಷಾ ವಿವಾದ ತಣ್ಣಗಾಗುತ್ತಿದೆ ಎಂದು ಸಮಾಧಾನಪಡುವ ಸಂದರ್ಭದಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಮಾಡುತ್ತಿರುವ ಪೋಸ್ಟ್‌ಗಳು ಹಾಗೂ ಕಮೆಂಟ್‌ಗಳು ಭಾರೀ ಚರ್ಚೆಯನ್ನು ಸೃಷ್ಟಿ ಮಾಡಿವೆ. ಕನ್ನಡ - ಮರಾಠಿ ಈ ರೀತಿ ಯಾವುದೇ ಭಾಷೆಯನ್ನು ಕಲಿಯವುದಕ್ಕೆ ಇಷ್ಟವಿಲ್ಲ ಎಂದಾದರೆ ಉತ್ತರ ಪ್ರದೇಶ - ಬಿಹಾರದಲ್ಲೇ ಯಾಕೆ ನೀವು ಕೆಲಸ ಹುಡುಕಿಕೊಳ್ಳಬಾರದು ಎಂದು ಜನ ಪ್ರಶ್ನೆ ಮಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ.












Click it and Unblock the Notifications