ಬೆಂಗಳೂರು ನೋಡಿ ನಗುತ್ತಿದ್ದ ಹೈದರಾಬಾದ್‌ಗೂ ಅದೇ ಸಮಸ್ಯೆ! ನಮ್ಮ ಕಷ್ಟ ಗೊತ್ತಾಯ್ತಾ ಎಂದ ಬೆಂಗಳೂರಿಗರು!
ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಂದಲೂ ಟ್ರಾಫಿಕ್ ಜಾಮ್ ವಿಪರೀತ ಹೆಚ್ಚಳವಾಗಿದೆ. ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ದಿನಕ್ಕೊಂದು ಟ್ರೋಲ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವುದಿದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದ್ದು. ಮೆಟ್ರೋ ಬಂದ ಮೇಲೂ ಟ್ರಾಫಿಕ್ ಜಾಮ್‌ನಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಆಗಿಲ್ಲ. ಆದರೆ, ಬೆಂಗಳೂರಿನ ಬಗ್ಗೆ ಕಾಮಿಡಿ ಮಾಡುತ್ತಿದ್ದ ಜನರಿರುವ ನಗರಗಳಲ್ಲೂ ಇದೀಗ ನಿಧಾನವಾಗಿ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಬಗ್ಗೆ ಕಾಮಿಡಿ ಮಾಡುತ್ತಿದ್ದ ದಕ್ಷಿಣ ಭಾರತದ ಉಳಿದ ಪ್ರಮುಖ ನಗರಗಳಲ್ಲೂ ನಿಧಾನವಾಗಿ ಟ್ರಾಫಿಕ್ ಜಾಮ್ ಹೆಚ್ಚಾಗಿದೆ.
ಬೆಂಗಳೂರಿಗೆ ಐಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪೈಪೋಟಿ ನೀಡುತ್ತಿರುವ ಹೈದರಾಬಾದ್‌ನಲ್ಲಿಯೂ ಇದೀಗ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಇಷ್ಟು ದಿನಗಳ ಕಾಲ ಬೆಂಗಳೂರು & ಬೆಂಗಳೂರಿನ ಟ್ರಾಫಿಕ್ ಜಾಮ್ ಬಗ್ಗೆ ಹೈದರಾಬಾದ್‌ನ ಕೆಲವರು ಕಾಮಿಡಿ ಮಾಡುತ್ತಿದ್ದರು. ನೆರೆಯ ರಾಜ್ಯದ ರಾಜಕಾರಣಿಗಳೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾದಾಗ ಹೈದರಾಬಾದ್‌ಗೆ ಬನ್ನಿ, ಕೇರಳಕ್ಕೆ ಬನ್ನಿ ಎಂದೂ ಆಹ್ವಾನ ನೀಡಿದ್ದೂ ಇದೆ.

ಅಲ್ಲದೇ ಬೆಂಗಳೂರಿನಲ್ಲಿ ಮಳೆ ಅನಾಹುತ ಅಥವಾ ಯಾವುದೇ ಸಮಸ್ಯೆ ಎದುರಾದರೂ, ಕಾಮಿಡಿ ಮತ್ತು ಟ್ರೋಲ್ ಮಾಡುವುದು ಇದೆ. ಆದರೆ, ಬೆಂಗಳೂರಿನಲ್ಲಿ ಆಗುತ್ತಿರುವ ಸಮಸ್ಯೆಗಳೇ ಸುತ್ತಮುತ್ತಲಿನ ನಗರಗಳಲ್ಲೂ ಆಗುತ್ತಿದೆ. ಕಳೆದ ಒಂದು ವಾರದಿಂದ ಹೈದರಾಬಾದ್‌ನಲ್ಲಿ ವಿಪರೀತ ಟ್ರಾಫಿಕ್ ಜಾಮ್ ಸಮಸ್ಯೆ ಆಗುತ್ತಿದ್ದು.
ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್‌ನಲ್ಲಿಯೂ ಬೆಂಗಳೂರಿನಂತೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ. ವಾಹನಗಳ ಹೆಚ್ಚಳ ಹಾಗೂ ಮಳೆ ಸೇರಿದಂತೆ ವಿವಿಧ ಕಾರಣಕ್ಕೆ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಇದನ್ನು ದಕ್ಷಿಣ ಭಾರತದ ಮತ್ತೊಂದು ಟ್ರಾಫಿಕ್ ಜಾಮ್ ನಗರ, ಎರಡನೇ ಬೆಂಗಳೂರು ಎಂದು ಜನ ಕರೆಯುವುದಕ್ಕೆ ಪ್ರಾರಂಭಿಸಿದ್ದಾರೆ. ಬೆಂಗಳೂರಿನಂತೆಯೇ ಹೈದರಾಬಾದ್ ನಗರವನ್ನೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ದಕ್ಷಿಣ ಭಾರತದ ಎರಡನೇ ನಗರ: ಇನ್ನು ಬೆಂಗಳೂರಿನಂತೆ ಹೈದರಾಬಾದ್‌ನಲ್ಲಿಯೂ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದು ದಕ್ಷಿಣ ಭಾರತದ ಎರಡನೇ ಬೆಂಗಳೂರು ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಟ್ರೋಲ್‌ಗಳನ್ನು ನೋಡಿ ಬೆಂಗಳೂರಿಗರು, ಬೆಂಗಳೂರಿಗರ ಕಷ್ಟ ಈಗ ಅರ್ಥವಾಗುತ್ತಿದೆಯಾ ಅಂತ ಪ್ರಶ್ನೆ ಮಾಡಿದ್ದಾರೆ.
‘U’ turns blocked, and heavy vehicles allowed during peak hours at Rayadurg are making life hell for daily commuters. @HYDTP please intervene & help us!! #hyderabadtraffic pic.twitter.com/7KiJ7yjv2M
— Krishna Mantravadi (@krishtalkz) July 4, 2025
ಹೈದರಾಬಾದ್‌ನಲ್ಲಿ ಟ್ರಾಫಿಕ್ ಹೆಚ್ಚಳ: ಹೈದರಾಬಾದ್‌ನಲ್ಲಿ ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದು. ರಿಯಲ್ ಎಸ್ಟೇಟ್ ಬೆಳೆಯುತ್ತಿದೆ. ಇಲ್ಲಿ ವಿವಿಧ ಕಂಪನಿಗಳು ಪ್ರಾರಂಭವಾಗಿವೆ. ಅಲ್ಲದೇ ಉತ್ತರ ಭಾರತದಿಂದ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಕಾರಣಗಳಿಗೆ ಈ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಂತೆಯೇ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications