ಬೆಂಗಳೂರು, ಹೈದರಾಬಾದ್ ಮೆಟ್ರೋ ಪ್ರಯಾಣಿಕರು, ಅಂಕಿ ಅಂಶಗಳ ಚಿತ್ರಣ

ಬೆಂಗಳೂರು, ಮೇ 20: ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ತೆಲಂಗಾಣದ ರಾಜಧಾನಿ ಹೈದರಾಬಾದ್‌ ಅನ್ನು ಮೂಲ ಸೌಕರ್ಯ ಮತ್ತು ಐಟಿ ಕಂಪನಿಗಳ ಸ್ಥಾಪನೆಗಳ ವಿಚಾರದಲ್ಲಿ ಯಾವಾಗಲೂ ಹೋಲಿಕೆ ಮಾಡಲಾಗುತ್ತದೆ. ಈಗ ಉಭಯ ನಗರಗಳು ಮತ್ತೆ ಚರ್ಚೆಯ ವಿಷಯವಾಗಿದೆ. ಅದಕ್ಕೆ ಕಾರಣವಾಗಿರುವುದು ಮೆಟ್ರೋ ರೈಲು ಸೇವೆ.

ತೆಲಂಗಾಣ ಸರ್ಕಾರದ ಉಚಿತ ಪ್ರಯಾಣದ ಘೋಷಣೆ ಕಾರಣಕ್ಕೆ ಹೈದರಾಬಾದ್ ಮೆಟ್ರೋದ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗುತ್ತಿದೆ. ಮೆಟ್ರೋ ರೈಲು ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಿಸುತ್ತಿರುವ ಎಲ್ & ಟಿ ಕಂಪನಿ ಈ ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

Hyderabad And Bengaluru Metro Ridership Study

2023ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 'ಶಕ್ತಿ' ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದೆ. ಆದರೆ ಬೆಂಗಳೂರು ನಗರದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದೆ.

ಮೆಟ್ರೋ ಪ್ರಯಾಣಿಕರ ಸಂಖ್ಯೆ ಅಂಕಿ, ಅಂಶ: ಕರ್ನಾಟಕದಲ್ಲಿ ಜೂನ್ 2023ರಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದಿತು. ಆದರೆ ಬೆಂಗಳೂರು ನಗರದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 'ಶಕ್ತಿ' ಉಚಿತ ಪ್ರಯಾಣ ಯೋಜನೆಯ ಪರಿಣಾಮ ನಮ್ಮ ಮೆಟ್ರೋದ ಮೇಲೆ ಆಗಿಲ್ಲ.

2023ರ ಜೂನ್‌ನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 1.81 ಲಕ್ಷ, ಜುಲೈನಲ್ಲಿ 1.89 ಲಕ್ಷ, ಆಗಸ್ಟ್‌ನಲ್ಲಿ 1.93 ಲಕ್ಷ. ಸೆಪ್ಟೆಂಬರ್‌ನಲ್ಲಿ 1.76 ಲಕ್ಷ, ಅಕ್ಟೋಬರ್‌ 2023ರಲ್ಲಿ 1.98 ಲಕ್ಷಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ನವೆಂಬರ್‌ನಲ್ಲಿ 1.99 ಮತ್ತು ಡಿಸೆಂಬರ್‌ನಲ್ಲಿ 2.13 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ನಡೆಸಿದ್ದಾರೆ.

ಶಕ್ತಿ ಯೋಜನೆ ಜಾರಿಯಲ್ಲಿದ್ದರೂ ಸಹ ಅಧಿಕಾರಿಗಳ ಮಾಹಿತಿ ಪ್ರಕಾರ 2024ರ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 2.40 ಲಕ್ಷ. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕ್ರಮವಾಗಿ 2.09 ಮತ್ತು 2 ಲಕ್ಷ ಪ್ರಯಾಣಿಕರು ಸಂಚಾರಿಸಿದ್ದಾರೆ.

'ಶಕ್ತಿ' ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿದೆ. ಆದರೆ ಬಸ್‌ನಲ್ಲಿ ಸಂಚಾರ ನಡೆಸಿ ವಾಹನ ದಟ್ಟಣೆಯಲ್ಲಿ ಸಿಲುಕುವ ಬದಲು ಸಮಯ ಉಳಿಸಲು ಜನರು ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಮೆಟ್ರೋದಲ್ಲಿ ಸಂಚಾರ ನಡೆಸುವ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಉಚಿತ ಬಸ್ ಪ್ರಯಾಣ, ಆಟೋ, ಕ್ಯಾಬ್, ಖಾಸಗಿ ವಾಹನ ಹೀಗೆ ವಿವಿಧ ಮಾದರಿಯ ಸಾರಿಗೆ ಸಂಪರ್ಕವಿದ್ದರೂ ಸಹ ನಮ್ಮ ಮೆಟ್ರೋದ ಪ್ರಯಾಣಿಕರ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ನಮ್ಮ ಮೆಟ್ರೋ ಸೇವೆ ನೀಡುವ ಬಿಎಂಆರ್‌ಸಿಎಲ್ ತನ್ನ ಕಾರ್ಯಾಚರಣೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ. ಆದರೂ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ.

ಏಪ್ರಿಲ್ 2024ರಲ್ಲಿ ಒಂದೇ ದಿನ ನಮ್ಮ ಮೆಟ್ರೋದಲ್ಲಿ 7 ಲಕ್ಷ ಜನರು ಸಂಚಾರ ನಡೆಸಿ ಹೊಸ ದಾಖಲೆ ಬರೆದಿದ್ದಾರೆ. ಬೆಂಗಳೂರು ನಗರದಲ್ಲಿ 2024ರ ಡಿಸೆಂಬರ್‌ನಲ್ಲಿ ಹೊಸ ಮಾರ್ಗದಲ್ಲಿ ನಮ್ಮ ಮಟ್ರೋ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಪ್ರತಿದಿನದ ಪ್ರಯಾಣಿಕರ ಸಂಖ್ಯೆ 6 ರಿಂದ ದ 10 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಹೈದರಾಬಾದ್ ಮೆಟ್ರೋ ವೆಬ್‌ಸೈಟ್ ಪ್ರಕಾರ 2024ರ ಮೇ ನಂತೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಪ್ರತಿದಿನ 4.80 ರಿಂದ 5 ಲಕ್ಷ. ನವದೆಹಲಿ ಮತ್ತು ಬೆಂಗಳೂರು ಬಿಟ್ಟರೆ ದೇಶದಲ್ಲಿ ಅತಿ ಉದ್ದದ ನಮ್ಮ ಮೆಟ್ರೋ ಜಾಲ ಹೊಂದಿರುವ ನಗರ ಹೈದರಾಬಾದ್ ಆಗಿದೆ.

ಮೂರು ಕಾರಿಡಾರ್‌ನಲ್ಲಿ ಹೈದರಾಬಾದ್‌ನಲ್ಲಿ ಮೆಟ್ರೋ ಸಂಚಾರ ನಡೆಸುತ್ತಿದ್ದು, ಸುಮಾರು 69.2 ಕಿ. ಮೀ. ವ್ಯಾಪ್ತಿಯನ್ನು ಹೊಂದಿದೆ. 2017ರಲ್ಲಿ ಮೆಟ್ರೋ ಆರಂಭವಾದ ಬಳಿಕ 50 ಕೋಟಿ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ ಎಂದು ಮೇ ತಿಂಗಳಿನಲ್ಲಿ ತಿಳಿಸಲಾಗಿದೆ.

ಹೈದರಾಬಾದ್ ಮೆಟ್ರೋ ನಿರ್ವಹಿಸುತ್ತಿರುವ ಎಲ್ & ಟಿ ಪ್ರಕಾರ ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಕೆಲಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತವಾಯಿತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದು ವಾಣಿಜ್ಯ ವಹಿವಾಟು ಎಂದಿನಂತೆ ಆರಂಭವಾದರೂ ಸಹ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿಲ್ಲ. ಇದಕ್ಕೆ ಸರ್ಕಾರದ ಉಚಿತ ಪ್ರಯಾಣ ಘೋಷಣೆಯೇ ಕಾರಣ ಎಂಬುದು ಆರೋಪ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+