ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಜೈಲಿನಲ್ಲಿರುವವನಿಂದ ಜೀವ ಬೆದರಿಕೆ
ಬೆಂಗಳೂರು, ಜೂನ್ 24: ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾಗಿದ್ದ ವ್ಯಕ್ತಿ ಜೈಲಿನಲ್ಲಿದ್ದುಕೊಂಡೇ ಪತ್ನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಆಸ್ಟಿನ್ ಟೌನ್ ನಿವಾಸಿ ಆಯೀಷಾ ಖಾನಂ ಅವರಿಗೆ ಪತಿ ಅಬ್ದುಲ್ ನಬಿ ಖಾನ್ ಜೈಲಿನಿಂದಲೇ ಬೆದರಿಕೆ ಹಾಕಿದ್ದರು. ಈ ಸಂಬಂಧ ಪತ್ನಿ ಆಯೇಷಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಅಬ್ದುಲ್ ನಬಿ ಖಾನ್ ಮೇಲೆ ಪೋಕ್ಸೊ ಕಾಯ್ದೆಯಡಿ ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.

ಶಾಲೆಯಿಂದ ಮಗಳನ್ನು ಕರೆದುಕೊಂಡು ಆಯೇಷಾ ಮನೆಗೆ ಹೋಗುತ್ತಿದ್ದಳು ಈ ವೇಳೆ ಅಬ್ದುಲ್ ನಬಿಖಾನ್ ಹತ್ತಿರದ ಸಂಬಂಧಿ ಮೊಬೈಲ್‌ನ್ನು ಆಯೇಷಾ ಅವರಿಗೆ ಈಡಿದ್ದ ಅವರು ಮಾತನಾಡುತ್ತಿದ್ದಂತೆ ಜೈಲಿನಿಂದ ಬಂದ ಕೂಡಲೇ ಮೊದಲು ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ತಕ್ಷಣ ಆಯೇಷಾ ಅಶೋಕನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications