ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ವಿಲ್ಲಾಗೆ ಗುದ್ದಲಿ ಪೂಜೆ ಮುನ್ನವೇ ಎಂಥಾ ಬೇಡಿಕೆ ಬಂತು ನೋಡಿ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ಬಿಡಿಎ ದಾಸನಪುರ ಬಳಿ ನಿರ್ಮಿಸಲಿರುವ 4 ಬಿಎಚ್‌ಕೆ ವಿಲ್ಲಾಗಳಿಗೆ ಈಗಲೇ ಬೇಡಿಕೆ ಆರಂಭವಾಗಿದೆ. ದಾಸನಪುರ ಬಿಡಿಎ ನಿರ್ಮಿಸಲು ಉದ್ದೇಶಿಸಿರುವ 320 ವಿಲ್ಲಾಗಳ ಪೈಕಿ 200 ಕ್ಕೂ ವಿಲ್ಲಾಗಳಿಗೆ ಈಗಲೇ ಭಾರಿ ಬೇಡಿಕೆ ಬಂದಿದೆ.

ಕಳೆದ ಎರಡು ವರ್ಷಗಳಿಂದ ಬಹುತೇಕ ಬಿಡಿಎ ಅಪಾರ್ಟ್ ಮೆಂಟ್‌ಗಳು ಖಾಲಿ ಇವೆ, ರಿಯಾಯ್ತಿಯನ್ನು ಘೋಷಿಸಿದರೂ ಪ್ರಯೋಜನವಾಗುತ್ತಿಲ್ಲ, ಏಕೆಂದರೆ ಮೈಸೂರು ರಸ್ತೆ ಬಳಿ ಇನ್ನಿತರೆ ಕಡೆಗಳಲ್ಲಿ ಬಿಡಿಎ ನಿರ್ಮಿಸಿರುವ ಪ್ಲಾಟ್‌ಗಳು ಕಡಿಮೆ ವಿಸ್ತೀರ್ಣವನ್ನು ಹೊಂದಿದೆ ಎನ್ನುವುದು ಒಂದು ಕಾರಣವಾಗಿದೆ.

ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಲಭ್ಯ: ಬೇಗ ಖರೀದಿಸಿ ಕೆಂಪೇಗೌಡ ಬಡಾವಣೆಯಲ್ಲಿ 100 ನಿವೇಶನಗಳು ಲಭ್ಯ: ಬೇಗ ಖರೀದಿಸಿ

ಆದರೆ ದಾಸನಪುರದಲ್ಲಿ ಇನ್ನೂ ನಿರ್ಮಾಣವಾಗದ ವಿಲ್ಲಾಗಳಿಗೆ ಬೇಡಿಕೆ ಹೆಚ್ಚಾಗಿದೆ. ರೇರಾ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಾವೇ ಅರ್ಜಿ ಸ್ವೀಕರಿಸಲು ಅಧಿಸೂಚನೆ ಹೊರಡಿಸಿಲ್ಲ, ಸಾರ್ವಜನಿಕರಿಂದ ಇದೇ ರೀತಿ ಸ್ಪಂಚನೆ ದೊರೆತರೆ ಕೆಲವೇ ತಿಂಗಳುಗಳಲ್ಲಿ ಎಲ್ಲಾ ವಿಲ್ಲಾಗಳನ್ನು ಮಾರಾಟ ಮಾಡಲಾಗುವುದು, ಆಲೂರು ವಿಲ್ಲಾ ಮಾದರಿಯಲ್ಲೇ ಯಶಸ್ಸು ದೊರೆಯುವ ವಿಶ್ವಾಸವಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

 ಫ್ಲ್ಯಾಟ್‌ಗಳನ್ನು ಕೇಳುವವರಿಲ್ಲ ಯಾಕೆ?

ಫ್ಲ್ಯಾಟ್‌ಗಳನ್ನು ಕೇಳುವವರಿಲ್ಲ ಯಾಕೆ?

ಕೊಮ್ಮಘಟ್ಟದಲ್ಲಿರುವ 570 ಫ್ಲ್ಯಾಟ್‌ಗಳು, ಕಣಿಮಿಣಿಕೆಯಲ್ಲಿರುವ 270 ಫ್ಲ್ಯಾಟ್‌ಗಳನ್ನು ಕೇಳುವವರಿಲ್ಲದೆ ಹಾಗೆಯೇ ಉಳಿಸಿದೆ. ಹೇಗಾದರೂ ಮಾಡಿ ಈ ಫ್ಲ್ಯಾಟ್ ಗಳನ್ನು ಮಾರಾಟ ಮಾಡಬೇಕು ಎಂದು ಹಸರಸಾಹಸಪಟ್ಟರು. ಅದಕ್ಕೆ ಶೇ.10 ರಿಯಾಯಿತಿಯನ್ನೂ ಘೋಷಿಸಿದರು. ಆದರೆ ಫ್ಲ್ಯಾಟ್ ವಿಸ್ತೀರ್ಣ ಚಿಕ್ಕದಾಗಿರುವ ಕಾರಣ ಯಾರೂ ಕೊಂಡುಕೊಳ್ಳಲು ಸಿದ್ಧವಿಲ್ಲ.

ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ

ಒಂದು ಹಾಗೂ ನಾಲ್ಕು ಬಿಎಚ್‌ಕೆ ವಿಲ್ಲಾಗಳು

ಒಂದು ಹಾಗೂ ನಾಲ್ಕು ಬಿಎಚ್‌ಕೆ ವಿಲ್ಲಾಗಳು

ದಾಸನಪುರ ಹೋಬಳಿಯ ಉಣ್ಣಿಗೆರೆ ್ರಾಮದಲ್ಲಿ ಸುಮಾರು 35 ಎಕರೆ ಪ್ರದೇಶದಲ್ಲಿ 4 ಬಿಎಚ್‌ಕೆ ವಿಲ್ಲಾ ನಿರ್ಮಿಸಲಾಗುತ್ತಿದೆ. ಇನ್ನೆರೆಡು ವಾರಗಳಲ್ಲಿ ಗಿದ್ದಲಿ ಪೂಜೆ ನೆರವೇರಲಿದೆ. ನಿದಿಯಂತೆ 4 ಬಿಎಚ್‌ಕೆಯ 320 ಫ್ಲ್ಯಾಟ್‌ಗಳು ಮತ್ತು ಒಂದು ಬಿಎಚ್‌ಕೆಯ 320 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. 2000ಕ್ಕೂ ಹೆಚ್ಚು ಚದರಡಿ ಬಿಲ್ಡಪ್ ಪ್ರದೇಶ 1700ಕ್ಕೂ ಹೆಚ್ಚು ಅಡಿ ಕಾರ್ಪೆಟ್ ಪ್ರದೇಶ ನಿರ್ಮಿಸಲಾಗುತ್ತದೆ.

16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ 16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

ದಾಸನಪುರ ಫ್ಲ್ಯಾಟ್‌ಗಳಿಗೆ ಇನ್ನೂ ದರ ನಿಗದಿಯಾಗಿಲ್ಲ

ದಾಸನಪುರ ಫ್ಲ್ಯಾಟ್‌ಗಳಿಗೆ ಇನ್ನೂ ದರ ನಿಗದಿಯಾಗಿಲ್ಲ

ಉಣ್ಣಿಗೆರೆಯಲ್ಲಿ ನಿರ್ಮಿಸಲು ಹೊರಟಿರುವ ವಿಲ್ಲಾಗಳಿಗೆ ಬೆಲೆ ನಿಗದಿಯಾಗಿಲ್ಲ, ಅಲ್ಲದೆ ರೇರಾ ನೋಂದಣಿ ಪ್ರಕ್ರಿಯೆ ಮುಗಿಯಲು ಇನ್ನೂ ಮೂರು ತಿಂಗಳು ಬೇಕಾಗಿದೆ. ಬಳಿಕ ಅರ್ಜಿ ಆಹ್ವಾನಿಸಲಾಗುತ್ತದೆ. ವಿಲ್ಲಾಗಳಿಗೆ ಬೆಲೆ ನಿಗದಿ ಇತ್ಯಾದಿ ಪ್ರಕ್ರಿಯೆ ಕುರಿತು ಚಚೆಧ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಅಪಾರ್ಟ್‌ಮೆಂಟ್‌ಗೆ ಸಂಪರ್ಕ ರಸ್ತೆ ನಿರ್ಮಾಣ

ಅಪಾರ್ಟ್‌ಮೆಂಟ್‌ಗೆ ಸಂಪರ್ಕ ರಸ್ತೆ ನಿರ್ಮಾಣ

ಮೆಜೆಸ್ಟಿಕ್ ನಿಂದ ದಾಸನಪುರ ಹೋಬಳಿಯ ಉಣ್ಣಿಗೆರೆ ಗ್ರಾಮಕ್ಕೆ ಸುಮಾರು 23 ಕಿ.ಮೀ ಇದ್ದು ಉತ್ತಮ ರಸ್ತೆ ವ್ಯವಸ್ಥೆ ಇದೆಎ. ಮಾಗಡಿ ರಸ್ತೆಯಿಂದ ಇಲ್ಲಿಗೆ ಸಂಪರ್ಕ ಪಡೆಯಬಹುದಾಗಿದೆ. ಸುಮಾರು 6 ಕಿ.ಮೀ ಹಾಗೂ ತುಮಕೂರು ರಾಷ್ಟ್ರೀಯ ಹೆದ್ದಾರಿಗೆ ಕೇವಲ 5.5 ಕಿ.ಮೀ ಕ್ರಮಿಸಬಹುದಾಗಿದೆ.

English summary
Hundreds of application received for proposed 4 BHK villas project in Dadanapur by Bangalore Development Authority. Other side BDA trying hard to sale flats after completion of many project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X