Darshan: ಅಂದು 'ಬಾಸ್-8055' ನಂಬರ್ ಇಂದು ಈ ಸಂಖ್ಯೆಗೆ ಬೇಡಿಕೆ
ಬೆಂಗಳೂರು, ಜೂನ್ 25: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಜೈಲಲ್ಲಿ ನೀಡಲಾಗಿರುವ ಖೈದಿ ನಂಬರ್ 6106 ಅನ್ನು ತನ್ನ ಲಕ್ಕಿ ನಂಬರ್ ಎಂದು, ಅದನ್ನು ತನ್ನ ಗಾಡಿಯ ಮೇಲೆ ಹಾಕಿಸಿಕೊಳ್ಳುವುದಾಗಿ ಅಭಿಮಾನಿಯೊಬ್ಬ ಹೇಳಿಕೊಂಡಿದ್ದಾನೆ. ಈ ಮೊದಲು ಬಾಸ್- 8055 (BOSS) ನಂಬರ್‌ಗೆ ಭಾರೀ ಬೇಡಿಕೆ ಇತ್ತು.
ಹೌದು, ನಟ ದರ್ಶನ್ ಅಭಿಮಾನಿಗಳ ಪಾಲಿಗೆ ಡಿ.ಬಾಸ್ ಅಂತಲೇ ಹೆಸರು ಮಾಡಿದ್ದರು. ಈ ಹಿಂದೆ ಈ BOSS ನಂಬರ್ ಅನ್ನು ಗಾಡಿಗಳ ನಂಬರ್ ಪ್ಲೇಟ್ ಆಗಿ, ಫ್ಯಾನ್ಸಿ ನಂಬರ್ ಆಗಿ ಅನೇಕರು ನೋಂದಣಿ ಮಾಡಿಸಿಕೊಂಡಿದ್ದರು. ಇಂತಹ ಫ್ಯಾನ್ಸಿ ನಂಬರ್‌ಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ಹೆಚ್ಚು ಬೇಡಿಕೆ ಇದೆ.

ಬಾಸ್‌ಗಾಗಿ ಫ್ಯಾನ್ಸ್ ವಾರ್
ಇದನ್ನು ಕೆಲವು ಸ್ಟಾರ್ ನಟರು ಸಹ ತಮ್ಮ ಇಷ್ಟದ ವಾಹನಗಳ ಮೇಲೆ ಹಾಕಿಸಿಕೊಂಡು ಉದಾಹರಣೆಗಳು ಸಾಕಷ್ಟಿವೆ. ಈ ಬಾಸ್ ವಿಚಾರವಾಗಿ ದರ್ಶನ್ ಅಭಿಮಾನಿಗಳು ಈ ಹಿಂದೆ ಇತರ ಸ್ಟಾರ್ ನಟರನ್ನು ಅಪಮಾನಿಸಿದ್ದನ್ನು ನೋಡಬಹುದು. ಒಂದು ರೀತಿಯಲ್ಲಿ ಫ್ಯಾನ್ಸ್ ವಾರ್ ಎಂಬಂತೆ ಬಿಂಬಿಸಲಾಗಿತ್ತು.
ಬಾಸ್ ಎನ್ನುವವರು ಒಬ್ಬರೆ ಇರಬೇಕು, ಅದು ತಮ್ಮ ಬಾಸ್ ಆಗಿರಬೇಕು ಎಂದು ಆಯಾ ನಟರ ಅಭಿಮಾನಿಗಳ ಆಸೆಯಾಗಿರುತ್ತದೆ. ಅದೇ ರೀತಿ ಈ ಹಿಂದೆ ಈ ಡಿ.ಬಾಸ್, ಬಾಸ್ ವಿಚಾರವಾಗಿ ಫ್ಯಾನ್ ವಾರ ಅನ್ನು ಕನ್ನಡ ಚಿತ್ರರಂಗ ಕಂಡಿತ್ತು.

ಆವತ್ತು ಬಾಸ್ 8055 (BOSS) ನಂಬರ್‌ಗೆ ಬೇಡಿಕೆ ಇತ್ತು. ಇವತ್ತು ದರ್ಶನ್ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿದರು ಸಹ ಜೈಲಲ್ಲಿ ದರ್ಶನ್‌ಗೆ ನೀಡಿದ ಖೈದಿ ನಂಬರ್‌ಗೂ ಹೆಚ್ಚು ಬೇಡಿಕೆ ಸೃಷ್ಟಿಯಾಗುತ್ತಿದೆ.
ಸಾರ್ವಜನಿಕ ಜೀವನದಲ್ಲಿದ್ದ ನಟ ದರ್ಶನ್ ಈ ಪ್ರಕರಣದಲ್ಲಿ ನಡೆದುಕೊಂಡಿರುವ ರೀತಿ, ಅವರ ಮೇಲೆ ಬಂದ ಆರೋಪದ ಹೊರತಾಗಿಯು ದರ್ಶನ್ ಪರ ಅಭಿಮಾನಿಗಳು ಜೈಕಾರ ಹಾಕಿದ್ದರು. ಈ ಅಭಿಮಾನ ಅಂಧಾಭಿಮಾನ ಎಂದೆಲ್ಲ ಸಾಕಷ್ಟು ಚರ್ಚೆಗಳಾದವು. ಟ್ರೋಲ್ ಸಹ ಆಯಿತು.
6106 ಸಂಖ್ಯೆ ನೋಂದಣಿ ಮಾಡಿಸಲು ಸಜ್ಜು
ಇದರ ಬೆನ್ನಲ್ಲೆ ಮೈಸೂರಿನ ದನುಷ್ ಎಂಬುವವರು ಜೈಲಲ್ಲಿರುವ ನಟ ದರ್ಶನ್ ಗೆ ನೀಡಲಾಗಿರುವ ಈ 6106 ಸಂಖ್ಯೆಯನ್ನು ತನ್ನ ಗಾಡಿಯ ಫ್ಯಾನ್ಸಿ ನಂಬರ್ ಆಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಶೀಘ್ರವೇ ಈ ಸಂಖ್ಯೆಯನ್ನು ಆರ್‌ಟಿಓ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಸದ್ಯ ತಮ್ಮ ನಟನ ಜೈಲುವಾಸ ನೆನೆದ ಈ ಅಭಿಮಾನಿ ಕಣ್ಣೀರು ಹಾಕಿದ್ದಾನೆ. ನಮ್ಮ ಬಾಸ್ ಆದಷ್ಟು ಶೀಘ್ರವೇ ಬಿಡುಗಡೆಯಾದರೆ ನಾಡ ಅಧಿದೇವತೆ ಚಾಮುಂಡೇಶ್ವರಿ 101 ತೆಂಗಿನಕಾಯಿ ಒಡೆಯುತ್ತೇನೆ ಎಂದು ಹರಕೆ ಹೊತ್ತಿರುವುದಾಗಿ ದನುಷ್ ತಿಳಿಸಿದ್ದಾನೆ.
ನಮ್ಮ ಸ್ಟಾರ್ ನಟ ದರ್ಶನ್ ಅವರು ಯಾವುದೇ ತಪ್ಪೇ ಮಾಡಿಲ್ಲ. ಅವರನ್ನು ನಾವು ಎಂದಿಗೂ ಬಿಟ್ಟು ಕೊಡುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಅವರು ತಪ್ಪು ಮಾಡಿಲ್ಲ ಎಂದಾದರೆ ಕಾನೂನು ಪ್ರಕ್ರಿಯೆ ಮುಗಿಸಿ ಹೊರ ಬರಲಿದ್ದಾರೆ ಎಂದು ಆತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಆತ ತನ್ನ ವಾಹನಕ್ಕೆ ದರ್ಶನ್ ಖೈದಿ ನಂಬರ್ ಹಾಕಿಸಿಕೊಳ್ಳುವುದಾಗಿ ತಿಳಿಸಿದ್ದಾನೆ ಎಂದು ಅವರಿ ಆಗಿದೆ.












Click it and Unblock the Notifications