ಕಿತ್ತುಹೋದ ರಸ್ತೆಗುಂಡಿಗೆ ಪೂಜೆ, ಬಿಬಿಎಂಪಿಗೆ 'ಮಂಗಳಾರತಿ'
ಬೆಂಗಳೂರು, ಜುಲೈ, 09: ಕಿತ್ತು ಹೋಗಿರುವ ರಸ್ತೆ ಗುಂಡಿಗಳಿಗೆ ಎಚ್ ಎಸ್ ಆರ್ ಲೇಔಟ್ ನಿವಾಸಿಗಳು ಪೂಜೆ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳೆ ಎಲ್ಲಿದ್ದೀರಿ?.. ಬನ್ನಿ ಸಾರ್ ಬನ್ನಿ, ಬಂದು ತೀರ್ಥ-ಪ್ರಸಾದ ಸ್ವೀಕರಿಸಿ...
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೇನು ಬರವೇ? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಸ್ತೆ ದುರಸ್ತಿ ಮಾಡಿದೆ ಇನ್ನಾದರೂ ಆರಾಮವಾಗಿ ಓಡಾಡಬಹುದು ಎಂದು ಅಂದುಕೊಂಡಿದ್ದರೆ ಮರುದಿನ ಅದೇ ಜಾಗವನ್ನು ಜಲಮಂಡಳಿ ಅಗೆದು ಹಾಕಿರುತ್ತದೆ. ಈ ಬಗ್ಗೆ ಎಷ್ಟು ಹೇಳಿದರೂ ಅಷ್ಟೇ ಬಿಡಿ..[ರಸ್ತೆ ನಿಯಮ ಉಲ್ಲಂಘಿಸಿದವನ ಫೋಟೋ ತೆಗೆದಿದ್ದು ತಪ್ಪಾ?]

ರಸ್ತೆಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ, ಬೀದಿಗಿಳಿದು ಹೋರಾಟ ಮಾಡಿ ಮನವಿ ಸಲ್ಲಿಕೆ ಮಾಡಿದ್ದನ್ನು ನೋಡಿದ್ದೇವೆ. ಆದರೆ ಇದೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಎಚ್ ಎಸ್ ಆರ್ ಲೇಔಟ್ ನಾಗರಿಕರು ರಸ್ತೆ ಗುಂಡಿಗೆ ಪೂಜೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.[ಹೊಂಡ ಬಿದ್ದ ರಸ್ತೆ, ಕಟ್ಟಿದ ಚರಂಡಿ, ಕೊಳೆತ ಕಸ, ಅಯ್ಯಪ್ಪಾ..!]

ರಸ್ತೆ ಗುಂಡಿಯ ಸುತ್ತ ಕಲಶ ಇಟ್ಟು, ರಂಗೋಲಿ ಹಾಕಿ ಪೂಜೆ ಮಾಡಿ ಪ್ರಸಾದವನ್ನು ನೀಡಿದ್ದಾರೆ. #PotholePooje ಎಂಬ ಹಾಶ್ ಟ್ಯಾಗ್ ನ್ನು ಟ್ವಿಟ್ಟರ್ ನಲ್ಲಿ ಕ್ರಿಯೆಟ್ ಮಾಡಿದ್ದಾರೆ.[ಮಳೆ ಬಂದರೆ ಮಹಾನಗರ..!]

ಪೂಜೆ ಹೇಗೆ ನಡೆಯಿತು?
ಬಿದ್ದ ಮಳೆಗೆ ನೀರು ತುಂಬಿಕೊಂಡ ರಸ್ತೆ ಗುಂಡಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ನಂತರ ರಂಗೋಲಿ ಬಳಿದು, ತೆಂಗಿನ ಕಾಯಿ ಒಡೆಯಲಾಯಿತು. ಸರಿಯಾದ 'ಮಂಗಳಾರತಿ'ಯನ್ನು ಮಾಡಲಾಯಿತು.













Click it and Unblock the Notifications