ರೆಸಿಗ್ನೇಶನ್‌ ಕೊಟ್ರೂ HR ಡೋಂಟ್ ಕೇರ್: ಹೊಸ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ನೌಕರ, ಕಾರ್ಪೊರೇಟ್ ಸಂಕಟ ಬಿಚ್ಚಿಟ್ಟ ಪೋಸ್ಟ್

ಇತ್ತೀಚಿನ ದಿನಗಳಲ್ಲಿ ಅದ್ರಲ್ಲೂ ಕಾರ್ಪೊರೇಟ್‌ ಕಂಪನಿಗಳಲ್ಲಿ ಉದ್ಯೋಗಿಗಳು ಒಂದು ಕಂಪೆನಿಯಿಂದ ಇನ್ನೊಂದು ಕಂಪನಿಗೆ ಬದಲಾಯಿಸಿಕೊಂಡು ಹೋಗುವದು ಒಂದು ಸಾಮಾನ್ಯ ಪ್ರಕ್ರಿಯೆ ಎನ್ನುವಂತಾಗಿದೆ. ಹಾಗೆಯೇ ಇಲ್ಲೊಬ್ಬ ಉದ್ಯೋಗಿ ಬೇರೆ ಕಂಪನಿಯೊಂದರಲ್ಲಿ ಹೊಸ ಕೆಲಸ ಸಿಕ್ಕ ಖುಷಿಯಲ್ಲಿ ತಾವಿದ್ದ ಕಂಪನಿಗೆ ರೆಸಿಗ್ನೇಶನ್‌ ಲೆಟರ್‌ ಅಂದರೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.

ಆದರೆ ತಾವು ಸಲ್ಲಿಸಿದ್ದ ರೆಸಿಗ್ನೇಶನ್‌ ಅನ್ನಾ ಕಂಪನಿಯ ಮಾನವ ಸಂಪನ್ಮೂಲ ಅಂದರೆ ಹೆಚ್‌ಆರ್‌ ವಿಭಾಗ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಉದ್ಯೋಗಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಎಚ್‌ಆರ್ ವಿಭಾಗವು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದರಿಂದ, ತಮಗೆ ಸಿಕ್ಕಿರುವ ಹೊಸ ಕೆಲಸ ಕೈತಪ್ಪಿ ಹೋಗುತ್ತದೆ ಎಂದು ಭಯ ಆಗುತ್ತಿದೆ ಎಂದು ರೆಡ್ಡಿಟ್ ಬಳಕೆದಾರರೊಬ್ಬರು ತಮ್ಮ ನೋವನ್ನಾ ಹಂಚಿಕೊಂಡಿದ್ದಾರೆ.

HR Ignores Employee

ಬೇರೆ ಕಂಪನೆಯಲ್ಲಿ ಒಂದು ಒಳ್ಳೆಯ ಕೆಲಸ ಸಿಕ್ಕ ಕಾರಣ ಈ ಉದ್ಯೋಗಿ ಜುಲೈ 10ರಂದು ತಾವಿದ್ದ ಪ್ರಸ್ತುತ ಕಂಪನಿಗೆ ರಾಜೀನಾಮೆ ಸಲ್ಲಿಸಿದ್ದರು. ನೇಮಕಾತಿ ಒಪ್ಪಂದದ ಅಂದರೆ ಅಪಾಂಯಿಟ್‌ಮೆಂಟ್‌ ಲೆಟರ್‌ ಪ್ರಕಾರ, ಉದ್ಯೋಗ ಬಿಡುವ ಮುನ್ನ 30 ದಿನಗಳ ನೋಟಿಸ್ ಪಿರಿಯಡ್‌ ಮಾಡಬೇಕಾಗುತ್ತದೆ. ಅದರಂತೆಯೇ ಅವರು ಲಿಖಿತ ರೂಪದಲ್ಲಿ ರಾಜೀನಾಮೆ ನೀಡಿದ್ದಾರೆ. ಆದರೂ, ಎಚ್‌ಆರ್ ನಿರ್ಲಕ್ಷ್ಯ ಎಷ್ಟರಮಟ್ಟಿಗಿದೆ ಎಂದರೆ, ಕನಿಷ್ಠ ರಾಜೀನಾಮೆ ಸ್ವೀಕರಿಸಿರುವ ಬಗ್ಗೆ ಒಂದು ಸಣ್ಣ ಸ್ವೀಕೃತಿ (Acknowledgement) ಮೆಸೇಜ್‌ ಸಹ ಕಳಿಸಿಲ್ಲ.

"ನಾನ್ನ ಕರೆಗೆ ಹಾಗೂ ವಾಟ್ಸಾಪ್ ಸಂದೇಶಗಳಿಗೆ ಎಚ್‌ಆರ್ ವಿಭಾಗ ಯಾವುದೇ ಉತ್ತರ ನೀಡುತ್ತಿಲ್ಲ. ನಾನು ಪ್ರತಿದಿನ ಕೆಲಸ ಮಾಡುತ್ತಿದ್ದೇನೆ, ನನ್ನ ಕೆಲಸದ ಜವಾಬ್ದಾರಿಯನ್ನ ಇನ್ನೂ ಹಸ್ತಾಂತರಿಸಲು ಹಾಗೂ ಸಂಪೂರ್ಣ ನೋಟಿಸ್ ಪಿರಿಯಡ್‌ ಪೂರ್ಣಗೊಳಿಸಲು ರೆಡಿ ಇದ್ದೇನೆ. ಆದರೆ, ನನ್ನ ಕೆಲಸದ ಕೊನೆಯ ದಿನ ಯಾವುದು ಎಂಬುದರ ಬಗ್ಗೆ ಕಂಪನಿಯಿಂದ ಯಾವುದೇ ಸ್ಪಷ್ಟನೆ ಅಥವಾ ಮಾಹಿತಿ ಲಭ್ಯವಾಗಿಲ್ಲ," ಎಂದು ಅವರು ಬರೆದುಕೊಂಡಿದ್ದಾರೆ.

ಹೊಸ ಉದ್ಯೋಗ ಕಳೆದುಕೊಳ್ಳುವ ಭೀತಿ

ಪ್ರಸ್ತುತ ಕಂಪನಿಯಿಂದಾಗಿ ಉದ್ಯೋಗಿ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಏಕೆಂದರೆ, ಅವರು ಸೇರಿಕೊಳ್ಳುತ್ತಿರುವ ಹೊಸ ಕೆಲಸಕ್ಕೆ ಸೇರುವ ಮುನ್ನ ಹಿಂದಿನ ಕಂಪನಿಯ 'ರಿಲೀವಿಂಗ್ ಲೆಟರ್' ಕಡ್ಡಾಯವಾಗಿ ಸಲ್ಲಿಸುವಂತೆ ಕಂಪನಿಯವರು ಸೂಚಿಸಿದ್ದಾರೆ. ಒಂದು ವೇಳೆ ಈಗಿರುವ ಕಂಪನಿ ರಿಲೀವಿಂಗ್ ಲೆಟರ್ ನೀಡಲು ತಡಮಾಡಿದರೆ, ಹೊಸ ಉದ್ಯೋಗ ಕೈತಪ್ಪುವ ಸಾಧ್ಯತೆಯಿದೆ ಎಂಬುದು ಅವರ ಆತಂಕ.

"ನಾನು ನನ್ನ ಕಡೆಯಿಂದ ಎಲ್ಲವನ್ನೂ ಲಿಖಿತ ರೂಪದಲ್ಲಿ ದಾಖಲಿಸುತ್ತಿದ್ದೇನೆ ಮತ್ತು ಸ್ಪಷ್ಟನೆ ಕೋರಿ ಫಾಲೋ-ಅಪ್ ಇಮೇಲ್‌ಗಳನ್ನ ಸಹ ಕಳಿಸುತ್ತಿದ್ದೇನೆ. ಆದರೆ ಆ ಕಡೆಯಿಂದ ಯಾವುದೇ ಉತ್ತರ ಬರುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಹೊಸ ಕಂಪನಿ ನಾನು ಕಳುಹಿಸಿರುವ ಇಮೇಲ್‌ಗಳನ್ನ ಆಧಾರವಾಗಿ ಪರಿಗಣಿಸುತ್ತದೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.

HR Ignores Employee

ವೈರಲ್ ಆದ ರೆಡ್ಡಿಟ್ ಪೋಸ್ಟ್

ಉದ್ಯೋಗಿಯ ಈ ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ನೂರಾರು ಮಂದಿ ಕಾಮೆಂಟ್ ಮಾಡುವ ಮೂಲಕ ತಮ್ಮ ಬೆಂಬಲ ಹಾಗೂ ಕಾನೂನಾತ್ಮಕ ಸಲಹೆಗಳನ್ನ ಸಹ ನೀಡುತ್ತಿದ್ದಾರೆ. "ನಿಮ್ಮ ರೆಸಿಗ್ನೇಶನ್‌ ಲೆಟರ್‌ನ ಇಮೇಲ್ ಅನ್ನು ಎಚ್‌ಆರ್, ಮ್ಯಾನೇಜರ್ ಮತ್ತು ಕಂಪನಿಯ ಸಾಮಾನ್ಯ ಇಮೇಲ್ ಐಡಿಗೆ ಕಳುಹಿಸಿ. ಒಪ್ಪಂದದ ಪ್ರಕಾರ ನಿಮ್ಮ ಕೊನೆಯ ಕೆಲಸದ ದಿನವನ್ನ ಸ್ಪಷ್ಟವಾಗಿ ಉಲ್ಲೇಖಿಸಿ. ಜೊತೆಗೆ ನಿಮ್ಮ ವೈಯಕ್ತಿಕ ಇಮೇಲ್‌ಗೂ ಒಂದು ಪ್ರತಿ ಕಳುಹಿಸಿಕೊಳ್ಳಿ . ನೀವು ಹೊಸ ಕಂಪನಿಗೆ ಸೇರುವಾಗ ಈ ಎಲ್ಲ ದಾಖಲೆಗಳನ್ನ ತೋರಿಸಿ. ಇತ್ತೀಚೆಗೆ ಕೆಲಸ ಬಿಡುವ ಪ್ರಕ್ರಿಯೆ ಬಹಳ ಕಷ್ಟಕರವಾಗುತ್ತಿದೆ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ, "ಭಾರತದ ಕೆಲವು ಕಂಪನಿಗಳಲ್ಲಿ ಇಂತಹ ಅಭ್ಯಾಸಗಳು ಸಾಮಾನ್ಯವಾಗಿದೆ. ಹೊಸ ಉದ್ಯೋಗದಾತರಿಗೆ ಈ ಪರಿಸ್ಥಿತಿಯನ್ನು ಮೊದಲೇ ವಿವರಿಸಿ ಪಾರದರ್ಶಕವಾಗಿರುವುದು ಒಳ್ಳೇದು," ಎಂದು ಕಿವಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+