• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಫ್‌ಐಆರ್ ಕೇಂದ್ರದಲ್ಲಿ ದೂರು ನೀಡುವುದು ಹೇಗೆ?

|

ಬೆಂಗಳೂರು, ನ.18 : ಬೆಂಗಳೂರಿನಲ್ಲಿ ಪೊಲೀಸರಿಗೆ ಸುಲಭವಾಗಿ ದೂರು ನೀಡಲು ಸಹಾಯಕವಾಗುವ ಬ್ಯಾಂಕ್‌ ಎಟಿಎಂ ಮಾದರಿಯ ಮೊದಲ 'ಎಫ್ಐಆರ್‌ ನೊಂದಣಿ ಕೇಂದ್ರ'ವನ್ನು ಆರಂಭಿಸಲಾಗಿದೆ. ಮಂತ್ರಿಮಾಲ್‌ನಲ್ಲಿ ಬೆಂಗಳೂರು ನಗರ ಪೊಲೀಸರು ಹಾಗೂ ಸಿಸ್ಕೊ ಸಂಸ್ಥೆ ಸಹಯೋಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.

ಎಟಿಎಂ ಮಾದರಿಯ ಎಫ್‌ಐಆರ್ ನೊಂದಣಿ ಕೇಂದ್ರ ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಮೂರು ತಿಂಗಳು ಪ್ರಾಯೋಗಿಕವಾಗಿ ಇದು ಕಾರ್ಯನಿರ್ವಹಿಸಲಿದೆ. ನಂತರ ಜನರ ಪ್ರತಿಕ್ರಿಯೆ ನೋಡಿಕೊಂಡು, ಕೇಂದ್ರವನ್ನು ಬೇರೆ ಸ್ಥಳಗಳಲ್ಲಿ ಸ್ಥಾಪಿಸುವ ಬಗ್ಗೆ ನಗರ ಪೊಲೀಸರು ತೀರ್ಮಾನ ಕೈಗೊಳ್ಳಲಿದ್ದಾರೆ.

ಮೂರು ಭಾಷೆಗಳಲ್ಲಿ ಲಭ್ಯ : ಎಫ್‌ಐಆರ್ ನೊಂದಣಿ ಕೇಂದ್ರದಲ್ಲಿ ದೂರುದಾರರಿಗೆ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ದೂರು ಸಲ್ಲಿಸಲು ಇಂತಿಷ್ಟು ಸಮಯ ನಿಗದಿಪಡಿಸಲಾಗುವುದು. ಅಷ್ಟರಲ್ಲಿ ಅವರು ಹೇಳಬೇಕಿರುವ ವಿಷಯವನ್ನು ಸಂಕ್ಷಿಪ್ತವಾಗಿ ದೂರಿನ ರೂಪದಲ್ಲಿ ದಾಖಲಿಸಬೇಕು. [ಅಂತರ್ಜಾಲ ಬಳಸಿರಿ, ಪೊಲೀಸರಿಗೆ ದೂರು ನೀಡಿರಿ]

ನಿಮ್ಮ ದೂರು ರೆಕಾರ್ಡ್ ಆಗುತ್ತದೆ : ನೊಂದಣಿ ಕೇಂದ್ರದಲ್ಲಿ ಸಿಸಿಟಿವಿ ಹಾಗೂ ಧ್ವನಿಮುದ್ರಿಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿನಿಂತು ನೀವು ನೀಡುವ ದೂರು ರೆಕಾರ್ಡ್‌ ಆಗಲಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ದೂರುದಾರರ ಸಂದೇಶ ತಕ್ಷಣ ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರದಲ್ಲಿರುವ ಪೊಲೀಸ್‌ ನಿಯಂತ್ರಣ ಕೊಠಡಿಗೆ ತಲುಪಲಿದೆ.

ಎಫ್‌ಐಆರ್ ಪ್ರತಿ ದೊರೆಯಲಿದೆ : ನಿರ್ವಹಣಾ ಕೇಂದ್ರದಲ್ಲಿರುವ ಸಬ್‌ ಇನ್ಸ್‌ಪೆಕ್ಟರ್‌ ಮಟ್ಟದ ಅಧಿಕಾರಿ, ದೂರು ಸ್ವೀಕರಿಸಿ ಅದಕ್ಕೆ ಸಂಬಂಧಿಸಿದ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತಕ್ಷಣ ಎಫ್ಐಆರ್‌ ಪ್ರತಿ ನೀಡಲಿದ್ದಾರೆ. ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಿಸಲಿದೆ.

ಸದ್ಯ ಮಂತ್ರಿಮಾಲ್‌ನಲ್ಲಿ ಸ್ಥಾಪಿಸಿರುವ ಎಫ್ಐಆರ್‌ ಕೇಂದ್ರದಲ್ಲಿ ದಾಖಲಾಗುವ ಪ್ರಕರಣಗಳನ್ನು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ. ನಂತರ ಪ್ರಕರಣಗಳಿಗೆ ನ್ಯಾಯಾಲಯದ ಅನುಮತಿ ಪಡೆದು ಅಪರಾಧ ಕೃತ್ಯ ಸ್ಥಳದ ವ್ಯಾಪ್ತಿಗೆ ಬರುವ ಠಾಣೆಗೆ ವರ್ಗಾವಣೆ ಮಾಡಲಾಗುತ್ತದೆ.

ಅಪರಾಧ ಕಂಎವರು ದೂರು ನೀಡಬಹುದು : ದೌರ್ಜನ್ಯಕ್ಕೆ ಒಳಗಾದವರ ಜೊತೆ ಅಪರಾಧ ಪ್ರಕರಣಗಳನ್ನು ಕಣ್ಣಾರೆ ಕಂಡವರು ದೂರು ನೀಡಬಹುದು. ಅಂಥವರ ಹೆಸರು ಮತ್ತಿತರ ವಿವರ ಗೌಪ್ಯವಾಗಿಡಲಾಗುತ್ತದೆ. ಸಿಸಿಟಿವಿ ಇರುವುದರಿಂದ ದೂರುದಾರರ ಮುಖಚಹರೆಯೂ ರೆಕಾರ್ಡ್‌ ಆಗಲಿದ್ದು, ತಪ್ಪು ದೂರು ನೀಡಿದರೆ ತಿಳಿದುಬರಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Country’s first Remote Expert Government Services (REGS) to help citizens easily lodge complaints against crimes using remote FIR registration kiosks. First kiosk set up at Mantri Square Malleswaram, Bengaluru. How to file complaint in kiosks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more