ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೃಹ ನಿರ್ಮಾಣ ಸಂಘಕ್ಕೆ ನೇರ ಭೂ ಖರೀದಿ ಅವಕಾಶ

By Kiran B Hegde
|
Google Oneindia Kannada News

ಬೆಂಗಳೂರು, ಜ. 2: ಖಾಸಗಿ ಗೃಹ ನಿರ್ಮಾಣ ಸಂಘಗಳು ಈಗ ಡೆವಲಪರ್ ಮೂಲಕವೇ ಭೂಮಿ ಖರೀದಿಸಬೇಗಾಗಿದೆ. ಆದ್ದರಿಂದ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತರಲಾಗುವುದು. ಸಂಘಗಳೇ ನೇರವಾಗಿ ಭೂಮಿ ಖರೀದಿಸಲು ಅವಕಾಶ ನೀಡಲಾಗುವುದು ಎಂದು ಸಹಕಾರಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಮೂಲಕ ಸಂಘಗಳು ಒಂದೇ ವರ್ಷದಲ್ಲಿ ಮನೆ ಸೌಲಭ್ಯ ಕಲ್ಪಿಸಲು ಅನುಕೂಲ ಕಲ್ಪಿಸಲಾಗುವುದೆಂದು ತಿಳಿಸಿದರು.

mahadav

ಗೃಹ ನಿರ್ಮಾಣ ಸಂಘಗಳು ತಮ್ಮ ಸದಸ್ಯರಿಗೆ ಸೌಲಭ್ಯ ಒದಗಿಸಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ. ಇದಕ್ಕೆ ಕ್ಲಿಷ್ಟಕರ ನಿಯಮವೂ ಕಾರಣ. ಆದ್ದರಿಂದ ನಿಯಮಗಳನ್ನು ಸರಳಗೊಳಿಸಲು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು. [ಡಿಕೆಶಿ ಹಗರಣ ಬಿಚ್ಚಿಟ್ಟ ಹಿರೇಮಠ]

ಏಕ ಗವಾಕ್ಷಿ ಕೇಂದ್ರ : ಬಡಾವಣೆ ನಿರ್ಮಿಸಲು ಸುಮಾರು 10 ಏಜೆನ್ಸಿಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿದೆ. ಇದರಿಂದ ಉಂಟಾಗುವ ವಿಳಂಬ ತಪ್ಪಿಸಲು ಏಕಗವಾಕ್ಷಿ ಕೇಂದ್ರ ತೆರೆಯಲಾಗುವುದು ಎಂದು ಸಚಿವರು ತಿಳಿಸಿದರು.

ಕಾಯಿದೆಗೆ ತಿದ್ದುಪಡಿ ತರುವ ಕರಡನ್ನು ಶೀಘ್ರ ಸಲ್ಲಿಸಲಾಗುವುದು. ಮುಂದಿನ ಜಂಟಿ ಅಧಿವೇಶನದಲ್ಲಿ ತಿದ್ದುಪಡಿ ಕಾಯಿದೆ ಮಂಡಿಸಲಾಗುತ್ತದೆ ಎಂದು ಮಹದೇವ ಪ್ರಸಾದ್ ತಿಳಿಸಿದರು.

English summary
The State government is planning to amend the Karnataka Land Revenue Act, which will allow them to purchase land directly from the land owners. The government was planning to create single-window agency for formation of sites by housing cooperative societies to avoid procedural delay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X