ಕಾಮಾಂಧ ಟೆಕ್ಕಿಯ ವಂಚಿಸಿದ್ದ ತ್ರಿಮೂರ್ತಿ ಸಿಕ್ಕಿಬಿದ್ದರು

Honeytrap - Bangalore techie beaten robbed at NICE road
ಬೆಂಗಳೂರು, ಜ.31: ಕಾಮಾಂಧ ಯುವಕರನ್ನು ವಂಚಿಸುತ್ತಿದ್ದ ತ್ರಿಮೂರ್ತಿಗಳನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆ ನಿವಾಸಿ ಅನ್ಸರ್ (29), ವೇಣುಗೋಪಾಲ (27) ಹಾಗೂ ದೊಡ್ಡಬಳ್ಳಾಪುರ ಕೋನಘಟ್ಟ ನಿವಾಸಿ ವಿಶ್ವಾಸ್ (20) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಮಾರುತಿ ಆಲ್ಟೋ ಕಾರು, 30ಕ್ಕೂ ಹೆಚ್ಚು ಮೊಬೈಲ್ ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಬೆಂಗಳೂರಿನ ನಾನಾ ಭಾಗಗಳಲ್ಲಿ ಯುವತಿಯರ ಆಸೆ ತೋರಿಸಿ ಅನೇಕ ಯುವಕರನ್ನು ವಂಚಿಸಿದ್ದಾರೆ. ಆದರೆ ಯಾರೂ ದೂರು ನೀಡಲು ಮುಂದೆಬರುತ್ತಿರಲಿಲ್ಲ. ಒಂದಿಬ್ಬರು ಮಾತ್ರ ದೂರು ನೀಡಿದ್ದರು. ದೂರು ನೀಡಿದ್ದ ಯುವಕನೊಬ್ಬ ಆರೋಪಿಗಳ ಬಗ್ಗೆ ನಿಖರ ಮಾಹಿತಿ ನೀಡಿದ್ದ. ಅದರನ್ವಯ ಹೊಂಚುಹಾಕಿ ಹೊಸೂರಿನಲ್ಲಿದ್ದ ಆರೋಪಿಗಳನ್ನು ಹಿಡಿಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಸಲಿಗೆ ಆರೋಪಿಗಳ ಜಾಲದಲ್ಲಿ ಹುಡುಗಿಯರೇ ಇರುತ್ತಿರಲಿಲ್ಲ. ಇಂಟರ್ನೆಟ್ ನಲ್ಲಿ ಚೆಂದ ಚೆಂದದ ಯುವತಿಯರ ಫೋಟೋ ಹಾಕಿ, ಮಿಕಗಳನ್ನು ಸೆಳೆಯುತ್ತಿದ್ದರು ಎಂದು ತಿಳಿದುಬಂದಿದೆ.

ಹಿಂದಿನ ಸುದ್ದಿ: ಬೆಂಗಳೂರಿನ ಟೆಕ್ಕಿಗಳೇ ಹುಷಾರು! ಅದರಲ್ಲೂ ಕಾಮದ ಬೆನ್ನೇರಿ ಮಾಯಾ ಜಿಂಕೆಗಾಗಿ ತಹತಹಿಸುವ ಯುವ ಸಾಫ್ಟ್ ವೇರ್ ಇಂಜಿನಿಯರುಗಳು ಈ ಬಗ್ಗೆ ತುಸು ಜಾಗ್ರತೆ ವಹಿಸುವುದು ಒಳಿತು.

ಏನಾಯಿತೆಂದರೆ ಟೆಕ್ಕಿರೊಬ್ಬರನ್ನು ರಾಜಧಾನಿಯಲ್ಲಿ ಇತ್ತೀಚೆಗೆ (ಜನವರಿ 18ರಂದು ವಾರಾಂತ್ಯಕ್ಕೆಂದು ) ಮೂವರು ದುಷ್ಕರ್ಮಿಗಳು ಹಿಡಿದು, ಹೊಡೆದೂ ಬಡಿದು ಆತನಲ್ಲಿದ್ದ ನಗನಾಣ್ಯ ದೋಚಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ದರೋಡೆ ಕೇಸು ಎನ್ನಬಹುದಾದರೂ ಪೊಲೀಸರ ಹೆಚ್ಚಿನ ವಿಚಾರಣೆಯ ನಂತರ ಪ್ರಕರಣವು ಬೇರೆಯದೇ ಆಯಾಮ ಪಡೆದಿದೆ. ಕಾಮಾಂಧ ಟೆಕ್ಕಿಯೊಬ್ಬ ಏನನ್ನೋ ಬಯಸಿ ಬೇಸ್ತುಬಿದ್ದ ಕತೆ ಅನಾವರಣಗೊಳ್ಳುತ್ತದೆ.

ಕಾಮವಾಂಛೆ ತಣಿಸಿಕೊಳ್ಳಲು ಆನ್ ಲೈನ್ ನಲ್ಲಿ ಜಾಲಾಡಿದ ಟೆಕ್ಕಿ ಕಾಮದ ಬೆನ್ನೇರಿ ಹೊರಟು, ಕೊನೆಗೆ 'ಜೀವ ಉಳಿಸಿಕೊಂಡು ವಾಪಸ್ಸಾಗಿದ್ದು ತನ್ನ ಸುದೈವ' ಎಂದು ಹಲುಬುವಂತಾಗಿದೆ. 'ಸುಂದರ ಮಾಡೆಲ್, ಗಗನಸಖಿಯರಿಂದ ಕಾಮಸೇವೆ ಲಭ್ಯ' ಎಂದು ಅಂತರ್ಜಾಲದಲ್ಲಿ ಅಷಡ್ಡಾಳದ ಆಸೆಗೆ ಗುರಿಯಾದ ಕತೆಯಿದು.

GENUINE BEAUTIFUL MODEL & AIR-HOSTESS- CUTE & SEXY REAL FUN (BTM = KR PURAM = RT NAGAR = JAYDEVA), CALL PAVAN = 08867242551 ಎಂಬುದು ಜಾಹಿರಾತಿನ ಸಾರಾಂಶವಾಗಿತ್ತು. ಜತೆಗೆ ಯುವತಿಯರ ಎರಡು ಮಾದಕ ಚಿತ್ರಗಳೂ ಕಣ್ಣಿಗೆ ಕುಕ್ಕುವಂತಿದ್ದವು. ಇದನ್ನು ಕಂಡು ಮಂಗನಾದ ಟೆಕ್ಕಿ ಸ್ವರ್ಗಕ್ಕೆ ಮೂರೇ ಗೇಣು ಎಂದು ಬೀಗಿದ.

ಟೆಕ್ಕಿಗೆ ಆದ ಅನುಭವವೇ ಬೇರೆ
ಜಾಹಿರಾತಿನ ಬೆನ್ನೇರಿ ಹೋದ ಯುವಕನಿಗೆ ಅದು honeytrap ಎಂಬುದು ಆರಿವೆ ಬಂದಿತ್ತು. ಏಕೆಂದರೆ ಸುಂದರ ಯುವತಿಯರ ಬದಲು ಮೂವರು ದಾಂಢಿಗರು Silk Board junction ಬಳಿ ಸ್ವಾಗತ ಕೋರಿದ್ದಾರೆ. ಟೆಕ್ಕಿಯ ಕುತ್ತಿಗೆ ಮೇಲೆ ಚಾಕು ಮಡಗಿ ಏನೇನಿದೆಯೋ ಎಲ್ಲಾ ತೆಗೀ ಎಂದು ಆತನನ್ನು NICE Roadಗೆ ಕಾರಿನಲ್ಲಿ ಕರೆದೊಯ್ದು ದೋಚಿದ್ದಾರೆ. ಅಷ್ಟೇ ಅಲ್ಲ ರಾತ್ರಿನ 8 ಗಂಟೆಯ ಕತ್ತಲಲ್ಲಿ ಟೆಕ್ಕಿಯನ್ನು ಹಿಡಿದು ಚೆನ್ನಾಗಿ ಚಚ್ಚಿದ್ದಾರೆ.

ಬದುಕಿದೆಯಾ ಬಡಜೀವವೇ ಎಂದು ಇದ್ದದ್ದನ್ನೆಲ್ಲಾ ಕೊಟ್ಟು ಬಂದ ಟೇಕಿ ಸ್ವಲ್ಪ ಧೈರ್ಯ ತಂದುಕೊಂಡು ಸೀದಾ HAL ಪೊಲೀಸ್ ಠಾಣೆಗೆ ಹೋಗಿ ತನಗೊದಗಿದ ಅವಸ್ಥೆಯನ್ನು ಹೇಳಿಕೊಂಡಿದ್ದಾನೆ. ಮರುಗಿದ ಪೊಲೀಸರು ದೂರು ದಾಖಲಿಸಿಕೊಂಡು ದುಷ್ಕರ್ಮಿಗಳನ್ನು ಹಿಡಿದುಕೊಡುವುದಾಗಿ ಭರವಸೆ ನೀಡಿದ್ದಾರೆ.

ಅಂದಹಾಗೆ ಹೀಗೆ ಬೇಸ್ತುಬಿದ್ದ ಟೆಕ್ಕಿ ರಾಜಸ್ಥಾನದವ. ಚಪಲ ಚೆನ್ನಿಗರಾಯ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+