ಬೆಂಗಳೂರಲ್ಲಿ ಗೃಹಿಣಿ ಮೇಲೆ ಆನ್‌ಲೈನ್ ಡೆಲಿವರಿ ಬಾಯ್‌ನಿಂದ ಹಲ್ಲೆ
ಬೆಂಗಳೂರು, ಫೆಬ್ರವರಿ 23: ಆನ್‌ಲೈನ್ ವಸ್ತುಗಳನ್ನು ಡೆಲಿವರಿ ಮಾಡಲು ಬಂದಿದ್ದ ವ್ಯಕ್ತಿಯೊಬ್ಬ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಾಗಿರುವ ಗೃಹಿಣಿ ಆನ್‌ಲೈನ್ ಮೂಲಮ ಡ್ರೆಸ್ ಹಾಗೂ ಮೊಬೈಲ್ ಕವರ್ ಆರ್ಡರ್ ಮಾಡಿದ್ದರು. ಆಕೆ ಒಟ್ಟು 15 ವಸ್ತುಗಳನ್ನು ಆರ್ಡರ್ ಮಾಡಿದ್ದಳು.
ಡೆಲಿವರಿ ನೀಡಲು ಮಧ್ಯಾಹ್ನ ಸುಮಾರು 3.45ರ ಸುಮಾರಿಗೆ ಅವರ ಮನೆಯ ಹತ್ತಿರ ಡೆಲಿವರಿ ಬಾಯ್ ಬಂದಿದ್ದ, ಅವರಿಗೆ 4 ವಸ್ತುಗಳನ್ನು ನೀಡಿದ್ದ ಶುಕ್ರವಾರದೊಳಗೆ ಉಳಿದ ವಸ್ತುಗಳನ್ನು ನೀಡಲು ತಿಳಿಸಿದ್ದರು. ಆತ ಅಷ್ಟಕ್ಕೇ ತಾಳ್ಮೆ ಕಳೆದುಕೊಂಡು ಗೃಹಿಣಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ವಸ್ತುಗಳ ವಿಷಯಕ್ಕೆ ಅವರಿಬ್ಬರ ಮಧ್ಯೆ ಗಲಾಟೆ ನಡೆದಿದೆ, ಅತು ತಾರಕ್ಕೇರಿದಾಗ ಡೆಲಿವರಿ ಬಾಯ್ ಆಕೆಯ ಮೇಲೆ ಕೈಮಾಡಿದ್ದಾನೆ ಆಗ ಅವರು ಕೆಳಗೆ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.












Click it and Unblock the Notifications