ಕೆಂಪೇಗೌಡ ಏರ್ ಪೋರ್ಟ್ ಗೆ ವಾರದಲ್ಲೇ ಎರಡನೇ‌ ಹುಸಿ ಬಾಂಬ್ ಕರೆ

ಬೆಂಗಳೂರು, ಆಗಸ್ಟ್ 28: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳೆದ ಒಂದು ವಾರದ ಹಿಂದೆ ಹಿಂದಷ್ಟೇ ಬಾಂಬ್ ಇರಬಹುದು ಎಂದು ಹುಸಿ ಕರೆ ಮಾಡಿದ್ದ ವ್ಯಕ್ತಿಯೇ ಮತ್ತೆ ಸೋಮವಾರ ಕರೆ ಮಾಡಿ ಬಾಂಬ್ ಇದೆ ಎಂದು ಹೇಳಿ ಆತಂಕ ಸೃಷ್ಟಿಸಿದ್ದ.

ಇತ್ತೀಚೆಗೆ ಕೆಐಎಗೆ ಹುಸಿ ಬಾಂಬ್ ಕರೆ ಹೆಚ್ಚಾಗಿ ಬರುತ್ತಿದೆ. ಆದರೆ ಅದು ಸುಳ್ಳು ಎಂದು ನಿರ್ಲಕ್ಷಿಸುವಂತಿಲ್ಲ, ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಕೆಐಎನ ಪ್ರಯಾಣಿಕರ ಮಾಹಿತಿ ಕೇಂದ್ರಕ್ಕೆ ಮೊಬೈಲ್ ನಿಂದ ಕರೆ ಬಂದಿತ್ತು. ಏರ್ ಏಷಿಯಾ ವಿಮಾನದಲ್ಲಿ ಬಾಂಬ್ ಇರಬಹುದು ಅದು ಸ್ಫೋಟಗೊಳ್ಳಬಹುದು ಎಂದು ಹೇಳಿಕ ಕರೆ ಕಟ್ ಮಾಡಿದ್ದಾನೆ.

ಬಳಿಕ ಕೂಡಲೇ ಭದ್ರತಾ ಸಿಬ್ಬಂದಿಗಳು ಶ್ವಾನದಳ, ಬಾಂಬ್ ಪತ್ತೆ ಯಂತ್ರದೊಂದಿಗೆ ಏರ್ ಏಷಿಯಾ ವಿಮಾನದಲ್ಲಿ ತಪಾಸಣೆ ನಡೆಸಿದ್ದಾರೆ.ಹೀಗಾಗಿ ಏರ್ ಏಷಿಯಾ ವಿಮಾನವು ತಡವಾಗಿ ಪ್ರಯಾಣ ಆರಂಭಿಸಿತು. ಆ.20ರಂದು ಬೆಳಗ್ಗೆ ಪ್ರಯಾಣಿಕರ ಮಾಹಿತಿ ಕೇಂದ್ರಕ್ಕೆ ಕರೆಯೊಂದು ಬಂದಿತ್ತು, ಅದೇ ಮೊಬೈಲ್ ಸಂಖ್ಯೆಯಿಂದ ಸೋಮವಾರವೂ ಕರೆ ಬಂದಿದೆ.

Hoax bomb in KIA again after a week

ಆ.20ರಂದು ಬಂದಿದ್ದ ಫೋನ್ ನಂಬರ್ ಟ್ರ್ಯಾಕ್ ಮಾಡಿ ಆತನ ವಿಳಾಸವನ್ನು ಹುಡುಕಿಕೊಂಡು ಹೋದರೆ ಆತ ಅಲ್ಲಿ ಈಗ ವಾಸಿಸುತ್ತಿಲ್ಲ ಎಂದು ತಿಳಿದುಬಂದಿದೆ. ಮೊಬೈಲ್ ಫೋನ್ ಲೊಕೇಷನ್ ಟ್ರೇಸ್ ಮಾಡಿದಾಗ ರಾಮಮೂರ್ತಿ ನಗರದಿಂದ ಕರೆ ಬಂದಿದೆ ಎಂದು ತಿಳಿದುಬಂದಿದೆ. ಆತನ ಮೊಬೈಲ್ ಸ್ವಿಚ್ಡ್ ಆಗಿದೆ ಹಾಗಾಗಿ ಆತನನ್ನು ಹಿಡಿಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.

ಕಿಡಿಗೇಡಿ ಪತ್ತೆಗೆ ಕುಂದಾಪುರ ಹಾಗೂ ಮೈಸೂರಿನಲ್ಲಿ ಜಾಲಾಡಿ ಮರಳಿದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು, ಇದೀಗ ಬೆಂಗಳೂರುನಗರದಲ್ಲಿ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ. ಕರೆ ಬಂದಿದ್ದ ಮೊಬೈಲ್ ಸಂಖ್ಯೆಯ ಸಿಮ್ ಕುಂದಾಪುರ ತಾಲೂಕಿನ ಶಿವಳ್ಳಿ ಗ್ರಾಮದ ಆದಿತ್ಯ ರಾವ್ ಎಂಬುವವರ ಹೆಸರಿನಲ್ಲಿತ್ತು. ಇದೀಗ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+