ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು, ಫೆಬ್ರವರಿ 13: ವಿಧಾನಸಭಾ ಅಧ್ಯಕ್ಷರಾದ ರಮೇಶ್ ಕುಮಾರ್ ಅವರು ತಮ್ಮ ಮೇಲಿನ ಭ್ರಷ್ಟಾಚಾರ ಆರೋಪವನ್ನು ಅತ್ಯಾಚಾರಕ್ಕೆ ಹೋಲಿಸಿಕೊಂಡಿದ್ದಾರೆ.ಇದರ ಮೂಲಕ ವಿಧಾನಸಭೆಯಲ್ಲಿ ವಿವಾದಿತ ಹಾಗೂ ಹಾಸ್ಯ ಹೇಳಿಕೆಯನ್ನು ನೀಡಿದ್ದಾರೆ.
ನನ್ನ ವಿರುದ್ಧ ಒಮ್ಮೆ ಆರೋಪ ಮಾಡಲಾಗಿತ್ತು ಆದರೆ ಅದನ್ನು ಅಲ್ಲಿಗೆ ಬಿಟ್ಟಿದ್ದರೆ ಇಷ್ಟೊತ್ತಿಗೆ ಮುಗಿಯುತ್ತಿತ್ತೇನೋ ಆದರೆ ನಾನು ಆ ವಿಚಾರ ಇಲ್ಲಿಗೆ ತಂದು ಪದೇ ಪದೇ ಆ ಪ್ರಕರಣವನ್ನು ನೆನಪಿಸಿದಂತಾಗುತ್ತದೆ ಇದು ಅತ್ಯಾಚಾರ ಸಂಸ್ತ್ರಸ್ತೆ ಸ್ಥಿತಿಯಂತಾಗಿದೆ.

ಒಮ್ಮೆ ಅತ್ಯಾಚಾರವಾಗಿದ್ದರೆ ಸಂಸ್ತ್ರಸ್ತೆ ಒಮ್ಮೆ ದೂರು ನೀಡಿ ಕೋರ್ಟ್‌ಗೆ ಹೋದ ಬಳಿಕ ಆರೋಪಿ ಪರ ವಕೀಲರು ವಿಚಾರಣೆ ಸಂದರ್ಭದಲ್ಲಿ ಇನ್ನಷ್ಟು ಬಾರಿ ಅತ್ಯಾಚಾರ ಆದಂತಹ ಅನುಭವ ವಿಚಾರಣೆ ಸಂದರ್ಭದಲ್ಲಾಗುತ್ತದೆ. ಹೇಗೆ ಅತ್ಯಾಚಾರವಾಯಿತು, ಎಲ್ಲಿ ಅತ್ಯಾಚಾರವಾಯಿತು, ಯಾವ ಸಮಯಕ್ಕೆ ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಪದೇ ಪದೇ ಕೇಳುತ್ತಾರೆ. ಇದೇ ಸ್ಥಿತಿ ನನ್ನದೂ ಆಗಿದೆ ಎಂದು ವಿಡಂಬನಾತ್ಮಕವಾಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಅತ್ಯಾಚಾರವಾಗಿದ್ದು ಒಂದೇ ಸಲ ಸುಮ್ಮನಿದ್ದರೆ ಹೊರಟು ಹೋಗುತ್ತಿತ್ತು ಆದರೆ ಪೊಲೀಸ್ ಗೆ ದೂರು ನೀಡಿದ ಬಳಿಕ ಆರೋಪಿಯನ್ನು ಜೈಲಿಗೆ ಹಾಕ್ತಾರೆ, ಆರೋಪಿ ಪರ ವಕೀಲ ಕೇಳುವ ಪ್ರಶ್ನೆಗಳಿಗೆ ನೂರು ಬಾರಿ ಅತ್ಯಾಚಾರವಾದಂತಹ ಅನುಭವವಾಗುತ್ತದೆ, ಕೊನೆಗೆ ನ್ಯಾಯ ಸಿಗೊತ್ತೋ ಬಿಡುತ್ತೋ ಗೊತ್ತಿಲ್ಲ ಆದರೆ ನೋವು ಮಾತ್ರ ಆಗುತ್ತೆ, ಇಬ್ಬರೂ ಸೇರಿ ನನ್ನ ಬೀದಿಯಲ್ಲಿ ಮಲಗಿಸಿದಂತಾಗಿದೆ ಎಂದು ಹೇಳಿದರು.












Click it and Unblock the Notifications