ನಂಜನಗೂಡು ಉಪಚುನಾವಣೆ ಪ್ರಚಾರಕ್ಕೆ ಬಿಜೆಪಿ ಹಿಂದಿ ಬಳಕೆಗೆ ಆಕ್ರೋಶ

ನಂಜನಗೂಡು ಉಪಚುನಾವಣೆಗೆ ಬಿಜೆಪಿಯು ಹಿಂದಿ ಪೋಸ್ಟರ್ ಬಳಸಿದೆ ಎಂಬ ವಿಚಾರದ ಬಗ್ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ಹಲವರು ಸಮರ್ಥನೆ ಮಾಡಿಕೊಂಡಿದ್ದಾರೆ

ಬೆಂಗಳೂರು, ಏಪ್ರಿಲ್ 4: ಬಿಜೆಪಿಯ ಹಿಂದಿ ಪ್ರೇಮದ ಬಗ್ಗೆ ಇದೀಗ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅದೇನು ಹಿಂದಿ ಪ್ರೇಮ, ಅದೇಕೆ ಆಕ್ರೋಶ ಅಂತೀರಾ? ನಂಜನಗೂಡು ಉಪಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವರ ಪರವಾಗಿ ಮತ ಯಾಚಿಸುವ ಪೋಸ್ಟರ್ ವೊಂದು ಹಿಂದಿಯಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಪಿಎಲ್ ಇ ಕರ್ನಾಟಕ ಟ್ವಿಟ್ಟರ್ ನಲ್ಲಿ ಪ್ರಸ್ತಾವ ಮಾಡಿದ್ದು, ಇದು ನಾಚಿಕೆಗೇಡಿತನದ ಪರಮಾವಧಿ ಎಂದು ಆಕ್ರೋಶ ಹೊರಹಾಕಲಾಗಿದೆ. ಆದರೆ ಈ ಟ್ವೀಟ್ ಗೆ ಅಸಮಾಧಾನ ವ್ಯಕ್ತಪಡಿಸಿ ಹಲವರು ಪ್ರತಿಕ್ರಿಯಿಸಿದ್ದಾರೆ.[ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಸ್ಟಾಲಿನ್]

Hindi poster by BJP for Nanjangud by election, condemns in Twitter

ಏಕೆಂದರೆ ಹಿಂದಿ ನಮ್ಮ ರಾಷ್ಟ್ರ ಭಾಷೆ. ಸಂಕುಚಿತ ಮನೋಭಾವದಿಂದ ವರ್ತಿಸಬೇಡಿ. ಕರ್ನಾಟಕವನ್ನು ಮತ್ತೊಂದು ತಮಿಳುನಾಡು ಮಾಡಬೇಡಿ
-ಶೇಖರ್ ಪಾಟೀಲ್ 56 ಇಂಚ್

ಯಾವ ಶಾಲೆ ನಿಮಗೆ ಇದನ್ನು ಕಲಿಸಿದ್ದು? ಭಾರತದ ಬಗ್ಗೆ ಕೆಲವು ಮಾಹಿತಿ ತಿಳಿದುಕೊಳ್ಳಿ. ಇಲ್ಲದಿದ್ದರೆ ಮುಂದೆ ನಿಮ್ಮ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಹೇಳೋಕೆ ಆಗಲ್ಲ.
-ಸಂತೋಷ್ ಕೆರೆಮನೆ

ನನಗೆ ನಿಮ್ಮ ಜತೆ ಹೆಚ್ಚು ಮಾತನಾಡೋಷ್ಟು ಸಮಯ ಇಲ್ಲ. ಒಂದಂತೂ ಸ್ಪಷ್ಟ. ನಾವು ಮೊದಲು ವಿಶಾಲವಾಗಿ ಯೋಚಿಸಬೇಕು. ಬಾವಿಯೊಳಗಿನ ಕಪ್ಪೆ ಹಾಗಲ್ಲ.
-ಶೇಖರ್ ಪಾಟೀಲ್ 56 ಇಂಚ್

ಟ್ವಿಟ್ಟರ್ ನ ಪ್ರತಿಕ್ರಿಯೆ ಹೀಗೇ ಮುಂದುವರಿಯುತ್ತದೆ. ಅಂದಹಾಗೆ, ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನು ತಿಳಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+