• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗೆ ಭಾರಿ ಬೇಡಿಕೆ

|

ಬೆಂಗಳೂರು, ಸೆಪ್ಟೆಂಬರ್ 16 : ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಸೆ. 7ರಿಂದ ಮೆಟ್ರೋ ರೈಲು ಸೇವೆ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಸ್ಮಾರ್ಟ್ ಕಾರ್ಡ್‌ ಇದ್ದವರು ಮಾತ್ರ ಸಂಚಾರ ನಡೆಸಬಹುದಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಬಿಎಂಆರ್‌ಸಿಎಲ್ ನೀಡಿರುವ ಮಾಹಿತಿಯಂತೆ ಸೆ. 7ರಿಂದ 15ರ ತನಕ 15,150 ಹೊಸ ಸ್ಮಾರ್ಟ್ ಕಾರ್ಡ್‌ ಖರೀದಿ ನಡೆದಿದೆ. ಸೆ. 11ರ ನಂತರ ಅಂದರೆ ಮೆಟ್ರೋ ಸಂಚಾರ ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ಆರಂಭವಾದ ಬಳಿಕ ಕಾರ್ಡ್ ಹೆಚ್ಚು ಖರೀದಿಯಾಗಿದೆ.

ಮೊದಲ ದಿನ ನಮ್ಮ ಮೆಟ್ರೋದಲ್ಲಿ ಸಂಚಾರ ನಡೆಸಿದವರೆಷ್ಟು?

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ಟೋಕನ್ ನೀಡುವ ವ್ಯವಸ್ಥೆ ರದ್ದುಗೊಳಿಸಿದೆ. ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಬೇಕಾದರೆ ಕಡ್ಡಾಯವಾಗಿ ಸ್ಮಾರ್ಟ್ ಕಾರ್ಡ್‌ ಹೊಂದಿರಬೇಕು. ಆದ್ದರಿಂದ, ಕಾರ್ಡ್‌ ಖರೀದಿ ಮಾಡುವುದು ಅನಿವಾರ್ಯವಾಗಿದೆ.

5 ತಿಂಗಳ ಬಳಿಕ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ

ಲಾಕ್ ಡೌನ್ ಘೋಷಣೆ ಬಳಿಕ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಸುಮಾರು 5 ತಿಂಗಳ ಕಾಲ ಮೆಟ್ರೋ ಸಂಚಾರ ರದ್ದಾಗಿದ್ದರಿಂದ ಬಿಎಂಆರ್‌ಸಿಎಲ್‌ಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಈಗ ಪುನಃ ಸಂಚಾರ ಆರಂಭವಾಗಿದ್ದು, ಸಂಸ್ಥೆಗೆ ಆದಾಯ ಹರಿದುಬರುತ್ತಿದೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್‌ ಕಾರ್ಡ್ ರಿಚಾರ್ಜ್ ಮಾಡುವಂತಿಲ್ಲ

12 ಲಕ್ಷ ರೂ. ಆದಾಯ

12 ಲಕ್ಷ ರೂ. ಆದಾಯ

ಸೆಪ್ಟೆಂಬರ್ 14ರ ಸೋಮವಾರ ನಮ್ಮ ಮೆಟ್ರೋದಲ್ಲಿ 35,226 ಜನರು ಸಂಚಾರ ನಡೆಸಿದ್ದಾರೆ. ಇದರಿಂದಾಗಿ 12 ಲಕ್ಷ ರೂ. ಆದಾಯ ಬಂದಿದೆ. ಇದರಲ್ಲಿ 5.19 ಲಕ್ಷ ರೂ. ಕೇವಲ ರಿಚಾರ್ಜ್‌ನಿಂದಾಗಿ ಬಂದಿದೆ.

ಸೆ. 11ರಿಂದ ಇಡೀ ದಿನ ಮೆಟ್ರೋ

ಸೆ. 11ರಿಂದ ಇಡೀ ದಿನ ಮೆಟ್ರೋ

ನಮ್ಮ ಮೆಟ್ರೋ ರೈಲು ಸಂಚಾರ ಸೆ. 7ರಂದು ನೇರಳೆ ಮಾರ್ಗದಲ್ಲಿ ಆರಂಭವಾಗಿತ್ತು. ಸೆ. 9ರಿಂದ ಹಸಿರು ಮಾರ್ಗದಲ್ಲಿ ಆರಂಭವಾಯಿತು. ಸೆ.11ರಿಂದ ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ರೈಲು ಓಡಿಸಲಾಯಿತು. ಮೊದಲ ದಿನ 29,114 ಜನರು ಸಂಚಾರ ನಡೆಸಿದರು.

ಪ್ರಯಾಣಿಕರ ಸಂಖ್ಯೆ ಕಡಿಮೆ

ಪ್ರಯಾಣಿಕರ ಸಂಖ್ಯೆ ಕಡಿಮೆ

ಲಾಕ್ ಡೌನ್‌ಗೂ ಮೊದಲು ಪ್ರತಿದಿನ ಸುಮಾರು 4 ಲಕ್ಷ ಜನರು ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದರು. ಈಗ ಪ್ರತಿ ರೈಲಿನಲ್ಲಿ 400 ಜನರು ಮಾತ್ರ ಸಂಚಾರ ನಡೆಸಬೇಕು, ಒಮ್ಮೆ ನಿಲ್ದಾಣಕ್ಕೆ 50 ಜನರು ಮಾತ್ರ ಬರಬೇಕು, ಸ್ಮಾರ್ಟ್‌ ಕಾರ್ಡ್ ಕಡ್ಡಾಯ ಸೇರಿದಂತೆ ಹಲವಾರು ಷರತ್ತುಗಳನ್ನು ಹಾಕಲಾಗಿದೆ.

ನೇಮಕಾತಿ ವಿಳಂಬ?

ನೇಮಕಾತಿ ವಿಳಂಬ?

ಲಾಕ್ ಡೌನ್ ಘೋಷಣೆಗೂ ಮುನ್ನ ಅಂದರೆ ಫೆಬ್ರವರಿಯಲ್ಲಿ ಬಿಎಂಆರ್‌ಸಿಎಲ್ 174 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿತ್ತು. ಆದರೆ, ಈಗ ಸಂಸ್ಥೆಗೆ ಆದಾಯ ಕೊರತೆ ಆಗಿರುವುದರಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವ ನಿರೀಕ್ಷೆ ಇದೆ.

English summary
High demand for Namma Metro smart card. From September 7 t0 15 total 15,150 new card purchased by people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X