ವಾಟ್ಸಾಪ್‌ನಲ್ಲಿ ದೇಶವಿರೋಧಿ ಮೆಸೇಜ್: ಆರೋಪಿಗಳಿಗೆ ಜಾಮೀನು ನಿರಾಕರಣೆ
ಬೆಂಗಳೂರು, ಜನವರಿ 29: ವಾಟ್ಸಾಪ್ ಗ್ರೂಪ್‌ನಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಮೆಸೇಜ್ ಹಾಕಿದ್ದ ಮೂವರು ವ್ಯಕ್ತಿಗಳಿಗೆ ಕರ್ನಾಟಕ ಹೈಕೋರ್ಟ್ ಇಂದು ಜಾಮೀನು ನಿರಾಕರಿಸಿದೆ.
ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಹೈಕೋರ್ಟ್, ಸಂದೇಶ ಕೆಲ ಸಾಲಷ್ಟೆ ಇರಬಹುದು ಆದರೆ ಅದು ಉಂಟುಮಾಡುವ ಪರಿಣಾಮ ದೊಡ್ಡದು ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನ್ಯಾಯಾಧೀಶ ಸುಧೀಂದ್ರರಾವ್ ಹೇಳಿದರು.
ಆಗಸ್ಟ್ 14 ರಂದು ವಾಟ್ಸ್‌ಆಪ್ ಗ್ರೂಫ್ ಒಂದಕ್ಕೆ ಮುಸ್ತಾಫಾ, ಶಬೀರ್ ಪಾಷಾ ಮತ್ತು ಚಾಂದ್ ಪಾಷಾ ಎಂಬುವರು 'ಪಾಕಿಸ್ತಾನ ಜಿಂದಾಬಾದ್' ಎಂದು ಮೆಸೆಜ್ ಮಾಡಿದ್ದರು.

ಇದನ್ನು ಗಮನಿಸಿದ ಹನುಮನಗೌಡ ಎಂಬಾತ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ರಾಜದ್ರೋಹದ ಅಡಿ ಕೇಸು ದಾಖಲಿಸಿಕೊಂಡು ಮೂವರನ್ನೂ ಬಂಧಿಸಿದ್ದರು.
ಸ್ಥಳೀಯ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ತಿರಸ್ಕರಿಸಿತ್ತು. ಹಾಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು ಆದರೆ ಹೈಕೋರ್ಟ್ ಸಹ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.












Click it and Unblock the Notifications