ಹೊಸ ವರ್ಷದಂದು ಮದ್ಯಕ್ಕೆ ಅಡ್ಡಿ ಇಲ್ಲ: ಹೈಕೋರ್ಟ್ ಗ್ರೀನ್ ಸಿಗ್ನಲ್
ಬೆಂಗಳೂರು, ಡಿಸೆಂಬರ್ 15 : ಹೊಸ ವರ್ಷಾಚರಣೆ ವೇಳೆ ಯಾವುದೇ ರೀತಿಯ ಅಸಂಬದ್ಧ ಘಟನೆ ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಹೈಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸಿದ್ದಾರೆ.
ಒಂದೂ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ಹೈಕೋರ್ಟ್ ಗೆ ಪ್ರಮಾಣ ಸಲ್ಲಿಕೆ ಮಾಡಿದ್ದಾರೆ.

ಮಹಿಳಾ ಪೊಲೀಸ್ ನಿಯೋಜನೆ, 19 ಡಿಸಿಪಿ, 49 ಎಸಿಪಿ, 422 ಪಿಎಸ್ ಐ, 1 ಸಾವಿರ ಹೋಮ್ ಗಾರ್ಡ್ಸ್,1 ಸಾವಿರ ಕೆಎಸ್ ಆರ್ ಪಿ, 205 ಪೊಲೀಸ್ ಇನ್ಸ್ ಪೆಕ್ಟರ್ ಗಳು, ಬಾಂಬ್ ನಿಷ್ಕ್ರಿಯ ದಳ ಸೇರಿ ಒಟ್ಟು 8 ಸಾವಿರ ಪೊಲೀಸರ ನಿಯೋಜನೆ ಮಾಲಾಗಿದೆ ಎಂದು ಎಎಜಿ ಪೊನ್ನಣ್ಣ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತೆ ನೀಡಲಾಗುತ್ತದೆ. ಬ್ರಿಗೆಡ್ ರಸ್ತೆ ಮತ್ತು ಎಂಜಿ ರಸ್ತೆಯಲ್ಲಿ ಬಿಗಿ ಭದ್ರತೆ ನೀಡಲಾಗುತ್ತದೆ. ಡಿಸೆಂಬರ್ 31 ರ ಸಂಜೆ 4 ರಿಂದ ಜನವರಿ 2018ರ ಮುಂಜಾನೆವರೆಗೆ ಭದ್ರತೆ ನೀಡಲಾಗುತ್ತದೆ.
ರಾತ್ರಿ 11 ರ ನಂತರ ಫ್ಲೈ ಓವರ್ ಮೇಲೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಅದರೊಂದಿಗೆ ಹೆಚ್ಚುವರಿ ಬೆಳಕು ವ್ಯವಸ್ಥೆ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಅಫಿಡೆವಿಟ್ ಸಲ್ಲಿಸಿದ್ದಾರೆ.












Click it and Unblock the Notifications